nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಬಾಲಕ ಸಾವು: ಹಲವರಿಗೆ ತೀವ್ರ ಗಾಯ

    August 30, 2025

    ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ ಎಸ್ ಐಟಿ ಅಧಿಕಾರಿಗಳು

    August 30, 2025

    ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ

    August 30, 2025
    Facebook Twitter Instagram
    ಟ್ರೆಂಡಿಂಗ್
    • ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಬಾಲಕ ಸಾವು: ಹಲವರಿಗೆ ತೀವ್ರ ಗಾಯ
    • ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ ಎಸ್ ಐಟಿ ಅಧಿಕಾರಿಗಳು
    • ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ
    • ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ: ಬಿಜೆಪಿ ಬಳಿಕ ಜೆಡಿಎಸ್ ನಿಂದಲೂ ಆರೋಪ
    • ವಿದ್ಯಾರ್ಥಿಗಳು ಸ್ವಂತ ಉದ್ಯಮಿಗಳಾಗಿ: ಕಾಪರ್ ಇಂಡಸ್ಟ್ರೀಸ್ ಚೇರ್ಮನ್ ಚಂದ್ರಶೇಖರ್ ಸಲಹೆ
    • ದೇವರ ಹೆಸರಿಗೆ ಕಳಂಕ ಆರೋಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂರಕ್ಷಣಾ ಅಭಿಯಾನ ಸಮಿತಿಯಿಂದ ಪ್ರತಿಭಟನೆ
    • ಜನ ಸಂಪರ್ಕ ಸಭೆ ಅಂದರೆ, ಬರಿ ಆಶ್ವಾಸನೆ ಸಭೆ ಆಗಬಾರದು: ಶಾಸಕ ಅನಿಲ್ ಚಿಕ್ಕಮಾದು
    • ಸೂತ್ತೂರು ಶ್ರೀಗಳ 110 ನೇ ವರ್ಷದ ಹುಟ್ಟುಹಬ್ಬ ಆಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ
    ಕೊರಟಗೆರೆ August 30, 2025

    ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ

    By adminAugust 30, 2025No Comments2 Mins Read
    koratagere

    ಕೊರಟಗೆರೆ : ಬಡವ, ಶ್ರೀಮಂತ ಎನ್ನದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಅವಶ್ಯಕತೆಯಿದೆ. ವಿದ್ಯುತ್‌ನಿಂತ ಉಪಯೋಗವೂ ಇದೆ, ಅಪಾಯವು ಇದೆ. ಇದಕ್ಕೆ ಯಾವುದೇ ಜಾತಿ, ಧರ್ಮ, ಭೇದವಿಲ್ಲ ಎಂದು ಎಲೆರಾಂಪುರ ಶ್ರೀಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.

    ಕೊರಟಗೆರೆ ಪಟ್ಟಣದ ಬೆಸ್ಕಾಂ ಕಚೇರಿ ಪಕ್ಕದಲ್ಲಿನ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಗುತ್ತಿಗೆದಾರರ ನಡುವೆ ಉತ್ತಮ ಬಾಂಧವ್ಯ ಇರಬೇಕು, ಗುತ್ತಿಗೆದಾರರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಬೇಕಿದೆ ಎಂದರು.


    Provided by
    Provided by

    ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ವಿದ್ಯುತ್ ಗುತ್ತಿಗೆದಾರರು ಸಂಘಟನೆ ಸ್ಥಾಪನೆ ಮೂಲಕ ಸಾಧಕ ಬಾದಕಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೂಡ ವಿದ್ಯುತ್ ಗುತ್ತಿಗೆದಾರರ ಬೇಡಿಗಳನ್ನು ಆದಷ್ಟು ಬೇಗ ಈಡೇರಿಸಬೇಕಿದೆ. ಖಾಸಗಿ ಸ್ಥಳದಲ್ಲಿ ಕಚೇರಿ ತಾತ್ಕಲಿಕವಾಗಿರಲಿದ್ದು ಶಾಸಕರು ಈ ಬಗ್ಗೆ ಗಮನಹರಿಸಿ ಗುತ್ತಿಗೆದಾರರ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, ಉದ್ಘಾಟನೆ ಮಾಡಬೇಕಿದೆ ಎಂದು ಒತ್ತಾಯ ಮಾಡಿದರು.

