nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪವನ್ ಕುಮಾರ್ ರೆಡ್ಡಿ

    November 18, 2026

    ಶೆಟ್ಟಿಕೆರೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರೈತ ಸಂಪರ್ಕ ಕೇಂದ್ರನಿರ್ಮಾಣ | ರೈತರ ಬಹುದಿನಗಳ ಬೇಡಿಕೆ ಈಡೇರಿಕೆ: ಶಾಸಕ ಸಿ.ಬಿ. ಸುರೇಶ್‌ ಬಾಬು

    November 18, 2026

    ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈಬಿಡಿ; ಅಡುಗೆ ನೌಕರರ ಉದ್ಯೋಗ ಕಸಿಯಬೇಡಿ–ಬಿಸಿಯೂಟ ನೌಕರರ ಸಂಘದ ಆಗ್ರಹ

    November 18, 2026
    Facebook Twitter Instagram
    ಟ್ರೆಂಡಿಂಗ್
    • ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪವನ್ ಕುಮಾರ್ ರೆಡ್ಡಿ
    • ಶೆಟ್ಟಿಕೆರೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರೈತ ಸಂಪರ್ಕ ಕೇಂದ್ರನಿರ್ಮಾಣ | ರೈತರ ಬಹುದಿನಗಳ ಬೇಡಿಕೆ ಈಡೇರಿಕೆ: ಶಾಸಕ ಸಿ.ಬಿ. ಸುರೇಶ್‌ ಬಾಬು
    • ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈಬಿಡಿ; ಅಡುಗೆ ನೌಕರರ ಉದ್ಯೋಗ ಕಸಿಯಬೇಡಿ–ಬಿಸಿಯೂಟ ನೌಕರರ ಸಂಘದ ಆಗ್ರಹ
    • ಗಣಿಬಾಧಿತ ಪ್ರದೇಶ ಅಭಿವೃದ್ಧಿ ಯೋಜನೆ : ಬಾಕಿ ಡಿಪಿಆರ್ ‌ಗಳನ್ನು ತ್ವರಿತವಾಗಿ ಸಲ್ಲಿಸಿ, ರೇಷ್ಮೆ ಇಲಾಖೆಯಿಂದ ವರದಿ ಸಲ್ಲಿಕೆಯಾಗಿಲ್ಲ : ಡಾ. ಸಂಜಯ್ ಎಸ್. ಬಿಜ್ಜೂರ ಅಸಮಾಧಾನ
    • ಕ್ರಿಪ್ಟೋ, ಚಿನ್ನ, ಈಕ್ವಿಟಿ SIP: ನಿಮ್ಮ ಹಣಕ್ಕೆ ಯಾವ ಹೂಡಿಕೆ ಸೂಕ್ತ?
    • ಡಿಜೆ ಸದ್ದಿಗೆ 20 ದಿನದ ಹಸುಗೂಸು ಬಲಿ? ಅತಿಯಾದ ಶಬ್ದದಿಂದ ಆರೋಗ್ಯಕ್ಕೇನು ಅಪಾಯ?
    • ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದೇಕೆ?ಪುರುಷರು, ಮಹಿಳೆಯರು ಯಾವ ಕಾಲಿಗೆ ಕಟ್ಟಿಕೊಳ್ಳಬೇಕು?
    • ದೂರದ ಪ್ರಯಾಣದಲ್ಲಿ ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಈ ಸರಳ ಟ್ರಿಕ್ ‌ಗಳನ್ನು ಅನುಸರಿಸಿ ಚಾರ್ಜ್ ಉಳಿಸಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮನೆ ಕೆಲಸದಲ್ಲೂ ವಿಶ್ವದಲ್ಲಿ ಭಾರತೀಯ ಮಹಿಳೆಯರೇ ಮುಂದೆ
    ರಾಷ್ಟ್ರೀಯ ಸುದ್ದಿ March 25, 2024

    ಮನೆ ಕೆಲಸದಲ್ಲೂ ವಿಶ್ವದಲ್ಲಿ ಭಾರತೀಯ ಮಹಿಳೆಯರೇ ಮುಂದೆ

    By adminMarch 25, 2024No Comments2 Mins Read
    work

    ಭಾರತದಲ್ಲಿ ಜಾಸ್ತಿ ಮನೆ ಕೆಲಸ ಮಾಡುವವರು ಯಾರು ಗಂಡಸರಾ ಹೆಂಗಸರಾ ಅಂತ ಯಾರನ್ನಾದರೂ ಕೇಳಿದರೆ ಥಟ್ಟನೆ ಸರಿ ಉತ್ತರ ಬಂದೇ ಬರುತ್ತೆ. ಅದು ಹೆಂಗಸರು ಅಂತ.

    ಅದೇ ಪ್ರಶ್ನೆಯನ್ನು ಸ್ವಲ್ಪ ವಿಸ್ತರಿಸಿ ಕೇಳಿ. “ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು ಪುರುಷರಿಗಿಂತ ಎಷ್ಟು ಪಟ್ಟು ಹೆಚ್ಚು, ಈ ವೇತನವಿಲ್ಲದ ಮನೆಕೆಲಸ ಹಾಗೂ ಆರೈಕೆ ಕೆಲಸಗಳನ್ನು ಮಾಡುತ್ತಾರೆಂದು? ರೆಡಿಮೇಡ್ ಉತ್ತರ ನಿಮ್ಮಲ್ಲಿ ಇಲ್ಲ ಅಲ್ಲವೇ? ಈಗ ಅದಕ್ಕಾಗಿ ಉತ್ತರ ಹುಡುಕುತ್ತಾ ಅಧ್ಯಯನವೊಂದು ನಡೆದಿದೆ. ಆ ಸ್ಟಡಿ, ಇಂಟರೆಸ್ಟಿಂಗ್ ಮಾಹಿತಿಯನ್ನು ಹೊರಹಾಕಿದೆ. ಭಾರತದ ಮಹಿಳೆಯರು ವಿಶ್ವದ ಇತರ ದೇಶಗಳಿಗಿಂತ ಬರೋಬ್ಬರಿ 10 ಪಟ್ಟು ಹೆಚ್ಚು ಮನೆ ಕೆಲಸ ಮಾಡುತ್ತಾರಂತೆ!

    ಇದು ಮುಂಬೈನಲ್ಲಿರುವ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ಜಂಟಿಯಾಗಿ ನಡೆಸಿದ ಸಂಶೋಧನೆಯಾಗಿದ್ದು, ಅಲ್ಲಿ ನಮ್ಮ ಭಾರತೀಯ ಮಹಿಳೆಯರ ಮನೆಕೆಲಸದ ತೀವ್ರತೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

    ಮನೆ ಕೆಲಸದಲ್ಲೂ ವಿಶ್ವದಲ್ಲಿ ನಮ್ಮ ಮಹಿಳೆಯರೇ ಮುಂದೆ:

    ಪುರುಷರಿಗಿಂತ ಭಾರತೀಯ ಮಹಿಳೆಯರು ಮನೆಕೆಲಸ ಮತ್ತು ಆರೈಕೆಯಂತಹ ವೇತನವಿಲ್ಲದ ಕೆಲಸವನ್ನು 10 ಪಟ್ಟು ಹೆಚ್ಚಾಗಿ ಮಾಡುತ್ತಿದ್ದು, ವಿದ್ಯಾವಂತ ಮಹಿಳೆಯರು ತಮ್ಮ ಕೆಲಸದ ಹೊರೆ ನಿಯಂತ್ರಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದಾರೆಂದು ಕೂಡಾ ವರದಿ ಬಹಿರಂಗಪಡಿಸಿದೆ.

    ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿ ಏನೆಂದರೆ ಭಾರತದಲ್ಲಿ ಅವಿವಾಹಿತ ಮಹಿಳೆಯರು ವಿವಾಹಿತ ಮಹಿಳೆಯರಿಗಿಂತ ಕಡಿಮೆ ಕೆಲಸ ಮಾಡುತ್ತಿರುವುದು. ಅಂದರೆ ಕೌಟುಂಬಿಕ ಜವಾಬ್ದಾರಿ ಬಂದ ನಂತರ ಮಾತ್ರ ಅವರು ಮನೆ ಕೆಲಸಕ್ಕೆ ಇಳಿಯುತ್ತಿರುವುದು ಸೋಜಿಗದ ವಿಷಯ. ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ, ನಮ್ಮ ವಿವಾಹಿತ ಮಹಿಳೆಯರು, ಬಹುತೇಕ ದುಪ್ಪಟ್ಟು ಪ್ರಮಾಣದಲ್ಲಿ ವೇತನವಿಲ್ಲದ ಕೆಲಸದ ಹೊರೆ ಹೊಂದಿದ್ದಾರೆ ಅನ್ನುತ್ತಿದೆ ಈ ಸಂಶೋಧನೆ. ಅದರಲ್ಲೂ, ಹಿಂದು, ಮುಸ್ಲಿಂ ಮತ್ತು ಸಿಖ್ ಕುಟುಂಬಗಳ ಮಹಿಳೆಯರು ಹೆಚ್ಚಿನ ಸಮಯವನ್ನು ‘ವೇತನವಿಲ್ಲದ ಮನೆಕೆಲಸ’ಕ್ಕಾಗಿ ವ್ಯಯಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

    ವಿಶ್ವದ ಉಳಿದ ಕಡೆ ಮಹಿಳೆಯರ ಮನೆ ಕೆಲಸ ಪರಿಸ್ಥಿತಿ:

    ವಿಶ್ವಾದ್ಯಂತ ಮಹಿಳೆಯರು ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಸಮಯವನ್ನು ವೇತನರಹಿತ ಮನೆಕೆಲಸ ಮತ್ತು ಆರೈಕೆ ಕೆಲಸಗಳಲ್ಲಿ ಕಳೆಯುತ್ತಾರಂತೆ. ಆದರೆ, ಭಾರತದಲ್ಲಿನ ಮಹಿಳೆಯರು ಪುರುಷರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಮಯವನ್ನು ಸಂಬಳವಿಲ್ಲದ ಕೆಲಸಕ್ಕಾಗಿ ಕಳೆಯುತ್ತಾರೆ” ಎಂದು ಅಧ್ಯಯನ ವಿವರಿಸಿದೆ.

    ಅದರಲ್ಲೂ ಶಾಲಾ ವಯಸ್ಸಿನ ಮಕ್ಕಳನ್ನು ಸಲಹುವುದಕ್ಕೆ ಮಹಿಳೆಯರು ಹೆಚ್ಚು ಸಮಯವನ್ನು ಕಳೆಯುತ್ತಾರೆ. ಅಲ್ಲದೆ, ವಿಭಕ್ತ ಕುಟುಂಬದಲ್ಲಿ ವಾಸಿಸುವ ಮಹಿಳೆಯರು, ಅಂದರೆ ಗಂಡ ಮತ್ತು ಮಕ್ಕಳ ಜೊತೆ ವಾಸಿಸುವ ಸಣ್ಣ ಕುಟುಂಬದ ಮಹಿಳೆಯರು, ಅವಿಭಕ್ತ ಕುಟುಂಬಗಳ ಮಹಿಳೆಯರಿಗಿಂತ ವೇತನವಿಲ್ಲದ ಕೆಲಸವನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಅಲ್ಲದೆ, ಸ್ತ್ರೀ ಪ್ರಧಾನ ಕುಟುಂಬಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಕಡಿಮೆಯಿದೆ. ಅದಕ್ಕೆ ವಿರುದ್ಧವಾಗಿ ಪುರುಷ ಪ್ರಧಾನ ಕುಟುಂಬಗಳಲ್ಲಿ ಈ ಸಂಬಳರಹಿತ ಕೆಲಸದ ಹೊರೆ ಹೆಚ್ಚಾಗಿದೆ.

    ವಿಶ್ವದ ಆರ್ಥಿಕತೆಯಲ್ಲಿ ಮಹಿಳೆಯರ ಸಿಂಹಪಾಲು:

    ಈ ಮನೆ ಕೆಲಸಗಳ ವೇತನವಿಲ್ಲದ ಉದ್ಯೋಗಗಳನ್ನು ಮಾರುಕಟ್ಟೆ ಮೌಲ್ಯಗಳ ಆಧಾರದ ಮೇಲೆ ಅಳೆದು ನೋಡಿದರೆ, ವಿಶ್ವದ ಆರ್ಥಿಕತೆಗೆ ಮಹಿಳೆಯರ ಕೊಡುಗೆಯು ಅಪಾರವಾಗಿದೆ ಎನ್ನುವ ಅಂಶವನ್ನು ಈ ವರದಿ ಗಮನ ಸೆಳೆದಿದೆ.

    ಆರ್ಥಿಕತೆಯ ಮೇಲೆ ಮಹಿಳೆಯರ ಪ್ರಭಾವ ಎಷ್ಟರ ಮಟ್ಟಿಗೆ ಇದೆಯೆಂದರೆ, ಕೆಲ ದೇಶಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಆ ದೇಶದ ಜಿಡಿಪಿಗೆ ಶೇ.10 ರಷ್ಟು ಕೊಡುಗೆ ನೀಡಿದರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಜಿಡಿಪಿಗೆ ಅವರ ಕೊಡುಗೆ ಶೇ.60 ಎಂದು ಲೆಕ್ಕಾಚಾರ ಮಾಡಲಾಗಿದೆ.

    ಮತ್ತೊಂದು ಗುದುಹೋದ ಅಂಶವೇನೆಂದರೆ, ನಗರ ಪ್ರದೇಶದ ಶಿಕ್ಷಣ ಇಲ್ಲದ ಮಹಿಳೆಯರು ಹೆಚ್ಚು ಮನೆ ಕೆಲಸ ಮಾಡುತ್ತಿರುವುದು. ಶಿಕ್ಷಣವಿಲ್ಲದ ನಗರ ಪ್ರದೇಶದ ಮಹಿಳೆಯರು, ಶಿಕ್ಷಣವಿಲ್ಲದ ಗ್ರಾಮೀಣ ಪ್ರದೇಶದ ಮಹಿಳೆಯರಿಗಿಂತ ಶೇಕಡಾ 86.7 ಕ್ಕಿಂತಲೂ ಹೆಚ್ಚು ಸಮಯ ಸಂಬಳವಿಲ್ಲದ ಮನೆಕೆಲಸದಲ್ಲಿ ಕಳೆಯುತ್ತಾರೆಂದು ವರದಿ ತಿಳಿಸಿದೆ. ಒಟ್ಟಾರೆ ಮಹಿಳೆಯರು, ತಮಗೆ ಶಿಕ್ಷಣ ಇಲ್ಲದೆ ಹೋದರೂ ವಿಶ್ವದ ಆರ್ಥಿಕತೆಯಲ್ಲಿ ಸಿಂಹಪಾಲು ಪಡೆದು ಕೊಳ್ಳುತ್ತಿರುವುದು ಗಮನಾರ್ಹ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    Comments are closed.

    Our Picks

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪವನ್ ಕುಮಾರ್ ರೆಡ್ಡಿ

    November 18, 2026

    ಮಧುಗಿರಿ : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ…

    ಶೆಟ್ಟಿಕೆರೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರೈತ ಸಂಪರ್ಕ ಕೇಂದ್ರನಿರ್ಮಾಣ | ರೈತರ ಬಹುದಿನಗಳ ಬೇಡಿಕೆ ಈಡೇರಿಕೆ: ಶಾಸಕ ಸಿ.ಬಿ. ಸುರೇಶ್‌ ಬಾಬು

    November 18, 2026

    ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈಬಿಡಿ; ಅಡುಗೆ ನೌಕರರ ಉದ್ಯೋಗ ಕಸಿಯಬೇಡಿ–ಬಿಸಿಯೂಟ ನೌಕರರ ಸಂಘದ ಆಗ್ರಹ

    November 18, 2026

    ಗಣಿಬಾಧಿತ ಪ್ರದೇಶ ಅಭಿವೃದ್ಧಿ ಯೋಜನೆ : ಬಾಕಿ ಡಿಪಿಆರ್ ‌ಗಳನ್ನು ತ್ವರಿತವಾಗಿ ಸಲ್ಲಿಸಿ, ರೇಷ್ಮೆ ಇಲಾಖೆಯಿಂದ ವರದಿ ಸಲ್ಲಿಕೆಯಾಗಿಲ್ಲ : ಡಾ. ಸಂಜಯ್ ಎಸ್. ಬಿಜ್ಜೂರ ಅಸಮಾಧಾನ

    November 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.