nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

    February 24, 2026

    ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ

    February 24, 2026

    ಶಿವಮೊಗ್ಗ: ಸಹಪಾಠಿಗಳ ಜಗಳ ಬಿಡಿಸಲು ಹೋದ SSLC  ವಿದ್ಯಾರ್ಥಿ ಬಲಿ

    February 24, 2026
    Facebook Twitter Instagram
    ಟ್ರೆಂಡಿಂಗ್
    • ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ
    • ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ
    • ಶಿವಮೊಗ್ಗ: ಸಹಪಾಠಿಗಳ ಜಗಳ ಬಿಡಿಸಲು ಹೋದ SSLC  ವಿದ್ಯಾರ್ಥಿ ಬಲಿ
    • ರಾಜಕೀಯ ಕಾರಣಕ್ಕೆ ಹೆಚ್‌ ಡಿಕೆಯವರನ್ನು ಭೇಟಿಯಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
    • ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
    • ಕಾಂತಾರಾ ಅಪಹಾಸ್ಯ ಪ್ರಕರಣ: ನಾಲಿಗೆ ಮೇಲೆ ಹಿಡಿತ ಇರ್ಬೇಕು:  ನಟ ರಣವೀರ್ ಸಿಂಗ್‌ ಗೆ ಹೈಕೋರ್ಟ್ ಚಾಟಿ!
    • ಗರ್ಭಿಣಿ ಪತ್ನಿಗೆ ಚಾಕುವಿನಿಂದ ಇರಿದು, ಬಾವಿಗೆ ಹಾರಿದ ಪತಿ: ಪತ್ನಿ ಅಪಾಯದಿಂದ ಪಾರು, ಪತಿ ಸಾವು
    • ಸಂವಿಧಾನ ಒಂದು ಜಾತಿ ವರ್ಗಕ್ಕೆ ಸೀಮಿತ ಎನ್ನುವುದು ಅಪಪ್ರಚಾರ: ಸಿ.ಬಿ.ಶಶಿಧರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ
    ತುಮಕೂರು February 24, 2026

    ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ

    By adminFebruary 24, 2026No Comments3 Mins Read
    tumakuru police

    ತುಮಕೂರು: ಜ್ಯುವೆಲರಿ ಶಾಪ್ ಗೆ ನುಗ್ಗಿ ಕಳವು ಮಾಡಿದ್ದ ಆರೋಪಿಗಳನ್ನು ಕೃತ್ಯ ನಡೆದ 12 ಗಂಟೆಯೊಳಗೆ ಸಿರಾ ಉಪವಿಭಾಗ ವ್ಯಾಪ್ತಿಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಕೆ.ವಿ. ಅಶೋಕ್ ಅವರು ಭಾನುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಸಿರಾ ತಾಲ್ಲೂಕು ಕಳ್ಳಂಬೆಳ್ಳ ಠಾಣಾ ಸರಹದ್ದಿನ ಬೆಂಚೆಗೇಟ್‌ನಲ್ಲಿರುವ ಶ್ರೀ ಜಗದಾಂಭ ಜ್ಯುವೆಲರ್ ಶಾಪ್‌ಗೆ ರಾಜಸ್ಥಾನ ಮೂಲದ ನಾಲ್ವರು ಸುಲಿಗೆಕೋರರು ನುಗ್ಗಿ ವ್ಯಾಪಾರದಲ್ಲಿ ನಿರತರಾಗಿದ್ದ ಅಜ್ಜು ನಾತಿದೇವಿ, ಮಮ್ಮುಗೆ ದಿನೇಶ್ ಎಂಬುವರ ಕಣ್ಣಿಗೆ ಕಾರದಪುಡಿ ಎರಚಿ ಶಟರ್ ಕ್ಲೋಸ್ ಮಾಡಿ 20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಗೋಲ್ಡ್ ಕವರಿಂಗ್ ಆಭರಣ ದೋಚಿ ಜೀಪ್‌ನಲ್ಲಿ ಪರಾರಿಯಾಗಿದ್ದರು. ಅಂಗಡಿ ಮಾಲೀಕರ ದೂರು ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಕಳ್ಳಂಬೆಳ್ಳ ಪಿಎಸ್‌ ಐ ಭೈರೇಗೌಡ, ಸಿರಾ ಗ್ರಾಮಾಂತರ ಸಿಪಿಐ ಡಿ.ಜಿ. ಶ್ರೀನಿವಾಸ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬೆನ್ನಟ್ಟಿದ್ದರು. ಸಿರಾ ನಗರದಲ್ಲಿ ಒಂದು ಸಾರ್ವಜನಿಕ ಬಂದೋಬಸ್ತ್ ಉಸ್ತುವಾರಿಯಲ್ಲಿದ್ದ ಎಎಸ್ಪಿ ಗೋಪಾಲ್, ಡಿವೈಎಸ್ಪಿ ಬಿ.ಕೆ. ಶೇಖರ್ ಅವರು ಪ್ರೊಬೆಷನರಿ ಐಪಿಎಸ್ ಅಧಿಕಾರಿ ರಾನುಗುಪ್ತ ಮಾರ್ಗದರ್ಶನದಲ್ಲಿ ಜೊತೆಗೂಡಿದ್ದು ಎಲ್ಲಾ ಪೊಲೀಸ್ ಠಾಣೆಗೂ ವಿಷಯ ಮುಟ್ಟಿಸಿ ನಾಕಾಬಂಧಿ ಹಾಕಿದರು. ಈ ಹಂತದಲ್ಲಿ ಸುಲಿಗೆಕೋರರು ತಾವರೆಕೆರೆ ಬಲೆ ಹಾಕಿದ್ದ ಬ್ಯಾರಿಕೇಡ್ ನೋಡಿ ವಾಪಸ್ ತಿರುಗಲು ಮುಂದಾದ ವೇಳೆ ಎಎಸ್ಪಿ ಅವರ ವಾಹನಕ್ಕೂ 5 ಅಡಿ ಅಂತರದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸುವ ಸನ್ನಿವೇಶ ಸೃಷ್ಟಿಯಾಯಿತು. ಆದರೆ ಅದೃಷ್ಟವಶಾತ್ ಯಾವುದೇ ಘಟನೆ ನಡೆಯಲಿಲ್ಲ. ಸುಲಿಗೆಕೋರರನ್ನು ಬೆನ್ನುತ್ತುವ ಜೊತೆಗೆ ಮಧ್ಯೆ ಬೀಟ್ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಭುವನಹಳ್ಳಿ, ಸೋರೆಕುಂಟೆ, ಮೇಕೆಹಳ್ಳಿ, ಕಂಚಪ್ಪನಹಳ್ಳಿ, ತಿತ್ತಾಗಾನಹಳ್ಳಿ, ನಿಂಬೆಮರದಹಳ್ಳಿ ರಸ್ತೆಗಳನ್ನು ಬ್ಲಾಕ್ ಮಾಡಿದ ಪರಿಣಾಮ ದಿಕ್ಕುತೋಚದಂತಾದ ಆರೋಪಿಗಳು ಮುಡಿಗೇರೆ ಕಾವಲನ ಮೇಕೆಹಳ್ಳಿ ಅರಣ್ಯ ಪ್ರದೇಶಕ್ಕೆ ನುಗ್ಗಿದರು.


