ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ತಾಯಂದಿರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರನ್ನು ತಕ್ಷಣ ಬಂಧಿಸಬೇಕು ಎಂದು ನೈಜ್ಯ ಹೋರಾಟಗಾರರ ವೇದಿಕೆ ಮತ್ತು ಮಾಹಿತಿ ಅಧ್ಯಯನ ಕೇಂದ್ರ ಒತ್ತಾಯಿಸಿದೆ.
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ತಾಯಂದಿರು ಮೃತಪಟ್ಟಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನಾವು ಮಾನವ ಹಕ್ಕುಗಳ ಆಯೋಗಕ್ಕೆ ಪ್ರಕರಣ ಸಂಖ್ಯೆ 4637/10/3/2024 ರಲ್ಲಿ ದಿನಾಂಕ ದಂದು ದೂರನ್ನು ಸಲ್ಲಿಸಿದ್ದೇವೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಈ ಪ್ರಕರಣದ ಮುಖ್ಯ ಆರೋಪಿಯೆಂದು ನಾವು ಪರಿಗಣಿಸಿದ್ದೇವೆ ಎಂದು ನೈಜ ಹೋರಾಟಗಾರರ ವೇದಿಕೆ ತಿಳಿಸಿದೆ.
IV fluid ಔಷಧಿಯನ್ನು 2024 ಮಾರ್ಚ್ ತಿಂಗಳಿಂದ ಸರಬರಾಜು ಮಾಡಲು Paschim Bangs pharmaceutical companyಗೆ ಔಷಧಿಗಳನ್ನು ಸರಬರಾಜು ಮಾಡುವಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಆದೇಶ ನೀಡಿದ್ದರು. ಆದರೆ ಸದರಿ ಕಂಪನಿಯವರು ಸರಬರಾಜು ಮಾಡಿರುವ ಔಷಧಿಯು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರದ ಡ್ರಗ್ ಕಂಟ್ರೋಲರ್( drug controller)ರವರು 2024 ಮೇ ತಿಂಗಳಿನಲ್ಲಿಯೇ ಈ ಔಷಧಿಗಳನ್ನು ವಾಪಸ್ ಪಡೆದುಕೊಳ್ಳುವಂತೆ ಸರಬರಾಜು ನೀಡಿದ ಕಂಪನಿಗೆ ತಿಳಿಸಿ ಎಂದುಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಸೂಚನೆ ನೀಡಿದ್ದರು. ಆದರೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದವರು ದಿನಾಂಕ 14.05.24 ರಂದು ಸುತ್ತೋಲೆಯನ್ನು ಹೊರಡಿಸಿ ಸದರಿ ಫಾರ್ಮಸಿಟಿಕಲ್ ಕಂಪನಿಗೆ ನೀವು ಕಳುಹಿಸಿರುವ ಔಷಧೀಯ ಗುಣಮಟ್ಟ ಸರಿ ಇಲ್ಲ ಆದುದರಿಂದ ಉತ್ತಮ ಗುಣಮಟ್ಟದ ಔಷಧಿಗಳನ್ನು ಸರಬರಾಜು ಮಾಡುವಂತೆ ಇದೇ ಕಂಪನಿಗೆ ಆದೇಶ ನೀಡಿ ಸುತ್ತೋಲೆ ಹೊರಡಿಸಿರುತ್ತಾರೆ.
ಗುಣಮಟ್ಟದ ಔಷಧಿಯನ್ನು ಸರಬರಾಜು ಮಾಡದ ಕಂಪನಿಯನ್ನು ಬ್ಲಾಕ್ ಲಿಸ್ಟ್ ನಲ್ಲಿ ಇಡುವ ಬದಲು ಮತ್ತು ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯದ ಬಗ್ಗೆ ಗಮನ ಹರಿಸದೆ ಕಳಪೆ ಗುಣಮಟ್ಟದ ಔಷಧಿಯನ್ನು ತಯಾರಿಸಿ ಕಳುಹಿಸಿದ ಕಂಪನಿಗೆ ಉತ್ತಮ ಗುಣಮಟ್ಟದ ಔಷಧಿ ಕಳಿಸಿ ಎಂದು ಹೇಳಿ ಆದೇಶ ನೀಡಿರುವುದು ಸ್ಪಷ್ಟವಾಗಿ ನಮಗೆ ಕಂಡು ಬರುತ್ತಿರುವುದರಿಂದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಬಾಣಂತಿಯರ ಸಾವಿನ ಹೊಣೆಯನ್ನು ಹೊತ್ತಿಕೊಳ್ಳಬೇಕಾಗುತ್ತದೆ ಮತ್ತು ಅವರ ಮೇಲೆ ಕೊಲೆ ಆರೋಪದಡಿ ಪ್ರಕರಣವನ್ನು ದಾಖಲಿಸಿ ಅವರನ್ನು ಬಂಧಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆ ಮತ್ತು ಮಾಹಿತಿ ಅಧ್ಯಯನ ಕೇಂದ್ರ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.
