ತುಮಕೂರು: ಗಣೇಶನ ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಂಡು ಬರುತ್ತಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಸುಗಮವಾಗಿ ಹಬ್ಬ ಆಚರಿಸಲು ಅನುಕೂಲವಾಗುವಂತೆ ತುಮಕೂರು ಜಿಲ್ಲಾ ಪೊಲೀಸ್ ಕೆಲವೊಂದು ಮಾರ್ಗದರ್ಶನ, ಸೂಚನೆಗಳನ್ನ ನೀಡಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು:
ಗಣೇಶ ಪ್ರತಿಷ್ಠಾಪನೆ ಮಾಡುವ ಮೊದಲು ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು.
ಪಿಓಪಿಗಳಿಂದ ಮಾಡಲ್ಪಟ್ಟ ವಿಗ್ರಹಗಳ ಬಳಕೆಯನ್ನು ತಪ್ಪಿಸಿ ಪರಿಸರಸ್ನೇಹಿ ವಸ್ತುಗಳಿಂದ ಮಾಡಲ್ಪಟ್ಟ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು.
ಗಣೇಶ ಮಂಟಪದಲ್ಲಿ ಅಥವಾ ಮೆರವಣಿಗೆ ಸಮಯದಲ್ಲಿ ಅಶ್ಲೀಲ ನೃತ್ಯ, ಅಶ್ಲೀಲ ಚಿತ್ರಗೀತೆಗಳು, ಸಂಭಾಷಣೆ ಅಥವಾ ಸ್ಥಬ್ದ ಚಿತ್ರಗಳನ್ನು ಹಾಕಬಾರದು ಹಾಗೂ ಕೋಮು ಪ್ರಚೋದಕ/ಉದ್ರೇಕಕಾರಿ ಘೋಷಣೆಗಳನ್ನು ಕೂಗುವಂತಿಲ್ಲ. ಸದಾಕಾಲ ಮಂಟಪದಲ್ಲಿ ಸ್ವಯಂ ಸೇವಕರು ಇರಬೇಕು.
ಗಣೇಶ ಮಂಟಪಗಳಿಂದ ವಾಹನ ಸಂಚಾರಕ್ಕೆ ಅದರಲ್ಲೂ ಕೂಡ ಸಾರ್ವಜನಿಕರ ಸಂಚಾರಕ್ಕೆ ಮತ್ತು ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವಂತೆ ಮಂಟಪಗಳನ್ನು ನಿರ್ಮಿಸಕೂಡದು ಹಾಗೂ ಅಗ್ನಿ ಅನಾಹುತಗಳಿಗೆ ಆಸ್ಪದವಾಗದಂತೆ ಮಂಟಪಗಳನ್ನು ನಿರ್ಮಿಸುವುದು.
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ಕಂಬ ಹೈಟೆನ್ಷನ್ ಕೇಬಲ್ ಗಳ ಬಗ್ಗೆ ಎಚ್ಚರ ವಹಿಸುವುದು ಹಾಗೂ ನಿಗದಿಪಡಿಸಿದ ಜಾಗಗಳಲ್ಲಿ/ನಿಮ್ಮ ಹತ್ತಿರದ ಕೆರೆಗಳಲ್ಲಿ ಜಲಮೂಲಗಳಿಗೆ ಹಾನಿ ಉಂಟುಮಾಡದ ಹಾಗೆ ವಿಸರ್ಜನೆ ಮಾಡುವುದು.
ಹಬ್ಬದ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮುದ್ವೇಷ ಉಂಟು ಮಾಡುವವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.
ಮಂಟಪಗಳಿಗೆ ಆಗಮಿಸುವಂತಹ ಭಕ್ತರಿಂದ, ಸಾರ್ವಜನಿಕರಿಂದ ಒತ್ತಾಯವಾಗಿ, ಚಂದಾ, ಪ್ರವೇಶ ಶುಲ್ಕ ಹಾಗೂ ಲಾಟರಿ ಮೂಲಕ ಹಣ ಪಡೆಯುವಂತಿಲ್ಲ.
ಯಾವುದೇ ತುರ್ತು ಸಂದರ್ಭಗಳಲ್ಲಿ 112 ಗೆ ಕರೆ ಮಾಡಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC