ತುಮಕೂರು: ತುಮಕೂರು ತಾಲ್ಲೂಕು ಕಸಬಾ ಹೋಬಳಿ ಸ್ವಾಂದೇನಹಳ್ಳಿ ಗ್ರಾಮದಲ್ಲಿ ಫೆಬ್ರವರಿ 13 ಮತ್ತು 14ರಂದು “ಶ್ರೀ ಆದಿಶಕ್ತಿ ಸ್ವಾಂದೇನಹಳ್ಳಿ ಗ್ರಾಮದೇವತೆ ಮಾರಮ್ಮನವರ ನೂತನ ಸ್ಥಿರ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರಕ್ಕೆ ಕಳಸ ಪ್ರತಿಷ್ಠಾಪನಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 13ರಂದು ಸಂಜೆ 4 ಗಂಟೆಗೆ ಗೋಧೂಳಿ ಲಗ್ನದ ಸುಮುಹೂರ್ತದಲ್ಲಿ ಗಣಪತಿಪೂಜೆ, ಗಂಗಾಪೂಜೆ, ಕುಲದೇವತಾ ಪ್ರಾರ್ಥನೆ, ಯಾಗಶಾಲಾ ಪ್ರವೇಶ, ಸ್ವಸ್ತಿಪುಣ್ಯಾಃ, ರಕ್ಷಾಬಂಧನ, ಮಹಾಸಂಕಲ್ಪ, ದೇವಾನಾಂದಿ, ನವಗ್ರಹ ಪೂಜೆ, ಕಳಸಗಳ ಆರಾಧನೆ, ಅಮ್ಮನವರ ಪೀಠಸ್ಥಾಪನೆ, ಚಕ್ರಸ್ಥಾಪನೆ, ಜಲಾದಿವಾಸ, ಕ್ಷೀರಾದಿವಾಸ, ಧಾನ್ಯದಿವಾಸ, ಶಯ್ಯಾದಿವಾಸ, ಪುಷ್ಪದಿವಾಸ, ಗಣಪತಿ ಹೋಮ, ನವಗ್ರಹ ಹೋಮ, ರಾಕ್ಷೋಘ್ನ ಹೋಮ, ಅಘೋರ ಹೋಮ, ಬಲಿಹರಣ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುವುದು.
ಜನವರಿ 14ರಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಆದಿಶಕ್ತಿ ಗ್ರಾಮದೇವತೆ ಮಾರಮ್ಮನವರ ಪ್ರಾಣಪ್ರತಿಷ್ಠೆ, ನೇತ್ರೋನ್ಮಿಲನ, ದೃಷ್ಠಿ, ಗರ್ಭಗುಡಿ ಗೋಪುರಕ್ಕೆ ಕಳಸಾರೋಹಣ, ಪ್ರಾಣಪ್ರತಿಷ್ಠಾಪನ ಹೋಮ, ತ್ರಿಶಕ್ತಿಯರ ಹೋಮ, ವಾಸ್ತುಹೋಮ, ಕಲಾಹೋಮ, ಅಷ್ಠದಿಕ್ಬಾಲಕರ ಹೋಮ, ಜಯಾದಿ ಪ್ರಾಯಶ್ಚಿತ ಹೋಮ, ದೇನುದರ್ಪಣ, ಕವಳಿಛೇದನ, ಬಲಿಹರಣ, ಮಹಾಪೂರ್ಣಾಹುತಿ, ಅಲಂಕಾರ ವೇದಘೋಷ, ಮಂತ್ರಪುಷ್ಪ, ಮಹಾ ಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗಿಸಲಾಗುವುದು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಗಂಗಾ ಕ್ಷೇತ್ರದ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿ, ಹಾಗೂ ಕಿರಿಯ ಸ್ವಾಮೀಜಿ ಶ್ರೀ ಶಿವ ಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸುವರು. ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅಧ್ಯಕ್ಷತೆವಹಿಸುವರು. ಪೂಜಾ ಕಾರ್ಯಕ್ರಮದಲ್ಲಿ ಮಧುಗಿರಿಯ ವೇ. ಬ್ರ.ಶ್ರೀ ಭಾರಾದ್ವಾಜ್ ಆಚಾರ್ಯ ಮತ್ತು ವೃಂದದವರು, ಶಿಲ್ಪಿ ಉಮಾಶಂಕರ್ ಆಚಾರ್ಯರು ಭಾಗವಹಿಸುವರು.
ಈ ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ಸಕಲ ಭಕ್ತಾಧಿಗಳು ಆಗಮಿಸಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಸ್ವಾಂದೇನಹಳ್ಳಿ ಶ್ರೀ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೋದಂಡರಾಮು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4