ವೈ.ಎನ್.ಹೊಸಕೋಟೆ: ವಲಯದ ಆರ್.ಡಿ.ರೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಸ್ಥಳೀಯ ಹಳೆಯ ವಿದ್ಯಾಥಿ೯ಗಳ ಸಹಯೋಗದಲ್ಲಿ ಶುದ್ಧ ಕುಡಿಯುವ ಫಿಲ್ಟರ್ ಅಳವಡಿಕೆ ಮಾಡಲಾಯಿತು. ಕ್ಷೇತ್ರದಿಂದ ಪ್ರಸಾದ ರೂಪದಲ್ಲಿ ಬಂದಂತಹ ಸಹಾಯಧನ ಮುಂಜೂರಾತಿ ಪತ್ರವನ್ನು ಇದೇ ವೇಳೆ ವಿತರಿಸಲಾಯಿತು.
ಶ್ರೀ ಕ್ಷೇತ್ರಧಮ೯ಸ್ಥಳ ಗ್ರಾಮಾಭಿವೃದ್ದಿಯೋಜನೆಯ ತಾಲ್ಲೂಕಿನ ಯೋಜನಾಧಿಕಾರಿಗಳಾದ ಮಹೇಶ್ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯಾದಂತಹ ಸಾವಿರಾರು ಶಾಲೆಗಳಿಗೆ ಶುದ್ಧ ನೀರು ಫಿಲ್ಟರ್ ಗಳನ್ನ ನೀಡಿರುವುದು ಶ್ಲಾಘನೀಯ ಎಂದರು.
ಕಾಯ೯ಕ್ರಮದಲ್ಲಿ ಊರಿನ ಮುಖಂಡರಾದ ಪಾತಣ್ಣ (ವಕೀಲರು )ರವರು 7000/- ಸಾವಿರ ಆರ್ಥಿಕ ಸಹಾಯಧನ ನೀಡಿದ್ದು, ಇನ್ನೂ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ ಮತ್ತು ವಲಯ ಮೇಲ್ವಿಚಾರಕರಾದ ಮಹಮದ್ ಸೇವಾಪ್ರತಿನಿಧಿ ಮಹೇಶ್ ಶಾಲೆ SDMC ಅಧ್ಯಕ್ಷರಾದ ನಾಗರಾಜ್ ಊರಿನ ಎಲ್ಲಾ ಹಳೆ ವಿದ್ಯಾರ್ಥಿಗಳ ಆರ್ಥಿಕ ಸಹಾಯ ಮಾಡಿರುವ ಮಲ್ಲಿ, ಮುತ್ಯಾಲಪ್ಪ, ಸುಬ್ರಹ್ಮಣ್ಯ ಸಕ್ರಪ್ಪ ಮಹೇಂದ್ರ, ಮಹೇಶ್, ಅಕ್ಕಪ್ಪ, ಮನೋಜ್ ಇನ್ನೂ ಅನೇಕ ವಿದ್ಯಾರ್ಥಿಗಳು ಸಹಾಯ ಮಾಡಿರುತ್ತಾರೆ ಮತ್ತು ಶಾಲಾ ಎಲ್ಲಾ ಪುಟಾಣಿ ಮಕ್ಕಳು / ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4