ಈ ಪ್ರಕರಣದ ಗಂಭೀರತೆಯನ್ನು ಅರಿತು ನಾವು ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಸಲ್ಲಿಸಿದರೆ, ಬಳ್ಳಾರಿ ಜಿಲ್ಲಾ ಆರೋಗ್ಯ ಅಧಿಕಾರಿಯಿಂದ ವರದಿ ಕೇಳಿದ್ದು ಆಯೋಗವು ಹಾಸ್ಯಾಸ್ಪದಕ್ಕೆ ಒಳಗಾಗಿದೆ. ಯಾರು ತಪ್ಪಿತಸ್ಥರು ಇರುತ್ತಾರೆ ಅವರಿಂದಲೇ ವರದಿ ಕೇಳುವುದು ಹಾಸ್ಯಾಸ್ಪದವಲ್ಲದೆ ಮತ್ತೇನು? ಈ ಬಗ್ಗೆ ನಾವು ಆಯೋಗದ ಗೌರವಾನ್ವಿತ ಸದಸ್ಯರನ್ನು ಭೇಟಿಯಾಗಿ ವಿವರಣೆ ನೀಡಿದ ನಂತರ ಪ್ರಧಾನ ಕಾರ್ಯದರ್ಶಿ ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಇವರಿಗೆ ವರದಿ ನೀಡುವಂತೆ ಸೂಚಿಸಿರುತ್ತಾರೆ.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಇವರು ಯಾರಿಗೂ ಬಡವರ ಬಗ್ಗೆ ಬಡ ರೋಗಿಗಳ ಬಗ್ಗೆ ಕಿಂಚಿತ್ತು ಜವಾಬ್ದಾರಿ ಇಲ್ಲದೆ ವರ್ತಿಸುತ್ತಿದ್ದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವಾಗಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾಗಲಿ ಅಥವಾ ಮಾನವ ಹಕ್ಕುಗಳ ಆಯೋಗವಾಗಲಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸುವ ಇಚ್ಛಾ ಶಕ್ತಿ ಇಲ್ಲದೆ ಇರುವುದು ನಮಗೆ ಕಂಡು ಹಾಗೂ ಇಂಥ ಹೃದಯವಿದ್ರಾವಕ ಘಟನೆಯು ನಡೆದರೂ ಕೂಡ ಅಧಿಕಾರಿಗಳು ಸಭೆಗಳನ್ನು ನಡೆಸಿ ಒಬ್ಬರ ಮೇಲೆ ಒಬ್ಬರು ತಮ್ಮ ಜವಾಬ್ದಾರಿಯನ್ನು ಹಾಕುತ್ತಿರುವುದು ಕಂಡು ಬರುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸರ್ಕಾರವು ತಕ್ಷಣ ಬಳ್ಳಾರಿ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಇವರ ಮೇಲೆ ಕ್ರಿಮಿನಲ್ ಮುಖದ್ದಮೆ ದಾಖಲಿಸಿ ಎಫ್ ಐಆರ್ ದಾಖಲಿಸಬೇಕೆಂದು ಈ ಮೂಲಕ ನಾವು ಒತ್ತಾಯ ಪಡಿಸುತ್ತಿದ್ದೇವೆ. ಇಲ್ಲದೆ ಇದ್ದಲ್ಲಿ ಈ ಪ್ರಕರಣದ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧವಾಗಬೇಕಾಗುತ್ತದೆ ಎಂಬ ಎಚ್ಚರಿಕೆ ಮಾತನ್ನು ಸರ್ಕಾರಕ್ಕೆ ನೀಡುತ್ತಿದ್ದೇವೆ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಬೆಂಗಳೂರು ಇದರ ಬಿ.ಹೆಚ್.ವೀರೇಶ್ ಹಾಗೂ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು ಹೆಚ್.ಎಂ.ವೆಂಕಟೇಶ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx