ಸರಕಾರ ಕೆಲವು ವರ್ಷಗಳ ಹಿಂದೆ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಹಲವಾರು ವಿರೋಧಗಳ ನಡುವೆ ಜಾರಿಗೆ ತಂದರು ಅವುಗಳಲ್ಲಿ ಮಾಟ–ಶೂನ್ಯ ಮಾಡುವುದು, ಜಾತ್ರೆಗಳಲ್ಲಿ ಬಾಯಿಗೆ ಬೀಗ ಹಾಕುವುದು, ಸಿಡಿ ಹಾಕುವುದು. ದೈಹಿಕವಾಗಿ ದೇವರ ಹೆಸರಿನಲ್ಲಿ ಹಿಂಸೆ ನೀಡುವುದು, ಮೊಹರಂ ಹಬ್ಬದಲ್ಲಿ ಕೆಲವು ಸ್ಥಳಗಳಲ್ಲಿ ಅಲ್ಪಸಂಖ್ಯಾತ ಧರ್ಮದವರು (ಇಸ್ಲಾಂ ) ದೇಹಕ್ಕೆ ಹರಿತವಾದ ಆಯುಧಗಳಿಂದ ಬಡಿದುಕೊಳ್ಳುವುದು, ಹಾಗೂ ದೇವಾಲಾಯಗಳಲ್ಲಿ ಪಟ್ಟಾ ಹೇಳುವುದು ಹಾಗೂ ಇತರೆ ಇವೆಲ್ಲಾ ನಿಷೇಧ ಆಗಿವೆ ಇದರಲ್ಲೂ ಕಾನೂನು ಅಪರಾಧಗಳು ಆಗಿವೆ. ಆದರೆ ಇವುಗಳನ್ನು ತಡೆಯಲು ಸಾಧ್ಯ ಆಗಿದೆಯಾ ಎಂದೂ ನೋಡುವುದಾದರೆ ಕೆಲವು ಮಾತ್ರ ಸಾಧ್ಯ ಆಗಿದೆ. ಆದರೆ ಕೆಲವು ದೇವಾಲಯಗಳಲ್ಲಿ ಪಟ್ಟಾ ಹೇಳುವುದು ಅಂದರೆ ಮೈ ಮೇಲೆ ದೇವರು ಬರುತ್ತದೆ ಎಂದೂ ಜನರನ್ನು ಮರಳು ಮಾಡಿ ಅಲ್ಲಿ ಜ್ಯೋತಿಷ್ಯ ಹೇಳುವುದು, ಇವು ಅಣಬೆಯಂತೆ ದೇಶದಲ್ಲಿ / ರಾಜ್ಯದಲ್ಲಿ ಕಂಡುಬರುತ್ತವೆ.
ಇಂತ ಸ್ಥಳದಲ್ಲಿ ಅವರನ್ನು ನೋಡಿದರೆ ಅವರ ಅವತಾರವನ್ನು ನೋಡಿದರೆ ನಗುವು ಬರುತ್ತದೆ, ಅಷ್ಟೆ ಕೋಪ ಬರುತ್ತದೆ. ಕಾರಣ ಇವೆಲ್ಲಾ ನಾಟಕಿಯ ದೃಶ್ಯಗಳೇ ಆಗಿರುತ್ತವೆ. ಅಮಾಯಕ ಭಕ್ತರನ್ನು ಸೆಳೆಯಲು ವಿವಿಧ ಭಂಗಿಗಳಿಂದ ನಟನೆ ಮಾಡುವುದು ಕಂಡು ಬರುತ್ತದೆ, ಅಮಾಯಕ ಭಕ್ತರು ಇವರನ್ನು ಭಗವಂತನೇ ಎಂಬಂತೆ ನಂಬುತ್ತಾರೆ. ಇವರು ಏನು ಹೇಳಿದರು ಅಂಧಭಕ್ತರು ನಂಬುತ್ತಾರೆ. ಅವರ ಸೇವೆಯನ್ನು ಸಹ ಮಾಡುತ್ತಾರೆ. ಈ ಬೂಟಾಟಿಕೆ ದೇವರುಗಳು ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯಲ್ಲಿ ಶೋಷಣೆ ಮಾಡುತ್ತಾರೆ. ಕೆಲವು ದೇವಾಲಯದಲ್ಲಿ ಪಟ್ಟಾ ಹೇಳಲು 200 ರೂ. 