ತುಮಕೂರು: ವಿವಿಧ ಪ್ರಯೋಜಕರೊಂದಿಗೆ ಬಿಸಿಸಿಐ ದೇಶದ 50 ಕಡೆ ಐಪಿಎಲ್ ಫ್ಯಾನ್ ಪಾಕ್ ಅನ್ನು ಆಯೋಜನೆ ಮಾಡುತ್ತಿದೆ. ಕರ್ನಾಟದಲ್ಲಿ 4 ನಾಲ್ಕು ನಗರಗಳಲ್ಲಿ ಫ್ಯಾನ್ ಪಾಕ್ ವ್ಯವಸ್ಥೆ ಮಾಡಿದೆ. ಮೈಸೂರು, ತುಮಕೂರು, ಬೆಳಗಾವಿ ಮತ್ತು ಮಂಗಳೂರು ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿ ಅಮಿತ್ ಸಿದ್ದೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಫ್ಯಾನ್ ಪಾಕ್ ಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಸ್ಟೇಡಿಯಂ ರೀತಿಯ ವಾತಾವರಣ ನಿಮಿಸುವ ಉದ್ದೇಶ ಹೊಂದಲಾಗಿದೆ. ಪೈನಲ್ ಪಂದ್ಯಗಳನ್ನು ವೀಕ್ಷಿಸಲು ಸ್ಟೇಡಿಯಂಗಳಿಗೆ ಹೋಗಲು ಟಿಕೆಟ್ ಖರೀದಿಸಬೇಕಿದೆ. ಆದ್ರೆ ಫ್ಯಾನ್ ಪಾಕ್ ಗಳಲ್ಲಿ ಉಚಿತ ಪ್ರವೇಶವಿರುತ್ತದೆ ಎಂದರು.
ಮುಖ್ಯವಾಗಿ ತುಮಕೂರಿನಲ್ಲಿ ಆರ್ ಸಿ ಬಿ ಫ್ಯಾನ್ಸ್ ಗಳು ಬಂದು ಫ್ಯಾನ್ ಪಾಕ್ ನಲ್ಲಿ ತಮ್ಮ ತಂಡವನ್ನು ಬೆಂಬಲಿಸಬಹುದಾಗಿದೆ. ಕುಡಿಯುವ ನೀರು, ರಕ್ಷಣೆ ದೃಷ್ಟಿಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ವಿವಿಧೆಡೆ ಫ್ಯಾನ್ ಪಾಕ್ ಅನ್ನು ಯೋಜನೆ ಮಾಡುತ್ತಿದೆ. ತುಮಕೂರು ನಗರದಲ್ಲಿ ಈ ಬಾರಿ ನಾಲ್ಕನೇ ಬಾರಿಗೆ ಫ್ಯಾನ್ ಪಾಕ್ ಆಯೋಜಿಸುತ್ತಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW