2036ರ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸಲು ಭಾರತ ಸ್ವಯಂ ಪ್ರೇರಿತವಾಗಿದೆ. ಒಲಿಂಪಿಕ್ ಸಮಿತಿಯ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. 2029ರ ಯೂತ್ ಒಲಿಂಪಿಕ್ಸ್ ನ ಬಿಡ್ ನಲ್ಲಿ ಭಾರತ ಭಾಗವಹಿಸಲಿದೆ ಎಂದು ಪ್ರಧಾನಿ ಘೋಷಿಸಿದರು.
‘ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ. ಇದು 140 ಕೋಟಿ ಭಾರತೀಯರ ಕನಸು. ಐಒಸಿ ಬೆಂಬಲದಿಂದ ಈ ಕನಸು ನನಸಾಗಬೇಕು. ಕ್ರೀಡೆಯು ಪದಕಗಳನ್ನು ಗೆಲ್ಲಲು ಮಾತ್ರವಲ್ಲದೆ ಹೃದಯಗಳನ್ನು ಗೆಲ್ಲಲು ಉತ್ತಮ ಮಾರ್ಗವಾಗಿದೆ. ಇದು ಚಾಂಪಿಯನ್‌ಗಳನ್ನು ರೂಪಿಸುವುದು ಮಾತ್ರವಲ್ಲದೆ ಶಾಂತಿಯನ್ನು ಹೆಚ್ಚಿಸುತ್ತದೆ’ – ಮೋದಿ ಹೇಳಿದರು.
ಭಾರತವು 40 ವರ್ಷಗಳ ನಂತರ IOC ಅಧಿವೇಶನವನ್ನು ಆಯೋಜಿಸುತ್ತಿದೆ. ಇದಕ್ಕೂ ಮುನ್ನ 1983ರಲ್ಲಿ ದೆಹಲಿಯಲ್ಲಿ 86ನೇ ಐಒಸಿ ಅಧಿವೇಶನ ನಡೆದಿತ್ತು.
ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಹಿಂದಿಯಲ್ಲಿ ನಮಸ್ತೆ ಹೇಳುವ ಮೂಲಕ ಭಾಷಣ ಆರಂಭಿಸಿದರು. 2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಲಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.