500 ರೂ. 1000 ರೂಪಾಯಿವರಿಗೂ ಕಾಣಿಕೆ(ಫೀಜು) ಪಡೆದು ಭಕ್ತರ ಸಂಬಂಧಪಟ್ಟಂತೆ ಜ್ಯೋತಿಷ್ಯ ಹೇಳುತ್ತಾರೆ. ಇದನ್ನು ಅಮಾಯಕ ಭಕ್ತರು ನಂಬುತ್ತಾರೆ. ಕೆಲವು ಬುದ್ದಿವಂತ ಭಕ್ತರು ತಮ್ಮ ಸಮಸ್ಯೆಗಳಿಗೂ ಇವರು ಹೇಳುವ ಜ್ಯೋತಿಷ್ಯಕ್ಕೂ ಟ್ಯಾಲಿ (ಹೋಲಿಕೆ ) ಮಾಡಿ ಇದೆಲ್ಲಾ ಸುಳ್ಳು ಎಂದೂ ಗೊತ್ತಿದ್ದರೂ ಇದನ್ನು ಎಲ್ಲಿ ಹೇಳುವುದಿಲ್ಲ. ಇದೆಲ್ಲಾ ನನಗೆ ಏಕೆ ಬೇಕು ಎಂಬ ಕಾರಣದಿಂದ ಹೇಳುವುದಿಲ್ಲ. ಕೆಲವು ಅಮಾಯಕ ಭಕ್ತರಿಗೆ ಪಟ್ಟಾ ಹೇಳುವರು ಸಾಲುಗಟ್ಟಲೆ ಹೇಳುವ ವಿಷಯಗಳಲ್ಲಿ ಒಂದು ವಾಕ್ಯ ನಮ್ಮ ಜೀವನದಲ್ಲಿ ಬಂದಿದರೆ ಅದನ್ನೆ ನಂಬಿ ಸಮಾಜದಲ್ಲಿ ತಾವು ಹೋದ ದೇವಾಲಾಯದಲ್ಲಿ ಹೇಳಿರುವ ಜ್ಯೋತಿಷ್ಯ ನಿಜವಾಗಿದೆ ಎಂದೂ ಸಮಾಜದಲ್ಲಿ ಹೇಳಿಕೊಳ್ಳುವುದರಿಂದ ಇತರೆ ಅಮಾಯಕ ಭಕ್ತರು ನಿಜವೆಂದು ನಂಬಿ ಆ ಸ್ಥಳಗಳಿಗೆ ಹೋಗಿ ಬಲಿಪಶು ಆಗುವುದು ಕಂಡು ಬರುತ್ತಿದೆ.
ಈ ಬೂಟಾಟಿಕೆ ( ಪಟ್ಟಾ ಹೇಳುವರು) ದೇವರಿಗೆ ಬರುವ ಆದಾಯ ಕಂಡ ಕೆಲವರು ತಾವು ಈ ರೀತಿಯಾಗಿ ಏಕೆ ಹಣ ಮಾಡಬಾರದೆಂದು ಭಾವಿಸಿ ಅಮಾಯಕ ಜನರಿಂದ ಅಥವಾ ದೈವಭಕ್ತರಿಂದ ದೇವಾಲಾಯಗಳು ಕಟ್ಟಲು ಚಂದಾ ವಸೂಲು ಮಾಡಿ ಆ ನಿವೇಶನವನ್ನು ತಮ್ಮ ಹೆಸರಿಗೆ ನೋಂದಾಯಿಸಿ ಕೊಂಡು ದೇವಾಲಾಯ ಗಳನ್ನು ಕಟ್ಟಿ ತಾವು ಮಾಡುವ ಪವಾಡ ಬಿಂಬಿಸಿಕೊಳ್ಳಲು ತಮ್ಮ ವಿಶ್ವಾಸಿ ಜನರನ್ನು ಬಳಸಿಕೊಂಡು ಪ್ರಚಾರ ಮಾಡಿ ಪಟ್ಟಾ ಹೇಳಲು ಆರಂಭ ಮಾಡಿ ಒಳ್ಳೆ ಹಣ ಸಂಪಾದಾನೆ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ಹೆಚ್ಚಿನದಾಗಿ ಶನಿ ಮಹಾತ್ಮ, ಶಕ್ತಿ ದೇವರ (ಹೆಣ್ಣು ದೇವರ)ಹೆಸರನಲ್ಲಿ ಪಟ್ಟಾ ಹೇಳುವುದು ಇದೆ ಹಾಗೂ ಸಂಪ್ರಾದಾಯ ಜನರನ್ನು ಮೆಚ್ಚಿಸಲು ಸಾರ್ವಜನಿಕವಾಗಿ ಮಾಡುವ ಕಾರ್ಯಗಳಿಗೆ ತಮ್ಮ ಹಣವನ್ನು ನೀಡಿ ಜನರಿಂದ ಮೆಚ್ಚಿಗೆ ಪಡೆದುಕೊಳ್ಳುತ್ತಾರೆ. ಈ ಕಾರಣದಿಂದ ಅಮಾಯಕ ಜನ ಸಾಮಾನ್ಯರನ್ನು ಸೆಳೆದುಕೊಂಡು ಸಮಾಜದಲ್ಲಿ ತಾವು ಬಲಿಷ್ಟರೆಂದು ತೋರಿಸಿಕೊಳ್ಳಲು ತಮ್ಮ ದೇವಾಲಾಯಗಳಲ್ಲಿ ಕೆಲವು ಕಾರ್ಯಕ್ರಮದಲ್ಲಿ ಸಮಾಜದಲ್ಲಿ ತಾವು ಗಣ್ಯರೆಂದು ಎನ್ನಿಸಿಕೊಂಡವರನ್ನು ಕರೆಯಿಸಿ ಕಾರ್ಯಕ್ರಮದಲ್ಲಿ ಸನ್ಮಾನ ಮಾಡುವುದರ ಮೂಲಕ ಈ ಪಟ್ಟಾ ಹೇಳವ ಜ್ಯೋತಿಷ್ಯರು ಸಮಾಜದಲ್ಲಿ ಗೌರವ ಸ್ಥಾನ ಪಡೆಯುವುದು ಇದೆ.
ಸಮಾಜದಲ್ಲಿ ಅಥವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಥಾವ ತಮ್ಮ ಸಮೂದಾಯಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಣ್ಯರ ಸ್ಥಾನದಲ್ಲಿ ಕುಳಿತು ಶೋಬಿಸುತ್ತಾರೆ. ಈ ಕಾರ್ಯಕ್ರಮಗಳು ಮಾಡುವ ಅಯೋಜಕರಿಗೆ ಚಂದಾ ರೂಪದಲ್ಲಿ ಹೆಚ್ಚಿನ ಹಣ ನೀಡಿ ತಮ್ಮನ್ನು ವೈಭವಿಸಿ ಕೊಳ್ಳುತ್ತಾರೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತದೆ ಈ ಕಾರ್ಯಕ್ರಮಗಳಲ್ಲಿ ಪ್ರಜ್ಞಾವಂತ ನಾಗರೀಕರು ಆಗಿರಬಹುದು ರಾಜಕೀಯ ನಾಯಕರು, ಸಮೂದಾಯ ನಾಯಕರ ಮದ್ಯ ಕುಳಿತುಕೊಂಡು ಅಮಾಯಕ ಭಕ್ತರಿಗೆ ಗಣ್ಯ ದೇವ ಸಂಭೂತರು ಎನ್ನಿಸಿಕೊಳ್ಳುತ್ತಾರೆ . ಇಂತ ವೇದಿಕೆಯಲ್ಲಿ ಭಾಗವಹಿಸುವ ನಾಯಕರಿಗೆ ನಾವು ಯಾರ ಜೊತೆಯಲ್ಲಿ (ಜ್ಯೋತಿಷ್ಯರು/ ಪಟ್ಟಾ ಹೇಳುವ ಜ್ಯೋತಿಷ್ಯರು) ವೇದಿಕೆಯನ್ನು ಹಂಚಿಕೊಂಡಿವೆ ಎಂಬ ಆಲೋಚನೆ ಇಲ್ಲದು ವಿಪರ್ಯಾಸ ಸಂಗತಿ. ಇವರನ್ನು ಕರೆಯಿಸಿ ಇವರಿಗೆ ಸನ್ಮಾನ ಮಾಡುವ ಪ್ರಜ್ಞಾವಂತರು ಯಾವ ಕಾರಣದಿಂದ ಗೌರವ ನೀಡುತ್ತಾರೆ ಎಂಬುದು ನಿಗೂಡ ವಿಷಯವೇ ಆಗಿರುತ್ತದೆ ಒಟ್ಟಾಗಿ ಪಟ್ಟಾ ಹೇಳುವ ಜ್ಯೋತಿಷ್ಯರು ಮತಷ್ಟು ಬಲಿಷ್ಟರಾಗುತ್ತಾರೆ.
