ರೈಲಿನಲ್ಲಿ ಮದ್ಯ ಒಯ್ಯಲು ಅವಕಾಶವಿದೆಯಾ, ಇದ್ದರೆ ಎಷ್ಟು ಬಾಟಲಿ ಒಯ್ಯಬಹುದು? 1989ರ ರೈಲು ಆಯಕ್ಟ್ ಹೇಳುವುದೇನು? ಈ ನಿಯಮ ಈಗಲೂ ಇದೆಯಾ? ಇಲ್ಲಿದೆ ವಿವರ.ಕಿ ರೈಲಿನಲ್ಲಿ ಮದ್ಯ ಒಯ್ಯಲು ಅವಕಾಶವಿದೆಯಾ ಅನ್ನೋದು ಹಲವರ ಪ್ರಶ್ನೆ.
ಹಲವರು 1989ರ ಭಾರತೀಯ ರೈಲ್ವೇ ಆ್ಯಕ್ಟ್ ಮುಂದಿಟ್ಟು ರೈಲಿನಲ್ಲಿ ಗರಿಷ್ಠ 2 ಲೀಟರ್ ಮದ್ಯ ಒಯ್ಯಲು ಅವಕಾಶವಿದೆ ಅನ್ನೋ ವಾದ ಮುಂದಿಡುತ್ತಾರೆ. ಆದರೆ ನಿಜಕ್ಕೂ 2 ಲೀಟರ್ ಮದ್ಯ ಒಯ್ಯಲು ಅವಕಾಶವಿದೆಯಾ? ಭಾರತೀಯ ರೈಲಿನಲ್ಲಿ ಮದ್ಯ ಒಯ್ಯಲು ಅವಕಾಶವಿಲ್ಲ. ಮದ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತೊಟ್ಟು ಹನಿ ಮದ್ಯವನ್ನು ಭಾರೀಯ ರೈಲಿನಲ್ಲಿ ಒಯ್ಯಲು ಅವಕಾಶವಿಲ್ಲ.
ಸೀಲ್ಡ್ ಬಾಟಲ್ ಇದ್ದರೂ ಭಾರತೀಯ ರೈಲಿನಲ್ಲಿ ಪ್ರಯಾಣಿಕರು ಮದ್ಯ ಒಯ್ಯಲು ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಹಾಗೂ ಜೈಲು ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಇದೆ.ಮದ್ಯದ ಬಾಟಲಿ ಅಥವಾ ಮದ್ಯದ ಜೊತೆ ರೈಲಿನಲ್ಲಿ ಸಿಕ್ಕಿಬಿದ್ದರೆ ಕನಿಷ್ಠ 1,000 ರೂಪಾಯಿ ದಂಡ, ಗರಿಷ್ಠ 3 ವರ್ಷದ ವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q