nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಚಿವ ಸ್ಥಾನಕ್ಕೆ ಪಟ್ಟು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು

    April 13, 2026

    ಪುರುಷರಿಗೂ ‘ಶಕ್ತಿ’ ಟಿಕೆಟ್ ನೀಡಿ ಹಣ ಲೂಟಿ; ಐವರು ಕಂಡಕ್ಟರ್‌ ಗಳ ಅಮಾನತು

    April 13, 2026

    ಗುಬ್ಬಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಮರೋಪಾದಿ ಕ್ರಮ: ಶಾಸಕ ಎಸ್.ಆರ್.ಶ್ರೀನಿವಾಸ್

    April 13, 2026
    Facebook Twitter Instagram
    ಟ್ರೆಂಡಿಂಗ್
    • ಸಚಿವ ಸ್ಥಾನಕ್ಕೆ ಪಟ್ಟು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು
    • ಪುರುಷರಿಗೂ ‘ಶಕ್ತಿ’ ಟಿಕೆಟ್ ನೀಡಿ ಹಣ ಲೂಟಿ; ಐವರು ಕಂಡಕ್ಟರ್‌ ಗಳ ಅಮಾನತು
    • ಗುಬ್ಬಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಮರೋಪಾದಿ ಕ್ರಮ: ಶಾಸಕ ಎಸ್.ಆರ್.ಶ್ರೀನಿವಾಸ್
    • ಕೊರಟಗೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ
    • ‘ಸರ್ಕಾರದ ಖಜಾನೆ ಖಾಲಿ, ಸಿಬ್ಬಂದಿಗೆ ಸಂಬಳವಿಲ್ಲ’: ಕಾಂಗ್ರೆಸ್ ವಿರುದ್ಧ ವಿ.ಸೋಮಣ್ಣ ವಾಗ್ದಾಳಿ
    • ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಪರಮೇಶ್ವರ್ ಗೆ ನೇರ ಪ್ರಶ್ನೆ: ಕೆಆರ್‌ ಎಸ್ ಪಕ್ಷದ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ಕಿಡಿ
    • ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
    • ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ: ಗೇಟ್ ಹತ್ತಿ ಎಸ್ಕೇಪ್ ಆದ ವಿದ್ಯಾರ್ಥಿನಿ: ರಾತ್ರಿ 11ಕ್ಕೆ ಹೊರಕ್ಕೆ ಮುಂಜಾನೆ 5ಕ್ಕೆ ಒಳಗೆ..
    ಕೊರಟಗೆರೆ July 16, 2023

    ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ: ಗೇಟ್ ಹತ್ತಿ ಎಸ್ಕೇಪ್ ಆದ ವಿದ್ಯಾರ್ಥಿನಿ: ರಾತ್ರಿ 11ಕ್ಕೆ ಹೊರಕ್ಕೆ ಮುಂಜಾನೆ 5ಕ್ಕೆ ಒಳಗೆ..

    By adminJuly 16, 2023No Comments3 Mins Read
    koratagere
    • ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.

    ಕೊರಟಗೆರೆ : ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸೀಗಲೆಂದು ಪೋಷಕರು ಹಗಲುರಾತ್ರಿ ಎನ್ನದೇ ದುಡಿದು ಕಷ್ಟಪಡ್ತಾರೇ.. ಶಾಲಾ–ಕಾಲೇಜಿನಲ್ಲಿ ಶಿಕ್ಷಕರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶ್ರಮಿಸ್ತಾರೇ. ಆದರೇ ಇಲ್ಲೊಂದು ವಸತಿ ಶಾಲೆಯಲ್ಲಿ ತಡರಾತ್ರಿ ವಿದ್ಯಾರ್ಥಿಯೇ ಗೇಟ್ ಹತ್ತಿ ಹೊರಗಡೆ ಹೋಗ್ತಾಳೇ.. ರಾತ್ರಿಯಿಡಿ ಹೊರಗಡೆ ಇದ್ದು ಮತ್ತೇ ಅದೇ ನಿಲಯಕ್ಕೆ ಯಾರ ಭಯವು ಇಲ್ಲದೇ ಮುಂಜಾನೇ ವಾಪಸ್ ಬರ್ತಾಳೇ.. ಹಾಗಾದ್ರೇ ಸಮಾಜ ಕಲ್ಯಾಣ ಇಲಾಖೆಯ ಪಾತ್ರವೇನು ಎಂಬುದೇ ಯಕ್ಷಪ್ರಶ್ನೆ..?

    ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿನ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ತಡರಾತ್ರಿ 11ಗಂಟೆ 21 ನಿಮಿಷಕ್ಕೆ ಇಂತಹದೊಂದು ಘಟನೆ ನಡೆದಿದೆ. ವಸತಿ ನಿಲಯದ ವಾರ್ಡನ್ ಶೃತಿ.ಜಿ ತಮ್ಮ ಕರ್ತವ್ಯ ಮುಗಿಸಿ 6ಗಂಟೆಗೆ ಮನೆಗೆ ಹೋದ ನಂತರ ಕಾವಲುಗಾರ ಇರುವ ವೇಳೆ ಲೋಪ ಉಂಟಾಗಿದೆ. ಖಾಸಗಿ ವ್ಯಕ್ತಿ ಚಿತ್ರಿಕರಣ ಮಾಡಿರುವ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.


    Provided by
    Provided by

    ವಿದ್ಯಾರ್ಥಿನಿಗಾಗಿ ರಾತ್ರಿಯಿಡಿ ಹುಡುಕಾಟ..

    ವಿದ್ಯಾರ್ಥಿ ನಿಲಯದಿಂದ ಎಸ್ಕೇಪ್ ಆದ ಕೇಲವೇ ಕ್ಷಣದಲ್ಲಿಯೇ ಕಾವಲುಗಾರ್ತಿ ಲಲಿತಮ್ಮಗೆ ದೂರವಾಣಿ ಕರೆ ಬರುತ್ತೇ. ತಕ್ಷಣ ಎಚ್ಚೇತ್ತ ವಾರ್ಡನ್ ಶೃತಿ ಸ್ಥಳಕ್ಕೆ ಆಗಮಿಸಿ ಕೊರಟಗೆರೆ ಪಟ್ಟಣದ ಕಾಲೇಜು ಮೈದಾನ, ಗೊರವನಹಳ್ಳಿ ರಸ್ತೆ, ಊರ್ಡಿಗೆರೆ ಕ್ರಾಸ್, ಡಿಗ್ರಿ ಕಾಲೇಜು ಸೇರಿದಂತೆ ಹತ್ತಾರು ಕಡೆಯಲ್ಲಿ ರಾತ್ರಿಯಿಡಿ ಹುಡುಕಾಟ ನಡೆಸಿದ್ರು ಸಿಕ್ಕಿಲ್ಲ. ನಂತರ ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಯಾರ ಭಯವು ಇಲ್ಲದೇ ಮತ್ತೇ ನಿಲಯಕ್ಕೆ ಹಿಂದಕ್ಕೆ ಬಂದು ಕೊಠಡಿಯೊಳಗೆ ಸೇರಿಕೊಂಡಿದ್ದಾಳೆ.

    ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ್, ಕೊರಟಗೆರೆ ಪಿಎಸೈ ಚೇತನ್‍ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಲಯದಲ್ಲಿದ್ದ ವಿದ್ಯಾರ್ಥಿಯನ್ನು ಸಮಾಜ ಕಲ್ಯಾಣ ಇಲಾಖೆ ಪೋಷಕರ ಜವಾಬ್ದಾರಿಗೆ ನೀಡಿದೆ. ಕೊರಟಗೆರೆ ತಾಲೂಕು ದುಗ್ಗೆನಹಳ್ಳಿಯ ಆಟೋ ಚಾಲಕ ಆರ್ಯಗೌಡ(26) ಮತ್ತು ಟಾಟಾ ಎಸಿ ಆಟೋ ಪೊಲೀಸರ ಅತಿಥಿಯಾಗಿದ್ದಾನೆ. ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ದೂರಿನ ಅನ್ವಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    358 ಜನ ವಿದ್ಯಾರ್ಥಿಗಳ ರಕ್ಷಣೆ ಯಾರದ್ದು..?

    ಕೊರಟಗೆರೆ ಪಟ್ಟಣದ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ–50, ಬಾಲಕರ ವಿದ್ಯಾರ್ಥಿ ನಿಲಯ–70, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ–90, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ–90 ಮತ್ತು ಅಕ್ಕಿರಾಂಪುರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ–58ಜನ ಸೇರಿ ಒಟ್ಟು 358 ಜನ ಇರುವ ವಸತಿ ನಿಲಯದಲ್ಲಿ ಸಿಸಿಟಿವಿ ಲಭ್ಯವಿದ್ರು, ವಿದ್ಯಾರ್ಥಿಗಳಿಗೆ ರಾತ್ರಿ ಪಾಳೇಯದ ಭದ್ರತೆಯಲ್ಲಿ ಲೋಪ ಉಂಟಾಗಿದೆ.

    ರಾತ್ರಿ ವೇಳೆ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ:

    ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕೊರಟಗೆರೆ ಪಟ್ಟಣ ಮತ್ತು ಅಕ್ಕಿರಾಂಪುರ ಸೇರಿ ಒಟ್ಟು 5 ವಿದ್ಯಾರ್ಥಿ ನಿಲಯಗಳಿವೆ. ಪ್ರಸ್ತುತ ವಾಸವಿರುವ 358 ಜನ ವಿದ್ಯಾರ್ಥಿಗಳಿಗೆ ಸಿಸಿಟಿವಿಯ ಭದ್ರತೆ ನೆಪಮಾತ್ರ ಅಷ್ಟೆ. ಮಕ್ಕಳ ಜವಾಬ್ದಾರಿ ಹೊತ್ತ ವಾರ್ಡನ್ ಸಂಜೆ 6 ಗಂಟೆಗೆ ಜಾಗ ಖಾಲಿ ಮಾಡ್ತಾರೇ. 6 ಗಂಟೆ ನಂತರ ಬರುವ ಕಾವಲುಗಾರ ಊಟ ಮಾಡಿದ ನಂತರ ಮಕ್ಕಳು ಮಲಗುವ ಮುಂಚೆಯೇ ಕೊಠಡಿ ಸೇರಿಕೊಳ್ತಾರೇ. ವಿದ್ಯಾರ್ಥಿಗಳಿಗೆ ರಕ್ಷಣೆಯ ಜೊತೆಗೆ ಅಧಿಕಾರಿಗಳ ಭಯವು ಸಹ ಇಲ್ಲದೇ ಅಭದ್ರತೆ ಸೃಷ್ಟಿಯಾಗಿದೆ.

    ರಾತ್ರಿ11ಕ್ಕೆ ಹೊರಕ್ಕೆ ಮುಂಜಾನೆ 5ಕ್ಕೆ ಒಳಗೆ:

    ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಾಸವಿರುವ 17 ವರ್ಷದ ವಿದ್ಯಾರ್ಥಿನಿ ಶುಕ್ರವಾರ ತಡರಾತ್ರಿ 11 ಗಂಟೆ 21ನಿಮಿಷಕ್ಕೆ ನಿಲಯದ ಬಾಗಿಲಿನ ಗೇಟ್ ಹತ್ತಿ ಹೊರಗಡೆ ಹೋಗ್ತಾಳೆ. ಮತ್ತೇ ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಮತ್ತೇ ಅದೇ ಗೇಟ್ ಹತ್ತಿ ಒಳಗಡೆ ಬರ್ತಾಳೆ. ವಿದ್ಯಾರ್ಥಿ ಹೊರಗಡೆ ಹೋಗುವ ದೃಶ್ಯ ನಿಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊರಗಡೆ ಬಂದ ನಂತರ ಆಟೋ ಹತ್ತಿ ಹೋಗುವ ದೃಶ್ಯ ಖಾಸಗಿ ವ್ಯಕ್ತಿಯ ಮೊಬೈಲ್‍ ನಲ್ಲಿ ಸೆರೆಯಾಗಿದೆ. ಎರಡು ವಿಡೀಯೊಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ.

    ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಕಾವಲುಗಾರರಿಂದ ಭದ್ರತೆಯ ಲೋಪ ಆಗಿದೆ. ನಿಲಯದ ಇಬ್ಬರ ಮೇಲೆ ಕ್ರಮಕ್ಕೆ ಇಲಾಖೆಗೆ ಸೂಚಿಸಲಾಗಿದೆ. ಪೊಲೀಸರಿಂದ ಸಿಸಿಟಿವಿ ಮತ್ತು ಖಾಸಗಿ ವಿಡೀಯೊ ದೃಶ್ಯಾವಳಿ ಪರಿಶೀಲನೆ ನಡೆದಿದೆ. ಟಾಟಾ ಎಸಿ ಆಟೋ ಮತ್ತು ಆರೋಪಿ ಪೊಲೀಸರ ವಶದಲ್ಲಿ ಇದ್ದಾನೆ. ಕೊರಟಗೆರೆ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಗಡೆ ಬರಲಿದೆ.

    -ಮುನಿಶಾಮಿ ರೆಡ್ಡಿ. ತಹಶೀಲ್ದಾರ್. ಕೊರಟಗೆರೆ.

     

    ವಿದ್ಯಾರ್ಥಿಯೇ ತಡರಾತ್ರಿ 11 ಗಂಟೆ ವೇಳೆ ಗೇಟ್ ಹತ್ತಿ ಇಳಿದು ಕಾರಿಗೆ ಹತ್ತಿರುವ ವಿಡೀಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾರ್ಡನ್ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ನಂತರ ಕಾವಲುಗಾರ್ತಿ ಬಂದಿದ್ದಾರೆ. ರಾತ್ರಿವೇಳೆ ನಿದ್ದೆ ಟೈಂನಲ್ಲಿ ಇಂತಹ ಘಟನೆ ನಡೆದಿದೆ. ಆರೋಪಿ ಆಟೋ ಡ್ರೈವರ್ ಈಗ ಪೊಲೀಸರ ವಶದಲ್ಲಿ ಇದ್ದಾನೆ. ಪೊಲೀಸರ ತನಿಖೆಯಿಂದ ನಿಲಯದ ಇನ್ನಷ್ಟು ಸತ್ಯಾಂಶ ಹೊರಗಡೆ ಬರಲಿದೆ.

    –ಕೃಷ್ಣಪ್ಪ.ಎಸ್. ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ. ತುಮಕೂರು.

     


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಕೊರಟಗೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ

    April 13, 2026

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಸಚಿವ ಸ್ಥಾನಕ್ಕೆ ಪಟ್ಟು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು

    April 13, 2026

    ಬೆಂಗಳೂರು: ಕರ್ನಾಟಕದಲ್ಲಿ ಸಚಿವ ಸಂಪುಟ ಪುನರ್‌ ರಚನೆಗೆ ಆಗ್ರಹಿಸಿ ಕಾಂಗ್ರೆಸ್‌ ನ ಸುಮಾರು 25ಕ್ಕೂ ಹೆಚ್ಚು ಹಿರಿಯ ಶಾಸಕರ ತಂಡ…

    ಪುರುಷರಿಗೂ ‘ಶಕ್ತಿ’ ಟಿಕೆಟ್ ನೀಡಿ ಹಣ ಲೂಟಿ; ಐವರು ಕಂಡಕ್ಟರ್‌ ಗಳ ಅಮಾನತು

    April 13, 2026

    ಗುಬ್ಬಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಮರೋಪಾದಿ ಕ್ರಮ: ಶಾಸಕ ಎಸ್.ಆರ್.ಶ್ರೀನಿವಾಸ್

    April 13, 2026

    ಕೊರಟಗೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ

    April 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.