ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ತಮ್ಮ ಭೇಟಿಗೆ ಬರುವ ಜನ ಆಧಾರ್ ಕಾರ್ಡ್ ತರುವಂತೆ ಹೇಳಿರುವ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಾಣಾವತ್ ವಿವಾದ ಸೃಷ್ಟಿಸಿದ್ದಾರೆ.
ತಮ್ಮ ಭೇಟಿಗೆ ಕಾದು ನಿಂತಿದ್ದ ಜನರಿಗೆ ಭೇಟಿಯ ಬದಲು ಬಂದ ಕಾರಣವನ್ನು ಲಿಖಿತವಾಗಿ ನೀಡುವಂತೆಯೂ ನಟಿ ತಿಳಿಸಿದ್ದಾರೆ. ದೊಡ್ಡ ಸಂಖ್ಯೆಯ ಪ್ರವಾಸಿಗಳು ಮತ್ತು ಹೊರಗಿನವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಂಡಿಯಲ್ಲಿ ಇರುವಾಗಲೆಲ್ಲ ನಿಯೋಜಿತ ಸಂವಾದ ಕೇಂದ್ರಗಳಲ್ಲಿ ಸಂದರ್ಶಕರನ್ನು ಭೇಟಿ ಮಾಡಲು ಲಭ್ಯವಿರುವುದಾಗಿ ತಿಳಿಸಿದ್ದಾರೆ.
“ಹಿಮಾಚಲ ಪ್ರದೇಶದ ದೊಡ್ಡ ಸಂಖ್ಯೆಯ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಆದ್ದರಿಂದ ಮಂಡಿ ಪ್ರದೇಶದ ಒಂದು ಆಧಾರ್ ಕಾರ್ಡ್ ತರುವುದು ಅಗತ್ಯ. ಕ್ಷೇತ್ರದಲ್ಲಿ ನಿಮ್ಮ ಕೆಲಸದ ಸಂಬಂಧದ ವಿವರವನ್ನು ಒಂದು ಪತ್ರದಲ್ಲಿ ಲಿಖಿತವಾಗಿ ನೀಡಬೇಕು. ಆದ್ದರಿಂದ ಯಾವುದೇ ಅನಾನುಕೂಲವಾಗದಂತೆ ಎಚ್ಚರ ವಹಿಸಬೇಕು” ಎಂದು ತಿಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA