ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಲೆಜೆಂಡರಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಸೋಮವಾರ ನಿಧನರಾಗಿದ್ದಾರೆ. 77 ವರ್ಷದ ಬಿಷನ್ ಸಿಂಗ್ ಬೇಡಿ 1970 ರ ದಶಕದಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಕ್ರಾಂತಿ ಮೂಡಿಸಿದ್ದರು.
ಭಾರತದ ಮೊದಲ ಗೆಲುವಿನಲ್ಲಿ ಪ್ರಮುಖ ಪಾತ್ ರ ಬೇಡಿ, ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಭಾರತೀಯ ಸ್ಪಿನ್ ಬೌಲಿಂಗ್ ಇತಿಹಾಸದಲ್ಲಿ ಒಂದು ರೀತಿಯ ಕ್ರಾಂತಿಯ ವಾಸ್ತುಶಿಲ್ಪಿಯಾಗಿದ್ದರು. ಭಾರತದ ಮೊದಲ ಏಕದಿನ ಪಂದ್ಯದ ಗೆಲುವಿನಲ್ಲಿ ಬೇಡಿ ಪ್ರಮುಖ ಪಾತ್ರ ವಹಿಸಿದ್ದರು.
1975 ರ ವಿಶ್ವಕಪ್ ಪಂದ್ಯದಲ್ಲಿ ಬೇಡಿ 12 ಓವರ್ಗಳಲ್ಲಿ 8 ಮೇಡನ್ ಮಾಡಿ ಕೇವಲ 6 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದಿದ್ದರು. ಅವರ ಬೌಲಿಂಗ್ ಬೌಲಿಂಗ್ ನೆರವಿನಿಂದ ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸಿತ್ತು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 1500 ವಿಕೆಟ್ ಬಿಷನ್ ಸಿಂಗ್ ಬೇಡಿ ಅವರು 25 ಸೆಪ್ಟೆಂಬರ್ 1946 ರಂದು ಅಮೃತಸರದಲ್ಲಿ ಜನಿಸಿದರು. ಅವರು ಅದ್ಭುತ ಎಡಗೈ ಬೌಲರ್ ಆಗಿಸದ್ದು, 1966 ರಿಂದ 1979 ರವರೆಗೆ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ ನ ಪ್ರಮುಖ ಭಾಗವಾಗಿದ್ದರು. ಸಿಂಗ್ 22 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದರು. ಒಟ್ಟಾರೆ 67 ಟೆಸ್ಟ್ ಪಂದ್ಯಗಳಲ್ಲಿ 266 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬರೋಬ್ಬರಿ 1560 ವಿಕೆಟ್ ಪಡೆದಿದ್ದಾರೆ.
2023ರ ಏಕದಿನ ವಿಶ್ವಕಪ್ ಗೆ ಭಾರತ ಆತಿಥ್ಯ ವಹಿಸುತ್ತಿರುವ ಮಧ್ಯೆ ಈ ಕೆಟ್ಟ ಸುದ್ದಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.


