nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ

    October 17, 2026

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!

    October 17, 2026

    50 ಸಾವಿರ ಲಂಚ ಸ್ವೀಕಾರ: ಎಫ್‌ ಡಿಎ ಸಹಾಯಕ ಲೋಕಾ ಬಲೆಗೆ

    October 17, 2026
    Facebook Twitter Instagram
    ಟ್ರೆಂಡಿಂಗ್
    • ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ
    • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!
    • 50 ಸಾವಿರ ಲಂಚ ಸ್ವೀಕಾರ: ಎಫ್‌ ಡಿಎ ಸಹಾಯಕ ಲೋಕಾ ಬಲೆಗೆ
    • ಎಸ್ ಐಆರ್ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಆರೋಪ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
    • ತುಮಕೂರು ಸ್ಕ್ವೇರ್ ಹೆಸರಿಗೆ ಭಕ್ತರು, ಶ್ರೀಗಳ ವಿರೋಧ: ಡಾ.ಶ್ರೀ ಶಿವಕುಮಾರಸ್ವಾಮೀಜಿ ಸ್ಕ್ವೇರ್’ ಎಂದೇ ಹೆಸರಿಸಲು ಆಗ್ರಹ
    • ಕುಣಿಗಲ್‌ ಉತ್ಸವಕ್ಕೆ ಸರ್ಕಾರದ ಹಣ ಬಳಸಿಲ್ಲ: ಜೆಡಿಎಸ್‌ ಅಧ್ಯಕ್ಷ ಬಿ.ಎನ್‌. ಜಗದೀಶ್‌ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು
    • ಎಲ್ ನಿನೋ ಭೀತಿ: 10 ತಿಂಗಳು ನೀರಿನ ಬಿಕ್ಕಟ್ಟು? ರೈತರಿಗೆ ಇಲ್ಲಿದೆ ಮುಖ್ಯ ಸೂಚನೆ
    • ಕಿಡ್ನಿ ಸ್ಟೋನ್ಸ್ ತಡೆಯಲು ಎಷ್ಟು ನೀರು ಕುಡಿಯಬೇಕು? ಯಾವ ಆಹಾರಗಳನ್ನು ಸೇವಿಸಬೇಕು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ : ಸಚಿವ ಡಾ.ಜಿ.ಪರಮೇಶ್ವರ
    ತುಮಕೂರು February 24, 2025

    ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ : ಸಚಿವ ಡಾ.ಜಿ.ಪರಮೇಶ್ವರ

    By adminFebruary 24, 2025No Comments2 Mins Read
    kdp meeting

    ತುಮಕೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ತೋರಬಾರದು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.

    ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 2024–25ನೇ ಸಾಲಿನ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಯೋಜನೆಗಳ ಕುರಿತು ಮಾಹಿತಿ ನೀಡುತ್ತಾ, ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 2023ರಿಂದ ಅಕ್ಟೋಬರ್ 2024ರವರೆಗೆ 90,38,371 ಫಲಾನುಭವಿಗಳಿಗೆ ಒಟ್ಟು 1807.67 ಕೋಟಿ ರೂ. ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2023 ಜೂನ್‌ನಿಂದ ಜನವರಿ 2025ರವರೆಗೆ 1164.14 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ಒಟ್ಟು ಆದಾಯ 34184.97 ಲಕ್ಷ ರೂ.ಗಳಾಗಿದೆ. ಯುವನಿಧಿ ಯೋಜನೆಯಲ್ಲಿ ಜನವರಿ 2025 ಅಂತ್ಯಕ್ಕೆ 7743 ಯುವಜನರು ನೋಂದಣಿಯಾಗಿದ್ದು, 5425 ಜನರಿಗೆ ಡಿಬಿಟಿ ಮೂಲಕ 7.60,83,000 ರೂ. ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಸೆಪ್ಟೆಂಬರ್ 2024ರವರೆಗೆ 6,08,446 ಪಡಿತರ ಚೀಟಿಗಳಿಗೆ ಒಟ್ಟು 509,43,46,990 ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 2023 ರಿಂದ ನವೆಂಬರ್ 2024 ರವರೆಗೆ 802093 ಫಲಾನುಭವಿ ಗೃಹ ಬಳಕೆ ಸ್ಥಾವರಗಳಿಗೆ 343.13 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

    ನಂತರ ಗೃಹ ಸಚಿವರು ಮಾತನಾಡಿ, ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಿಗೆ ತಮ್ಮ ಸವಲತ್ತುಗಳನ್ನು ಅಧಿಕಾರಿಗಳು ವಿಳಂಬ ಮಾಡದೆ ಪಾವತಿ ಮಾಡಬೇಕೆಂದರು.

    ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬ್ಯಾಚ್–1 ರಿಂದ 4ರವರೆಗೂ ಒಟ್ಟು 3699 ಕಾಮಗಾರಿಗಳಿದ್ದು, ಇವುಗಳಿಗೆ 2976 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, 800 ಕಾಮಗಾರಿ ಪೂರ್ಣಗೊಂಡಿದ್ದು, 1555 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಬಾಕಿ ಇರುವ ಕಾಮಗಾರಿಗಳನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಕುಡಿಯುವ ನೀರು, ವಿದ್ಯುಚ್ಛಕ್ತಿ, ಬೆಳೆ ವಿಮೆ, ಇವುಗಳನ್ನು ಆದ್ಯತೆ ಮೇರೆಗೆ ಜನರಿಗೆ ನೀಡಬೇಕೆಂದು ತಾಕೀತು ಮಾಡಿದರು.

    ಆರೋಗ್ಯ ಸೇವೆ ನೀಡುವಲ್ಲಿ ಸಹ ಜಿಲ್ಲೆ ಪ್ರಗತಿ ಸಾಧಿಸಿ ಗರ್ಭಿಣಿ, ಬಾಣಂತಿಯರ ಸವಲತ್ತುಗಳನ್ನು ಕಾಲಕಾಲಕ್ಕೆ ನೀಡಬೇಕೆಂದರು.

    ಸಭೆಯಲ್ಲಿ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ತುರುವೇಕೆರೆ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಪ್ರಭು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ತುಮಕೂರು ಸ್ಕ್ವೇರ್ ಹೆಸರಿಗೆ ಭಕ್ತರು, ಶ್ರೀಗಳ ವಿರೋಧ: ಡಾ.ಶ್ರೀ ಶಿವಕುಮಾರಸ್ವಾಮೀಜಿ ಸ್ಕ್ವೇರ್’ ಎಂದೇ ಹೆಸರಿಸಲು ಆಗ್ರಹ

    October 17, 2026

    ತುಮಕೂರು: ಅ.17ರಂದು ದಸರಾ ಕವಿಗೋಷ್ಠಿ

    October 16, 2026

    ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ – ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನೇತೃತ್ವದಲ್ಲಿ ಪರಿಶೀಲನಾ ಸಭೆ

    October 16, 2026

    Comments are closed.

    Our Picks

    ಎಲ್ ನಿನೋ ಭೀತಿ: 10 ತಿಂಗಳು ನೀರಿನ ಬಿಕ್ಕಟ್ಟು? ರೈತರಿಗೆ ಇಲ್ಲಿದೆ ಮುಖ್ಯ ಸೂಚನೆ

    October 17, 2026

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ

    October 17, 2026

    ಕೊರಟಗೆರೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸುವುದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ವಿನ ಕ್ರೀಡಾಪಟುಗಳು ರೂಪುಗೊಳ್ಳಲು ಸಾಧ್ಯ. ಗ್ರಾಮೀಣ ಕ್ರೀಡೆಗಳು ಜೀವಂತವಾಗಿದ್ದಾಗ…

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!

    October 17, 2026

    50 ಸಾವಿರ ಲಂಚ ಸ್ವೀಕಾರ: ಎಫ್‌ ಡಿಎ ಸಹಾಯಕ ಲೋಕಾ ಬಲೆಗೆ

    October 17, 2026

    ಎಸ್ ಐಆರ್ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಆರೋಪ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ

    October 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.