ಧೂಮಪಾನ ಮದ್ಯಪಾನ ಆರೋಗ್ಯಕ್ಕೆ ತುಂಬಾನೇ ಹಾನಿಕರ ಎಂಬ ಮಾತುಗಳನ್ನು ನೀವು ಕೇಳಿರುತ್ತೀರಿ. ಆದ್ರೆ ಇಲ್ಲೊಂದು ವಿಚಿತ್ರ ಪದ್ಧತಿ ನಡೆಯುತ್ತಿದೆ. ಇಲ್ಲಿ ಹುಡುಗ ಸಿಗರೇಟ್ ಸೇದಿದರೆ ಮಾತ್ರ ಹುಡುಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡ್ತಾರೆ. ಪ್ರತಿಯೊಂದು ಜಾಗದಲ್ಲೂ ಅವರವರ ಆಚಾರಕ್ಕೆ ತಕ್ಕಂತೆ ಮದುವೆಯ ಆಚರಣೆ ಬದಲಾಗುತ್ತದೆ. ಇಲ್ಲೊಂದು ಸ್ಥಳದಲ್ಲಿ ಮದುವೆ ಮಾಡಿಕೊಳ್ಳುವಂತಹ ಪದ್ಧತಿಯೇ ವಿಚಿತ್ರವಾಗಿದ್ದು,
ಹೆಣ್ಣುಮಕ್ಕಳಿಗೆ ಪೋಷಕರು ಒಳ್ಳೆಯ ಹುಡುಗನನ್ನ ಹುಡುಕುವಾಗ ಅವನಿಗೆ ಯಾವುದಕ್ಕೆ ಕೆಟ್ಟ ಚಟ ಇಲ್ಲದಂತಹ ಹುಡುಗನನ್ನು ಅಳಿಯನಾಗಿ ಸ್ವೀಕರಿಸುತ್ತಾರೆ. ಆದರೆ ಇಲ್ಲಿ ಮಾತ್ರ ಮದುವೆಯ ಸಂದರ್ಭದಲ್ಲಿ ಅಳಿಯನಿಗೆ ಸಿಗ’ರೇಟ್ ಕೊಟ್ಟು ದಮ್ ಹೊಡೆಯುವಂತೆ ಹೇಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಮದುವೆ ಮನೆಯಲ್ಲಿ ಅತ್ತೆ ಹಾಗೂ ಮಾವ ಇಬ್ಬರೂ ಕೂಡ ಹುಡುಗನಿಗೆ ಸಿಗರೇಟ್ ಕೊಟ್ಟು ಆ ಹುಡುಗ ಸಿಗ’ರೇಟ್ ಸೇದಿದ ನಂತರ ಮಾವ ಹಾಗೂ ಅತ್ತೆ ಇಬ್ಬರಿಗೂ ಕೂಡ ಸ್ವಲ್ಪ ಹಣವನ್ನು ನೀಡುತ್ತಾನೆ. ಈ ವಿಡಿಯೋ ನೋಡಿ ನೆಟ್ಟಿಗರು ಇದೆಂತಹ ವಿಚಿತ್ರ ಮದುವೆ ಪದ್ಧತಿ ಎಂಬುದಾಗಿ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರುವ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA