ತುಮಕೂರು: ಬಾಲಕಿಯೊಬ್ಬಳನ್ನು 15,000 ರೂ ಗೆ ಜೀತಕ್ಕೆ ಇರಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರಿನ ಕುಮಾರ್ ಮತ್ತು ಚೌಡಮ್ಮ ದಂಪತಿಗೆ ಸೇರಿದ ಹೆಣ್ಣುಮಗುವನ್ನು ಚೌಡಮ್ಮರ ತಂಗಿಯ ಅತ್ತೆ ಮತ್ತು ಮಾವ ತಮ್ಮ ಸಾಲವನ್ನು ತೀರಿಸಲಾಗದೆ ಮಗುವನ್ನು ಆಂಧ್ರದ ಹಿಂದೂಪುರದಲ್ಲಿ 15 ಸಾವಿರ ರೂಪಾಯಿಗಳಿಗೆ ಕೆಲಸಕ್ಕೆಂದು ಅಡವಿಟ್ಟಿದ್ದ ಪ್ರಕರಣ ತಡವಾಗಿ ಬೆಳಕಿದೆ.
ತುಮಕೂರಿನ ದಿಬ್ಬೂರಿನ ದೇವರಾಜ ಅರಸ್ ಹೌಸಿಂಗ್ ನಲ್ಲಿ ವಾಸವಾಗಿರುವ ಕುಮಾರ್ ಮತ್ತು ಚೌಡಮ್ಮ ದಂಪತಿಯ ಮಗುವನ್ನು ಆಂಧ್ರದ ಹಿಂದೂಪುರದಲ್ಲಿ ವಾಸವಿರುವ ತಂಗಿಯು ತನಗೆ ಹೆರಿಗೆಯಾಗಿದೆ ಸ್ವಲ್ಪ ದಿನಗಳ ಕಾಲ ಮಗುವನ್ನು ನನ್ನ ಬಳಿ ಕಳುಹಿಸಿಕೊಡು ಎಂದು ಕೇಳಿಕೊಂಡಿದ್ದಾರೆ.
ತಂಗಿಯ ಕಾರಣಕ್ಕೆ ಚೌಡಮ್ಮ ಮಗುವನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಅಲ್ಲಿಗೆ ಹೋದನಂತರ ಚೌಡಮ್ಮರ ತಂಗಿಯ ಅತ್ತೆ ಮತ್ತು ಮಾವ ತಾವು ಮಾಡಿದ ಸಾಲಕ್ಕಾಗಿ ಆಂಧ್ರದ ವ್ಯಕ್ತಿಯೊಬ್ಬರಿಗೆ 15 ಸಾವಿರ ರೂ.ಗಳಿಗೆ ಬಾತುಕೋಳಿ ಕಾಯಲು, ಮನೆಕೆಲಸ ಮಾಡಲು ಅಡವಿಟ್ಟಿದ್ದಾರೆ.
ಕೆಲವು ದಿನಗಳ ನಂತರ ಚೌಡಮ್ಮ ತಮ್ಮ ತಂಗಿಗೆ ಕರೆ ಮಾಡಿ ಮಗುವನ್ನು ವಾಪಾಸ್ ಕಳುಹಿಸಿಕೊಡಿ ಎಂದು ಕೇಳಿದ್ದಕ್ಕೆ ಒಂದು ತಿಂಗಳವರೆಗೆ ಹಲವು ಕಾರಣಗಳನ್ನು ಕೊಟ್ಟು ಮಗುವನ್ನ ಆಗ ಕಳುಹಿಸುತ್ತೇವೆ., ಈಗ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಒಂದು ತಿಂಗಳು ಕಳೆದರು. ಚೌಡಮ್ಮ ಮಗುವನ್ನು ಕಳುಹಿಸಿಕೊಟ್ಟಿದ್ದಾರೆ.
ಆದರೆ ಒಂದು ತಿಂಗಳು ಕಳೆದರು ಕಳುಹಿಸದ ಕಾರಣ ನೇರವಾಗಿ ಆಂಧ್ರಗೆ ಹೋಗಿ ವಿಚಾರಿಸಿದಾಗ ಅಡವಿಟ್ಟಿರುವ ಸಂಗತಿ ತಿಳಿದು ಬಂದಿದೆ.
ಕೂಡಲೇ ಕುಮಾರ್ ಕಾರ್ಮಿಕ ಸಂಘಟನೆಯ ಮೋಹನ್ ಮತ್ತು ನಾರಾಯಣ ಅವರ ಸಹಾಯ ಪಡೆದು ಪೊಲೀಸರ ಮೂಲಕ ಆಂಧ್ರಕ್ಕೆ ತೆರಳಿ ಮಗುವನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಪ್ರಕರಣ ಸಂಬಂಧ ಚೌಡಮ್ಮಳ ತಂಗಿಯ ಅತ್ತೆ ಮತ್ತು ಮಾವನ ಮೇಲೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA