ಪಾವಗಡ: 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಇಡದೇ ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿರುವ ಘಟನೆ ನಡೆದಿದೆ.
ಪುರಸಭೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಅಂಬೇಡ್ಕರ್ ಭಾವ ಚಿತ್ರವನ್ನಿಡದೆದೇ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೋಟೋವನ್ನು ಮಾತ್ರವೇ ಇಟ್ಟು ಗಣರಾಜ್ಯೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಘಟನೆಯನ್ನು ಖಂಡಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಅಂಬೇಡ್ಕರ್ ಅವರ ಫೋಟೋವನ್ನು ತರಿಸಿ ಇಡಲಾಗಿದೆ.
ಇನ್ನೂ ಅಂಬೇಡ್ಕರ್ ಭಾವ ಚಿತ್ರ ಯಾಕೆ ಹಾಕಲಾಗಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಮುಖ್ಯಾಧಿಕಾರಿ ಜಗರೆಡ್ಡಿ ಅವರನ್ನು ಪ್ರಶ್ನಿದಾಗ ಏರು ಧ್ವನಿಯಲ್ಲಿ ಮಾತನಾಡುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಈ ವೇಳೆ ಪುರಸಭೆಯ ಕೆಲವು ಅಧಿಕಾರಿಗಳು ತರಾಟೆಗೆತ್ತಿಕೊಂಡ ಬಳಿಕ ಅಂಬೇಡ್ಕರ್ ಫೋಟೋ ಇಟ್ಟಿದ್ದಾರೆ.
ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸಂವಿಧಾನ ಶಿಲ್ಪಿಯ ಫೋಟೋ ಇಟ್ಟು ಗೌರವಿಸಲು ಬಹಳ ಕಷ್ಟಕರವಾಗುತ್ತಿದೆ. ಇಂತಹ ಅಧಿಕಾರಿಗಳು ಸರ್ಕಾರಿ ಕೆಲಸದಲ್ಲಿರಲು ಯೋಗ್ಯರೇ ಅನ್ನೋದನ್ನು ಸರ್ಕಾರ ಗಮನಿಸಬೇಕಿದೆ. ಸರ್ಕಾರದ ಉದಾಸೀನದ ವರ್ತನೆ ಇಂತಹ ಅಧಿಕಾರಿಗಳಿಗೆ ವರದಾನವಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ. ಈ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy