ಸರಗೂರು: ತಾಲ್ಲೂಕಿನ ಹಲಸೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಗ್ರಾಮ ದೇವತೆ ಮಾರಮ್ಮ ದೇವಾಲಯದ ಉದ್ಘಾಟನೆ ಮತ್ತು ದೇವರ ಪ್ರತಿಷ್ಠಾಪನೆ ಕಾರ್ಯಕ್ರಮವು ಶುಕ್ರವಾರದಿಂದ ಭಾನುವಾರವರಗೂ ಹಮ್ಮಿಕೊಳ್ಳಲಾಯಿತು.
100 ವರ್ಷಗಳಷ್ಟು ಹಳೆಯದಾದ ಮಾರಮ್ಮ ದೇವಿಯ ದೇವಾಲಯವು ಶಿಥಿಲವಾಗಿತ್ತು. ಗ್ರಾಮಸ್ಥರ ಕೋರಿಕೆ ಮೇರೆಗೆ ಶಾಸಕ ಅನಿಲ್ ಚಿಕ್ಕಮಾದು, ದಾನಿಗಳ ನೆರವು ಮತ್ತು ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನ ನಿರ್ಮಾಣವಾಗಿದೆ.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಗ್ರಾಮಸ್ಥರ ಕೋರಿಕೆಯಂತೆ ದೇವಾಲಯ ನಿರ್ಮಿಸಲಾಗಿದ್ದು, ಎಲ್ಲರೂ ಸಹಬಾಳ್ವೆ, ಒಗ್ಗಟ್ಟಿನಿಂದ ಜಾತ್ರೆ ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗುವಂತೆ’ ಸಲಹೆ ನೀಡಿದರು.
ಪಡುವಲು ವೀರಕ್ತ ಮಠದ ಮಹದೇವಸ್ವಾಮಿಗಳು.ಶಾಸಕರ ಅನೀಲ್ ಚಿಕ್ಕಮಾದು.ಜೆಡಿಎಸ್ ಪಕ್ಷದ ಮುಖಂಡ ಕೆ ಎಂ ಕೃಷ್ಣನಾಯಕ.ಜಯಪ್ರಕಾಶ್.ರವರು ತಾಯಿಯ ದರ್ಶನ ಪಡೆದು ಪುನೀತದರು.
ಗ್ರಾಮದ ಎಲ್ಲಾ ಸಮುದಾಯದ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಧಾರ್ಮಿಕ ಆಚರಣೆ ಮತ್ತು ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು.
ಶುಕ್ರವಾರದಿಂದ ಭಾನುವಾರವರೆಗೂ ನಡೆದ ಉದ್ಘಾಟನೆ ಮತ್ತು ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಅನ್ನದಾಸೋಹ ನಡೆಯುತ್ತು.ಗ್ರಾಮದ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿಯ ದರ್ಶನ ಪಡೆದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



