ರಾಜ್ಯದ ವಿವಿಧ ಭಾಗಗಳ ಕಲೆ, ಸಂಸ್ಕೃತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಲೆ & ಸಂಸ್ಕೃತಿ ಪಠ್ಯದ ಮುಖ್ಯ ಭಾಗವಾಗಬೇಕು.
ಮಲೆನಾಡಿನ ಸಂಸ್ಕೃತಿಯನ್ನು ಬಯಲುಸೀಮೆ, ಕರಾವಳಿ ವಿದ್ಯಾರ್ಥಿಗಳು, ಬಯಲುಸೀಮೆಯ ಕಲೆ, ಸಂಸ್ಕೃತಿಯನ್ನು ಇತರೆ ಭಾಗಗಳ ವಿದ್ಯಾರ್ಥಿಗಳು ಕಲಿಯಬೇಕು. ಆಹಾರ ಸಂಸ್ಕೃತಿಯ ಪರಿಚಯವಾಗಬೇಕು.
ಹಾಗಾಗಿ ಇಂತಹ ಸಾಂಸ್ಕೃತಿಕ ಪರಿಚಯವನ್ನು ಎಸ್ ಇ ಪಿಯಲ್ಲಿ ಅಳವಡಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.