ದೇವಾಲಯಗಳಲ್ಲಿ ಪಟ್ಟಾ ಹೇಳುವ ಮುಖಾಂತರ ಶೋಷಣೆ ಮಾಡುವರನ್ನು ಪ್ರಜ್ಞಾವಂತ ನಾಗರೀಕರು ಪ್ರಶ್ನೆ ಮಾಡಿದರೆ ಇವರಿಗೆ ರಾಜಕೀಯ ನಾಯಕರು ಸಮೂದಾಯದ ನಾಯಕರು ಇವರನ್ನು ರಕ್ಷಣೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತದೆ. ಈ ಎಲ್ಲಾ ಕಾರಣದಿಂದ ಪಟ್ಟಾ ಹೇಳುವ ಜ್ಯೋತಿಷ್ಯರು ಜನ ಸಾಮಾನ್ಯರನ್ನು ಶೋಷಣೆ ಮಾಡುವ ಮೂಲಕ ಆರ್ಥಿಕವಾಗಿ ಬಲಿಷ್ಟರಾಗುವುದು ಕಂಡು ಬರುತ್ತದೆ, ಸರ್ಕಾರ ಜಾರಿಗೆ ತಂದಿರುವ ಮೌಡ್ಯ ಪ್ರತಿ ಬಂದಕ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಸರಕಾರ ಇಂತ ಶೋಷಣೆ ಮಾಡುವರನ್ನು ಕಾಯ್ದೆಯ ಅಡಿಯಲ್ಲಿ ಇವರಿಗೆ ಶಿಕ್ಷೆ ನೀಡಿ ಈ ದೇವಾಲಯ ಗಳನ್ನು ಮುಚ್ಚಿ ಶೋಷಣೆ ತಪ್ಪಿಸುವುದು ಅಗತ್ಯ ಇದೆ.
ಇನ್ನೊಂದು ವಿಷಯ ಏನೆಂದರೆ ಪಟ್ಟಾ ಹೇಳುವ ದೇವಾಲಾಯಗಳು ಅಗಲಿ ಅಥವ ಜ್ಯೋತಿಷ್ಯ ಕೇಂದ್ರಗಳನ್ನು ಆಗಲಿ ಪ್ರಜ್ಞಾವಂತ ನಾಗರಿಕರು ವಿರೋಧಿಸಿದರೆ ತಮ್ಮ ಧರ್ಮವನ್ನು ವಿರೋಧಿಸುವ ಕೃತ್ಯ ಎಂದೂ ಧರ್ಮ ವಿರೋಧಿಗಳು ಎಂದೂ ಬಿಂಬಿಸುವುದು ತಾವು ಧರ್ಮ ರಕ್ಷಕರು ಎಂದೂ ಕೆಲವರು ಬಿಂಬಿಸಿಕೊಳ್ಳುತ್ತಾರೆ. ಆದರೆ ನಮ್ಮ ಧರ್ಮದ ಹೆಸರಿನಲ್ಲಿ ದೇವರ ಹೆಸರನಲ್ಲಿ ಜನಸಾಮಾನ್ಯರನ್ನು ಶೋಷಣೆ ಮಾಡುವುದರಿಂದ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಪ್ರಜ್ಞಾವಂತಿಕೆ ಸಹಾ ಇವರಲ್ಲಿ ಇರುವುದಿಲ್ಲ ಎಂಬುದು ವಿಪರ್ಯಾಸ ಸಂಗತಿ. ಈ ಸಂಬಂಧಪಟ್ಟಂತೆ ಆರಕ್ಷಕ ಇಲಾಖೆ ವರನ್ನು ಸಾಮಾನ್ಯವಾಗಿ ವಿಚಾರಿಸಿದರೆ ಪಟ್ಟಾ ಹೇಳುವರನ್ನು ನಾವು ನಿಯಂತ್ರಿಸಲು ಹೋದರೆ ರಾಜಕಾರಣಿಗಳಿಂದ ಫೋನ್ ಮುಖಾಂತರ ಹೇಳಿಸಿ ಬಚಾವ್ ಆಗುತ್ತಾರೆ. ಸಾರ್ವಜನಿಕರು/ ನಾಗರೀಕರು ಸಾಕ್ಷಿಗಳ ಆಧಾರದ ಮೇಲೆ ಲಿಖಿತ ದೂರು ನೀಡಿದರೆ ಮಾತ್ರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಾದ್ಯವಾಗುತ್ತದೆ ಎಂಬುದು ಕೇಳಿ ಬರುತ್ತದೆ. ಸಾಮಾನ್ಯ ನಾಗರೀಕರಿಗೆ ಇದೆಲ್ಲಾ ನಮಗೆ ತಲೆನೋವು ಏಕೆ ಎಂದೂ ಯಾರು ದೂರು ನೀಡಲು ಹೋಗುವುದಿಲ್ಲ, ಇದನ್ನು ಪ್ರಜ್ಞಾವಂತ ನಾಗರೀಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತ ಮಾತ್ರ ಸಮಾಜದ ಹಿತದೃಷ್ಟಿಯಿಂದ ಕಾನೂನು ಹೋರಾಟ ಮಾಡುತ್ತಿರುವುದು ಕಂಡು ಬರುತ್ತದೆ, ಜನಸಾಮಾನ್ಯರನ್ನುಈ ಶೋಷಿತ ಕೇಂದ್ರಗಳಿಂದ ಶೋಷಣೆ ತಪ್ಪಿಸಿ ಸಮಾಜ ಸುಧಾರಣೆ, ಧರ್ಮ ಸುಧಾರಣೆ ಮಾಡಲು ಪ್ರಜ್ಞಾವಂತ ನಾಗರೀಕರು ಪ್ರಯತ್ನಿಸಬೇಕಾಗಿದೆ.
ನಮ್ಮ ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಪೂರ್ಣವಾಗಿ ಜಾರಿಗೆ ಬಂದಿಲ್ಲ ಎನ್ನಬಹುದು. ಟಿ.ವಿ.ಗಳಲ್ಲಿ ಹೇಳುವ ಜ್ಯೋತಿಷ್ಯರು ಹಾಗೂ ಜ್ಯೋತಿಷ್ಯವನ್ನೆ ಅಡ್ಡ ಮಾಡಿಕೊಂಡು ಸಾರ್ವಜನಿಕ ಕೊಠಡಿಗಳಲ್ಲಿ ಹೇಳುವರು ಇದ್ದಾರೆ. ಇಂತವರನ್ನ ಮೌಢ್ಯ ಪ್ರತಿಬಂಧಕ ಕಾಯ್ದೆಯಲ್ಲಿ ಸೇರ್ಪಡೆ ಮಾಡಿಕೊಳ್ಳದ ಕಾರಣ ಜ್ಯೋತಿಷ್ಯ ಹೇಳುವ ಮುಖಾಂತರ ಶೋಷಣೆ ಮಾಡುತ್ತಿರುವುದು ಎಷ್ಟು ಸರಿ. ಪಟ್ಟಾ ಹೇಳುವರೇ ಆಗಲಿ ಟಿ.ವಿ.ಯಲ್ಲಿ ಕಾರ್ಯಕ್ರಮ ನೀಡುವ ಜ್ಯೋತಿಷ್ಯರು ಅಗಲಿ ಒಂದು ಬಾಕ್ಸ್ ನಲ್ಲಿ ಒಂದು ವಸ್ತುವನ್ನು ಹಾಕಿ ಇದರಲ್ಲಿ ಏನು ಇದೆ ಎಂದೂ ಹೇಳಲು ಶಕ್ತಿ ಇರುವುದಿಲ್ಲ ಇಂತವರುಜನ ಸಾಮಾನ್ಯರ ಮುಂದಿನ ಭವಿಷ್ಯವನ್ನು ಹೇಳಲು ಸಾಧ್ಯವೇ? ಇಂತ ಜ್ಯೋತಿಷ್ಯರ ಹಣೆ ಬರಹವನ್ನು ಇವರ ಪವಾಡಗಳನ್ನು ಪ್ರೊ.ನರೇಂದ್ರ ನಾಯಕ್, ಹುಲಿಕಲ್ ನಟರಾಜ್ ರಂತವರಿಗೆ ಅವಕಾಶ ನೀಡಿದರೆ ಬಹಿರಂಗಪಡಿಸುತ್ತಾರೆ ಇಂತಹರನ್ನು ದೇವ ಸಂಬೂತರು ಎಂದೂ ಆರಾಧನೆ ಮಾಡುವರ ಪ್ರಜ್ಞಾವಂತಿಕೆ ಬಗೆ ಪ್ರಶ್ನೆ ಮಾಡಬೇಕಾಗುತ್ತದೆ, ಸರ್ಕಾರ ಜನಸಾಮಾನ್ಯರನ್ನು ಶೋಷಣೆ ಮಾಡುವ ಜ್ಯೋತಿಷ್ಯರನ್ನು ಕಾನೂನು ಮೂಲಕ ಕ್ರಮ ಕೈಗೊಂಡು ಶೋಷಣೆ ಮುಕ್ತ ಸಮಾಜ ಮಾಡಬೇಕಾಗಿದೆ.
N.S.ಈಶ್ವರಪ್ರಸಾದ್, ನೇರಳೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q