ಹೆಚ್.ಡಿ.ಕೋಟೆ: ಪಟ್ಟಣದ ಸ್ಟೇಟ್ ಬ್ಯಾಂಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಂಜುನಾಥ ಲೋಡರ್ಸ್ ಅಸೋಸಿಯೇಷನ್ ಕಟ್ಟಡವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಹುದಿನಗಳಿಂದ ಶ್ರಮಿಕರಿಗೆ ಒಂದು ಆಶ್ರಯ ನೀಡುವ ಕಟ್ಟಡ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿ ಎಲ್ಲಾರ ಸಹಕಾರದಿಂದ ಇಂದು ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಉತ್ತಮವಾದ ಕಟ್ಟಡವನ್ನು ನಮ್ಮ ಲೋಡರ್ಸ್ ಸಂಘದವರಿಗೆ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಆಶೀರ್ವಾದ ಅವಶ್ಯಕವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವೆಂಕಟಸ್ವಾಮಿ, ತಾತ್ಕಾಲಿಕವಾಗಿ ಕಟ್ಟಡ ನಿರ್ಮಾಣ ಮಾಡಿ ನಮ್ಮ ಲೋಡರ್ಸ್ ಸಂಘಕ್ಕೆ ನೀಡಲಾಗಿದೆ ಈ ಕಟ್ಟಡವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಿ ಕೊಳ್ಳುವುದು ಉತ್ತಮ ಎಂದು ಕಿವಿ ಮಾತು ಹೇಳಿದರು.
ನಂತರ ಮಾತನಾಡಿದ ಆದಿ ಕರ್ನಾಟಕ ಮಹಾ ಸಭಾ ಅದ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ, ಈ ದೇಶದಲ್ಲಿ ಬಹಳ ಶ್ರಮಿಕ ವರ್ಗದವರು ಎಂದರೆ ನಮ್ಮ ಲೋಡರ್ಸ್ ಗಳು ಅವರು ಎಲ್ಲರ ಸಹಕಾರದಿಂದ ಇಂದು ಕಟ್ಟಡ ನಿರ್ಮಾಣ ಮಾಡಿಕೊಂಡಿರುವುದು ಬಹಳ ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಭವನ ನಿರ್ಮಾಣ ಮಾಡಿಕೊಂಡು ಸಂಘದ ಸದಸ್ಯರ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು ನಡೆಯುವಂತಗಾಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು,ವೆಂಕಟಸ್ವಾಮಿ,ಪುರಸಬೆ ಸ್ಥಾಯಿ ಸಮಿತಿ ಅದ್ಯಕ್ಷ ಐಡಿಯ ವೆಂಕಟೇಶ್, ನಂಜಪ್ಪ,ಕುಲುಮೆ ರಾಜು, ದಿನೇಶ್, ಲಾಟರಿ ನಾಗರಾಜು, ಪರಶಿವಮೂರ್ತಿ, ಲೋಡರ್ಸ್ ಸಂಘದ ಎಲ್ಲಾ ಪದಾಧಿಕಾರಿಗಳು, ಟಿಎಪಿಎಂಎಸ್ ಕಾರ್ಯದರ್ಶಿ ನಿಂಗರಾಜು, ಸಂತೋಷ್, ನ್ಯಾಯಬೆಲೆ ಅಂಗಡಿ ಮಾಲಿಕರು,ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


