ಸರ್ವರಿಗೂ ಗುಣಮಟ್ಟದ ಆಹಾರ ಸಿಗಬೇಕು. ಹಣ ಕೊಟ್ಟು ಗೌರವಯುತವಾಗಿ ಊಟ ಮಾಡುವ ಮೂಲಕ ಸ್ವಾಭಿಮಾನದಿಂದ ಬೀಗಬೇಕು ಎಂಬ ಆಶಯಗಳನ್ನು ಇಟ್ಟುಕೊಂಡು ಯಶಸ್ವಿಯಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೊಸ ಮೆನು ಪರಿಚಯಿಸಲು ನಿರ್ಧರಿಸಲಾಗಿದೆ.
ರಾಗಿ ಮುದ್ದೆ, ಇಡ್ಲಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್ ಸೇರಿದಂತೆ ಹಲವು ತಿನಿಸುಗಳನ್ನು ನಿಗದಿಪಡಿಸಿದೆ. ಉಪಾಹಾರದಲ್ಲಿ ಇಡ್ಲಿ, ಪುಲಾವ್, ಬಿಸಿಬೇಳೆ ಬಾತ್, ಖಾರಾಬಾತ್, ಪೊಂಗಲ್, ಬ್ರೆಡ್ ಜಾಮ್, ಚೌಚೌಬಾತ್ ತಿನಿಸುಗಳು ಒಂದೊಂದು ದಿನ ಲಭ್ಯವಾಗಲಿದೆ.


