ತುಮಕೂರು: ಉದ್ಯೋಗದಾತರ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ಇದರ ಹಿಂದಿನ ಪಾವತಿಗಳನ್ನು ಕ್ರಮಬದ್ಧಗೊಳಿಸಲು ನವೆಂಬರ್ 1ರಿಂದ ಏಪ್ರಿಲ್ 30ರವರೆಗೆ 6 ತಿಂಗಳ ಅವಧಿಯಲ್ಲಿ “ನೌಕರರ ದಾಖಲಾತಿ ಅಭಿಯಾನ – 2025” (EEC – 2025) ನಡೆಸಲಾಗುತ್ತಿದ್ದು, ಈ ಸಂಬಂಧ ತುಮಕೂರಿನ ಕೈಗಾರಿಕಾ ಪ್ರದೇಶ ವಸಂತನರಸಾಪುರದ ಇಂಡಿಯನ್ ಫುಡ್ ಪಾರ್ಕ್(India Food Park) ನಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಈ ಕೆಳಗಿನ ಮಾಹಿತಿಯನ್ನು ಹಂಚಿಕೊಳ್ಳಲಾಯಿತು:
ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ ಯೋಜನೆ (PMVBRY)
ಭಾಗ : ಎ
ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹಧನ
» ತಿಂಗಳಿನ ವೇತನ (ಮೂಲ + DA ) ಕ 15,000 ವರೆಗೆ ಒಂದು ಬಾರಿ ಪ್ರೋತ್ಸಾಹಧನ, 2 ಕಂತುಗಳಲ್ಲಿ
> 6 ತಿಂಗಳ ಸೇವೆಯ ನಂತರ ಪ್ರಥಮ ಕಂತಿನ ಪಾವತಿ
12 ತಿಂಗಳ ಸೇವೆಯ ನಂತರ ಮತ್ತು EPFO ಪೋರ್ಟಲ್‌ನಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ದ್ವಿತೀಯ ಕಂತಿನ ಪಾವತಿ
> ಅರ್ಹತೆಯ ಮಾನದಂಡಗಳು:
» EPFO ಗೆ ಮೊದಲ ಬಾರಿಗೆ ನೋಂದಾಯಗೊಳ್ಳುವ ಉದ್ಯೋಗಿಗಳು
> ಮಾಸಿಕ ಒಟ್ಟು ಸಂಬಳಕ್ಕೆ 1 ಲಕ್ಷ ವರೆಗೆ
UMANG App ಬಳಸಿ ಮುಖ ದೃಢೀಕರಣ ತಂತ್ರಜ್ಞಾನದ(FAT) ಮೂಲಕ UAN ದೃಢೀಕರಣ > 6 ತಿಂಗಳು / 12 ತಿಂಗಳ ಕಾಲ ಸಂಸ್ಥೆಯು ECR * ಸಲ್ಲಿಸಬೇಕು
ಭಾಗ : ಬಿ
ಉದ್ಯೋಗದಾತರಿಗೆ ಬೆಂಬಲ
» ಪ್ರೋತ್ಸಾಹ: ಉದ್ಯೋಗವನ್ನು ಕನಿಷ್ಠ 6 ತಿಂಗಳು ನಿರಂತರವಾಗಿ ನೀಡಿದ ಪ್ರತಿಯೊಬ್ಬ ಹೆಚ್ಚುವರಿ ಉದ್ಯೋಗಿಗೆ ತಿಂಗಳಿಗೆ 73,000 ವರೆಗೆ ಧನ ಸಹಾಯ
> ಅರ್ಹತೆಯ ಮಾನದಂಡಗಳು:
> EPFO ಗೆ ನೋಂದಾಯಗೊಂಡ ಎಲ್ಲಾ ಸಂಸ್ಥೆಗಳು (ವಿನಾಯಿತಿ ಪಡೆದ ಸಂಸ್ಥೆಗಳು ಸಹ ಸೇರಿದೆ) > ಕನಿಷ್ಠ ನೇಮಕಾತಿ ಅಗತ್ಯ:
» 50 ಕ್ಕಿಂತ ಕಡಿಮೆ ಉದ್ಯೋಗಿಗಳಿದ್ದರೆ 2 ಹೊಸ ಉದ್ಯೋಗಿಗಳು
» 50 ಅಥವಾ ಹೆಚ್ಚು ಉದ್ಯೋಗಿಗಳಿದ್ದರೆ 5 ಹೊಸ ಉದ್ಯೋಗಿಗಳು
> ನಿಯಮಿತವಾಗಿ ECR ಸಲ್ಲಿಕೆ
» ಪ್ರೋತ್ಸಾಹಕ ರಚನೆ:
EPF ವೇತನ ಶ್ರೇಣಿ ಉದ್ಯೋಗದಾತರಿಗೆ ಪ್ರೋತ್ಸಾಹ
ರೂ. 10,000 ವರೆಗೆ ರೂ. 1,000
ರೂ. 10,001—ರೂ. 20,000 ರೂ. 2,000
ರೂ.20,000ಕ್ಕಿಂತ ಹೆಚ್ಚು ರೂ. 3,000
> ಎಲ್ಲಾ ಕ್ಷೇತ್ರಗಳಿಗೆ 2 ವರ್ಷಗಳ ಹಾಗೂ ಉತ್ಪಾದನಾ ಕ್ಷೇತ್ರಕ್ಕೆ 4 ವರ್ಷಗಳ ಕಾಲ ಬೆಂಬಲ
» PAN-ಲಿಂಕ್ ಆಗಿರುವ ಸಂಸ್ಥೆಯ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ಪಾವತಿ
ಆಗಸ್ಟ್ 01, 2025 ರಿಂದ ಜುಲೈ 31, 2027 ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯವಾಗುವ ಪ್ರಯೋಜನಗಳು.
ನೌಕರರ ದಾಖಲಾತಿ ಅಭಿಯಾನ 2025 (EEC 2025)
ಉದ್ಯೋಗದಾತರು EPFO ನ ಹಿಂದಿನ ಪಾವತಿಗಳನ್ನು ಕ್ರಮಬದ್ಧಗೊಳಿಸಲು 01 ನವೆಂಬರ್ 2025 ರಿಂದ 30 ಏಪ್ರಿಲ್ 2026 ರವರೆಗೆ ವಿಶೇಷ 6 ತಿಂಗಳ ಅವಧಿ

> ಅರ್ಹತೆಯ ಮಾನದಂಡಗಳು :
ಉದ್ಯೋಗದಾತರು ಈ ಕೆಳಗಿನ ಉದ್ಯೋಗಿಗಳನ್ನು ಘೋಷಿಸಬಹುದು ಮತ್ತು ನೋಂದಾಯಿಸಿಕೊಳ್ಳಬಹುದು:
> 01.07.2017 ರಿಂದ 31.10.2025 ರ ಅವಧಿಯಲ್ಲಿ ಉದ್ಯೋಗಕ್ಕೆ ಸೇರಿದವರು ಮತ್ತು > ಇಪಿಎಫ್ ವ್ಯಾಪ್ತಿಗೆ ಅರ್ಹರು ಆದರೆ ಮೊದಲೇ ದಾಖಲಾಗಿಲ್ಲ, ಮತ್ತು
> ಘೋಷಣೆಯ ದಿನಾಂಕದಂದು ಸಂಸ್ಥೆಯಲ್ಲಿ ಜೀವಂತವಾಗಿ ಮತ್ತು ಇನ್ನೂ ಉದ್ಯೋಗದಲ್ಲಿದ್ದಾರೆ.
> ಘೋಷಣೆ ಮಾಡುವ ವಿಧಾನ :
> ಘೋಷಣೆಗಳನ್ನು ಆನ್‌ಲೈನ್‌ನಲ್ಲಿ EPFO ಪೋರ್ಟಲ್ ಮೂಲಕ ಮಾತ್ರ ಸಲ್ಲಿಸಬೇಕು
> ಉದ್ಯೋಗದಾತರು ಪ್ರತಿ ಘೋಷಿತ ಉದ್ಯೋಗಿಗೆ FAT ಆಧಾರಿತ UAN ಅನ್ನು ಉತ್ಪಾದಿಸಬೇಕು > ಘೋಷಣೆಯ ಸಮಯದಲ್ಲಿ ಉತ್ಪತ್ತಿಯಾಗುವ TRRN ಗೆ ಲಿಂಕ್ ಮಾಡಲಾದ ECR ಬಳಸಿ ಪಾವತಿಗಳನ್ನು ಮಾಡಬೇಕು.
» ಪ್ರಯೋಜನಗಳು :
> ಉದ್ಯೋಗಿ ಇಪಿಎಫ್ ಪಾಲನ್ನು ಮನ್ನಾ ಮಾಡಲಾಗುತ್ತದೆ, ಮೊದಲೇ ಕಡಿತಗೊಳಿಸದಿದ್ದರೆ > ಉದ್ಯೋಗದಾತರು ಉದ್ಯೋಗದಾತರ ಪಾಲು, ಬಡ್ಡಿ (ವಿಭಾಗ 7Q), ಆಡಳಿತಾತ್ಮಕ ಶುಲ್ಕಗಳು ಮತ್ತು 7100 ದಂಡವನ್ನು ಮಾತ್ರ ಪಾವತಿಸಬೇಕಾಗುತ್ತದೆ
> ಸೆಕ್ಷನ್ 7A, ಪ್ಯಾರಾ 26B ಅಥವಾ EPS-1995 ರ ಪ್ಯಾರಾ 8 ಅಡಿಯಲ್ಲಿ ವಿಚಾರಣೆಗಳನ್ನು ಎದುರಿಸುತ್ತಿರುವ ಸಂಸ್ಥೆಗಳು ಅರ್ಹರಾಗಿದ್ದು, ಕೇವಲ ಕೆ100 ದಂಡ ಮಾತ್ರ ಪಾವತಿಸಬೇಕಾಗುತ್ತದೆ. ಹಾಗೂ EPFO ನಿಂದ ಸ್ವಯಂಪ್ರೇರಿತವಾಗಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ.
> EEC 2025 ರ ಅಡಿಯಲ್ಲಿ ಉದ್ಯೋಗಿಗಳನ್ನು ಘೋಷಿಸುವ ಉದ್ಯೋಗದಾತರು ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾ ಯೋಜನೆ (PMVBRY) ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.
ಅಭಿಯಾನದ ಅವಧಿ: ನವೆಂಬರ್ 1, 2025 ರಿಂದ ಏಪ್ರಿಲ್ 30, 2026 ರವರೆಗೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


