ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕಾದರೆ ದೂರ ದೃಷ್ಠಿಯನ್ನು ಇಟ್ಟುಕೊಳ್ಳಬೇಕು ಹಾಗೂ ಯೋಜನೆಗಳಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಾನ ನ್ಯಾಯ ನೀಡುವುದು ಸರ್ಕಾರಗಳ ಕರ್ತವ್ಯವಾಗಿದೆ ಎಂದು ಪಟ್ಟನಾಯ್ಕನಹಳ್ಳಿಯ ಸ್ಪಟಿಕಮುರಿಯ ಪೀಠಾಧ್ಯಕ್ಷ ಶ್ರೀ ನಂಜಾವದೂತಸ್ವಾಮೀಜಿ ತಿಳಿಸಿದರು.
ಅವರು ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಬಳಿಯ ಭಂಢಾರದಹಳ್ಳಿಯ ಶ್ರೀಭಂಡಾರದಮ್ಮ ದೇವಿಯ ನೂತನ ದೇವಾಲಯ ಜೀರ್ಣೋದ್ದಾರ ಹಾಗೂ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರದ ಹಲವು ಯೋಜನೆಗಳಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯವಾಗುತ್ತಿದೆ. ಇಂತಹ ತಾರತಮ್ಯಗಳ ಬಗ್ಗೆ ಸರ್ಕಾರಗಳು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪರಿಹಾರ ನೀಡುವಾಗ ಹಲವು ತಾಂತ್ರಿಕ ಕಾರಣಗಳನ್ನು ನೀಡಿ ಬುದ್ದಿವಂತಿಕೆಯನ್ನು ತೋರುತ್ತಾರೆ. ಇದ ಬಂದ ರೈತರಿಗೆ ಅನ್ಯಾಯವಾಗುತ್ತಿದ್ದು ನೀರಾವರಿ ಯೋಜನೆಗಳು ರೈತರ ಬಾಳಿಗೆ ಗೋಳಿನ ಘಟನೆಗಳಾಗಬಾರದು, ಇಂತಹವುಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸ ಬೇಕಾಗುತ್ತದೆ. ಉದಾಹರಣೆಗೆ ಕೊರಟಗೆರೆ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ರೈತರುಗಳ ಒಂದೇ ಬದುವಿನ ಎರಡು ಜಮೀನುಗಳಿಗೆ ಬೇರೆ ಬೇರೆ ರೀತಿಯ ಪರಿಹಾರವನ್ನು ಸರ್ಕಾರಗಳು ನಿಗದಿ ಪಡಿಸಿದರೆ ಜಮೀನು ಕಳೆದುಕೊಳ್ಳುವ ರೈತರ ಪರಿಸ್ಥಿತಿ ಏನಾಗಬೇಕಾಗುತ್ತದೆ, ಇಂತಹ ಅವೈಜ್ಞಾನಿಕ ಪರಿಹಾರಗಳ ನೀತಿಯಿಂದ ರಾಜ್ಯದ ಹಲವಾರು ರೈತರು ಭೂಮಿ ನೀಡಿ ಗೋಳಿನಲ್ಲಿ ಇದ್ದಾರೆ ಇಂತಹ ಹಲವಾರು ಪ್ರಕರಣಗಳಲ್ಲಿ ಸರ್ಕಾರ ಎಚ್ಚರದಿಂದ ಕ್ರಮ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ವಸಂತರಾಜು, ಲಿಂಗರಾಜು, ಶಿವಕುಮಾರಸ್ವಾಮಿ, ವಿ.ಕೆ.ವೀರಕ್ಯಾತರಾಯ್, ರವಿಕುಮಾರ್, ರಕ್ಷಿತಾವೀರ ಕ್ಯಾತರಾಯ, ಸಂತೋಷಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



