ತುಮಕೂರು: ತುಮಕೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ಅಂತರಾಷ್ಟ್ರೀಯ ತುಮಕೂರು ಮಹಿಳಾ ಓಪನ್ ಟೆನ್ನಿಸ್ ಚಾಂಪಿಯನ್ ಶಿಪ್ ಟೂರ್ನಿಮೆಂಟ್ ನ ಲಾಂಛನ ಅನಾವರಣ ಮಾಡಿದೆ.
ತುಮಕೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಟೆನ್ನಿಸ್ ಕ್ರೀಡಾಂಗಣವನ್ನು ನಿರ್ಮಿಸಿದ ಬಳಿಕ ಇದೇ ಮೊದಲ ಬಾರಿಗೆ ವಿಶ್ವ ಮಟ್ಟದ ಕ್ರೀಡಾಕೂಟ ನಡೆಯಲಿದೆ.
ತುಮಕೂರು ಜಿಲ್ಲಾಡಳಿತ, ತುಮಕೂರು ಟೆನ್ನಿಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್ ಸಹಕಾರದಲ್ಲಿ ಮೇ 3ರಿಂದ ಮೇ 10 ರವರೆಗೆ ಟೂರ್ನಿಮೆಂಟ್ ನಡೆಯಲಿದ್ದು, ವಿಶ್ವಾದ್ಯಂತ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಈ ಕ್ರೀಡಾಕೂಟವು “ತುಮಕೂರು ಓಪನ್ ಚಾಂಪಿಯನ್ ಶಿಪ್” ಎಂದೇ ವಿಶ್ವ ಟೆನ್ನಿಸ್ ಭೂಪಟದಲ್ಲಿ ಕರೆಯಲ್ಪಡಲಿದೆ. ಇಲ್ಲಿ ಆಡುವ ಕ್ರೀಡಾಪಟುಗಳು ವಿಜೇತರಾದಲ್ಲಿ 35 ಪಾಯಿಂಟ್ ಗಳನ್ನು ಹಾಗೂ 30 ಸಾವಿರ ಅಮೆರಿಕಾ ಡಾಲರ್ಗಳನ್ನು ಗೆಲ್ಲಲಿದ್ದಾರೆ. ಅಲ್ಲದೆ ನಂತರದ ಸ್ಥಾನವನ್ನು ಹೊಂದುವ ಆಟಗಾರರು ಅಂತಾರಾಷ್ಟ್ರೀಯ ರ್ಯಾಂಕ್ಗಳನ್ನು ಪಡೆಯಲಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಓ ಬಿ.ವಿ.ಆಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ, ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್ನ ಪದಾಧಿಕಾರಿ ಅಮರ್ ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


