ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಪ್ರಮುಖ ಆರೋಪಿ ಜಲಾಲ್ ನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಓಮನ್ ದೇಶಕ್ಕೆ ಹೋಗಿರುವ ಜಲಾನ್, 1.50 ಲಕ್ಷ ನೀಡಿ ಪಾಸ್ ಪೋರ್ಟ್ ಪಡೆದುಕೊಂಡಿದ್ದನೆಂಬ ಸಂಗತಿ ಪತ್ತೆ ಮಾಡಿದ್ದಾರೆ.
ಶ್ರೀಲಂಕಾದ ಜಲಾಲ್ ಅಲಿಯಾಸ್ ಸಿದ್ದಿಕಿ, ಡ್ರಗ್ಸ್ ಪೆಡ್ಲರ್. ಜೊತೆಗೆ, ಅಪರಾಧ ಹಿನ್ನೆಲೆಯುಳ್ಳವ. ಜೈಲಿನಿಂದ ಪರಾರಿಯಾಗಿದ್ದ ಈತ, ನಕಲಿ ದಾಖಲೆ ನೀಡಿ ಪಾಸ್ ಪೋರ್ಟ್ ಪಡೆದು ಓಮನ್ ದೇಶಕ್ಕೆ ಹೋಗಿದ್ದಾನೆ.