    Provided by
    Provided by

    ಅರಣ್ಯಕ್ಕೆ ತೆರಳಿದ ಕ್ಷಿಪ್ರ ಕಾರ್ಯಾಚರಣೆ ತಂಡದ ಪೊಲೀಸರು ಭಾನುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆವರೆಗೆ ಕೂಂಬಿಂಗ್ ನಡೆಸಿ ವಾಹನ, ಮೊಬೈಲ್ ಟ್ರ್ಯಾಕಿಂಗ್, ಡ್ರೋನ್ ಸಾಧನದ ಮೂಲಕ ರಾಜಸ್ಥಾನ ಮೂಲದ ನಾಲ್ವರು ಆರೋಪಿಗಳಾದ ಅರವಿಂದ್ ಕುಮಾರ್ (28), ಡುಂಗರ್‌ಸಿಂಗ್ (24), ಮಹೇಂದರ್‌ಸಿಂಗ್ (32) ಹಾಗೂ ಮಧುಸಿಂಗ್ (28) ಅವರನ್ನು ಸೆರೆಹಿಡಿದು ಬಂಧಿತರಿಂದ 14 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, 3.25 ಲಕ್ಷ ಮೌಲ್ಯದ ಬೆಳ್ಳಿ ಪರಿಕರಗಳು, 2.75 ಲಕ್ಷ ಮೌಲ್ಯದ ಚಿನ್ನಲೇಪಿತ ಬೆಳ್ಳಿ ಆಭರಣಗಳು, ಕೃತ್ಯಕ್ಕೆ ಬಳಸಿದ್ದ ಆರ್‌ಜೆ 16 ಯುಯು 7398 ಸಂಖ್ಯೆಯ ಬುಲೆರೋ ವಾಹನ, 1 ಒಪ್ಪೋ, 1 ಐಫೋನ್ ಕಂಪನಿಯ ಮೊಬೈಲ್ ಸೇರಿ ಒಟ್ಟು 26 ಲಕ್ಷ ಮೌಲ್ಯದ ಆಭರಣ, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ವಿವರಿಸಿದರು.

    ಆರೋಪಿತರ ವಿರುದ್ಧ ಬೇರೆಡೆ ದೂರುಗಳು ದಾಖಲಾಗಿದೆಯೇ ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದ ಎಸ್ಪಿ ಕೆ.ವಿ.ಅಶೋಕ್ ಅವರು ಸುಲಿಗೆಕೋರರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವವರಾಗಿದ್ದು, ಶುಕ್ರವಾರವೇ ಜಿಲ್ಲೆಗೆ ಆಗಮಿಸಿ ಶನಿವಾರ ವಾಚ್ ಮಾಡಿ ಭಾನುವಾರ ಮಧ್ಯಾಹ್ನ ಕೃತ್ಯವೆಸಗಿದ್ದಾರೆ. ಆದರೆ ಕೃತ್ಯವೆಸಗಿದ 12 ತಾಸಿನೊಳಗೆ ಪೊಲೀಸರು ಯಶಸ್ವಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದು, ಕಾರ್ಯಾಚರಣೆ ತೊಡಗಿದ ಪೊಲೀಸ್ ಅಧಿಕಾರಿಗಳಿಗೆ ಸಿರಾ ಠಾಣೆ ಪಿ.ಐ.ಪ್ರವೀಣ್‌ಕುಮಾರ್, ರೇಣುಕಾಯಾದವ್ ಗುಬ್ಬಿ ವೃತ್ತದ ರಾಘವೇಂದ್ರ ಚೆಳೂರು ಠಾಣೆಯ ಮಾಳಪ್ಪ, ಎಎಸ್ ಐಗಳಾದ ನರಸಿಂಹಯ್ಯ, ನರಸಿಂಹಮೂರ್ತಿ, ಹುಚ್ಚೀರಣ್ಣ ಹಾಗೂ ಪೊಲೀಸರು ಸಾಥ್ ಕೊಟ್ಟಿದ್ದು, ಸುಲಿಗೆಕೋರರನ್ನು ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯ ಶ್ಲಾಘನೀಯ. ಕಾರ್ಯಾಚರಣೆ ಬಗ್ಗೆ ಕೇಂದ್ರ ವಲಯ ಐಜಿಪಿ ಸಹ ಅಭಿನಂದಿಸಿರುವುದಾಗಿ ಎಸ್ಪಿ ತಿಳಿಸಿದರು. ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರಿಗೆ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.

    ಸೂಕ್ತ ಭದ್ರತೆಯೊಂದಿಗೆ ವ್ಯವಹರಿಸಿ: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಚಿನ್ನ ಬೆಳ್ಳಿ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಎಚ್ಚರಿಕೆಯಿಂದ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಂಡು ವ್ಯಾಪಾರ ಮಾಡುವಂತೆ ಇದೇ ವೇಳೆ ಎಸ್ಪಿ ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್, ಸಿರಾ ಉಪವಿಭಾಗ ಡಿವೈಎಸ್ಪಿ ಶಬೀರ್, ಪ್ರೊಬೆಷನರಿ ಐಪಿಎಸ್ ರಾನಿಗಪ್ಪ ಹಾಗೂ ಸಿಪಿಐ ಶ್ರೀನಿವಾಸ್ ಸೇರಿ ಪತ್ತೆ ತಂಡದ ಪೊಲೀಸರು ಪಾಲ್ಗೊಂಡಿದ್ದರು.

    ಸುದ್ದಿಗೋಷ್ಠಿಯಲ್ಲಿ ಬೆಂಚೆಗೇಟ್ ಜ್ಯುವೆಲರಿ ಶಾಪ್ ಸುಲಿಗೆ, ಆರೋಪಿಗಳ ಬಂಧನ ಕುರಿತು ಎಸ್ಪಿ ಕೆ.ವಿ. ಅಶೋಕ್ ಮಾಹಿತಿ ನೀಡಿದರು. ಎಎಸ್‌ ಪಿಗಳು ಹಾಗೂ ಪತ್ತೆ ತಂಡದ ಪೊಲೀಸರು ಇದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

    February 24, 2026

    ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು, ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ: ನಿಖಿಲ್ ಕುಮಾರಸ್ವಾಮಿ ಕರೆ

    February 22, 2026

    ಫೆ.23ರಂದು ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

    February 22, 2026

    Leave A Reply Cancel Reply

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

    February 24, 2026

    ತುಮಕೂರು: ಮುಂಬರುವ ಬಜೆಟ್ ಅಧಿವೇಶನದಲ್ಲಿ ನೇರ ನೇಮಕಾತಿ, ಪದೋನ್ನತಿ, ಬ್ಯಾಕ್‌ ಲಾಗ್, ಕೆಪಿಎಸ್‌ ಸಿ, ಬಿಡಿಎ ಹಾಗೂ ಸರ್ಕಾರಿ ಗುತ್ತಿಗೆ…

    ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ

    February 24, 2026

    ಶಿವಮೊಗ್ಗ: ಸಹಪಾಠಿಗಳ ಜಗಳ ಬಿಡಿಸಲು ಹೋದ SSLC  ವಿದ್ಯಾರ್ಥಿ ಬಲಿ

    February 24, 2026

    ರಾಜಕೀಯ ಕಾರಣಕ್ಕೆ ಹೆಚ್‌ ಡಿಕೆಯವರನ್ನು ಭೇಟಿಯಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

    February 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.