    ಕೇಂದ್ರ ಸಮಿತಿ ಕಾರ್ಯದರ್ಶಿ ಹೆಚ್.ವಿ ಚಂದ್ರಬಾಬು ಮಾತನಾಡಿ, ರಾಜ್ಯದ 31 ಜಿಲ್ಲಾ ಸಮಿತಿ, 236 ತಾ.ಸಮಿತಿಗಳಿದ್ದು ಹಲವು ಸಮಿತಿ ಸ್ವಂತ ಕಟ್ಟಡವನ್ನು ಹೊಂದಿದೆ. ಕೊರಟಗೆರೆ ತಾಲ್ಲೂಕಿನಲ್ಲೂ ನೂತನ ಕಚೇರಿ ಉದ್ಘಾಟನೆಯಾಗಿದೆ. 1922ರಲ್ಲಿ ನಮ್ಮ ಸಂಘಟನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಸದಸ್ಯರು ಮಾತ್ರ ನೋಂದಾಯಿತರಾಗಿದ್ದರು, ಪ್ರಸ್ತುತವಾಗಿ 15 ಸಾವಿರಕ್ಕೂ ಹೆಚ್ಚಿನ ಸಂಖೈಯಲ್ಲಿ ಸದಸ್ಯರು ನೊಂದಾಯಿತರಾಗಿದ್ದಾರೆ. ಸಂಘಟನೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ರಾಜ್ಯದಲ್ಲಿ ಅತ್ಯುತ್ತಮವಾಗಿ ತಂತ್ರಜ್ಞಾನ ಬಳಕೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

    ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಅಶೋಕ್‌ ಕುಮಾರ್ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಸಂಘದ ಸಹಕಾರದೊಂದಿಗೆ ಇಂದು ಗುತ್ತಿಗೆದಾರರ ನೂತನ ಕಚೇರಿ ಉದ್ಘಾಟನೆಯಾಗಿದೆ. ಕೇಂದ್ರ ಸಮಿತಿ ರಾಜ್ಯದಲ್ಲಿ 31 ಜಿಲ್ಲೆ, 236 ತಾಲ್ಲೂಕುಗಳಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಕೆಲ ತಾಲ್ಲೂಕುಗಳಲ್ಲಿ ಮಾತ್ರ ಕಚೇರಿಯಿದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಕಟ್ಟಡ ಕಟ್ಟುವಂತಹ ಆಶಾ ಮನೋಭಾವನೆ ಹೊಂದಿದ್ದೇವೆ ಎಂದು ಹೇಳಿದರು.

    ತಾಲ್ಲೂಕು ಸಮಿತಿಯ ತಾ.ಅಧ್ಯಕ್ಷ ಎಸ್.ಆರ್.ಸೋಮಶೇಖರ್ ಮಾತನಾಡಿ, ಗುತ್ತಿಗೆದಾರ ಸಂಘದಲ್ಲಿ ಸದಸ್ಯರ ಪ್ರೀತಿ ವಿಶ್ವಾಸದಿಂದ ಮೂರನೇ ಬಾರಿ ಅಧ್ಯಕ್ಷನಾಗಿ ಮುಂದುವರೆದಿದ್ದೇನೆ, ಇದೇ ರೀತಿ ತಮ್ಮೆಲ್ಲರಾ ಸಹಕಾರ ನೀಡುವಂತೆ ಕೋರಿದರು.

    ಈ ಸಂದರ್ಭದಲ್ಲಿ ಗೃಹ ಸಚಿವ ವಿಶೇಷ ಅಧಿಕಾರಿ ಡಾ.ಕೆ.ನಾಗಣ್ಣ, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ತಾ.ಸಮಿತಿ ಉಪಾಧ್ಯಕ್ಷ ಮೂಡಲಗಿರಿಯಪ್ಪ, ಎ.ಆರ್.ರವಿಕುಮಾರ್, ಬಿ.ಆರ್.ಲಕ್ಷ್ಮಿ ಕಾಂತಬಾಬು, ಫಾರುಕ್ ಅಹಮದ್, ಪ್ರದೀಪ್‌ ಕುಮಾರ್ ಸೇರಿದಂತೆ ಇತರರು ಇದ್ದರು.

    ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ಹೆಚ್.ವಿ ಚಂದ್ರಬಾಬು ಮಾತನಾಡಿ, ಗುತ್ತಿಗೆದಾರರ ಸಂಘಟನೆ ರಾಜ್ಯ ಮಟ್ಟದಲ್ಲಿ ವಿಶೇಷ ಮನ್ನಣೆ ಪಡೆದಿದೆ. ಇತಿಹಾಸವಿರುವ ನಮ್ಮ ಸಂಘಟನೆಯಲ್ಲಿ ವಿದ್ಯುತ್ ಗುತ್ತಿಗೆದಾರರ ಆಕಸ್ಮಿಕ ಮರಣದಿಂದ ಮೃತರಾದ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ಪರಿಹಾರ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ, ಕಾಮಗಾರಿ ಸಂದರ್ಭದಲ್ಲಿ ಗ್ರಾಹಕರು ಸಮಸ್ಯೆಗೆ ಸಿಲುಕಿದ್ದಲ್ಲಿ ಸಂಘಟನೆಯು ಗ್ರಾಹಕರ ಪರವಾಗಿ ಧ್ವನಿ ಎತ್ತಿ ಬೆಂಬಲ ಸೂಚಿಸಿದೆ. ಗುತ್ತಿಗೆದಾರರಿಗೆ ಒಂದು ಲಕ್ಷದಿಂದ ಐದು ಲಕ್ಷದವರೆಗೆ ತುಂಡು ಗುತ್ತಿಗೆ ನೀಡುವಂತೆ ಕೆಪಿಟಿಟಿ ಅಕ್ಟ್ ಬದಲಾವಣೆಯಾಗಿದೆ ಎಂದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಶ್ರೀ ದೊಡ್ಡಮ್ಮ ದೇವಿ ಸ್ಥಿರ ಬಿಂಬ ಪ್ರತಿಷ್ಠಾಪನ ಕುಂಭಾಭಿಷೇಕ ಮಹೋತ್ಸವ ಹಾಗೂ ಚಂಡಿಕಾ ಹೋಮ

    August 29, 2025

    ಸೆ.13ರಂದು ರಾಷ್ಟ್ರೀಯ ಲೋಕಾ ಅದಾಲತ್ 2025: ಸಂಧಾನದ ಮೂಲಕ ವ್ಯಾಜ್ಯಗಳ ಇತ್ಯರ್ಥ: ನ್ಯಾಯಾಧೀಶೆ ನೂರುನ್ನೀಸ

    August 23, 2025

    ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಹುಟ್ಟು ಹಬ್ಬ:  ಬಡ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಣೆ

    August 19, 2025
    Our Picks

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025

    ದೀಪಾವಳಿಗೆ ಡಬಲ್ ಗಿಫ್ಟ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

    August 15, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಬಾಲಕ ಸಾವು: ಹಲವರಿಗೆ ತೀವ್ರ ಗಾಯ

    August 30, 2025

    ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆಯ ಸಂಭ್ರಮದ ವೇಳೆ ಪಟಾಕಿ ತುಂಬಿದ್ದ ಬಾಕ್ಸ್ ಸ್ಫೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನ್ನಪ್ಪಿ ಹಲವರು ಗಾಯಗೊಂಡಿರುವ…

    ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ ಎಸ್ ಐಟಿ ಅಧಿಕಾರಿಗಳು

    August 30, 2025

    ಕೊರಟಗೆರೆ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ

    August 30, 2025

    ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ: ಬಿಜೆಪಿ ಬಳಿಕ ಜೆಡಿಎಸ್ ನಿಂದಲೂ ಆರೋಪ

    August 30, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.