ಸಹಕಾರ ಸಂಘಗಳಲ್ಲಿ ಹೆಚ್ಚಾಗಿ ಪ್ರಚಲಿತ ಇರುವುದು ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವು ಜನ ಸಾಮಾನ್ಯರಿಗೂ ಹಾಗೂ ರೈತರಿಗೂ ತುಂಬಾ ಅವಶ್ಯಕ. ಸಹಕಾರ ಸಂಘಗಳು ಈ ಸಂಘಗಳನ್ನು ಎಷ್ಟು ಅಭಿವೃದ್ಧಿ ಕಾಣುತ್ತಾವೋ ಅಷ್ಟು ಅನುಕೂಲ ರೈತರಿಗೂ ಜನ ಸಾಮಾನ್ಯರಿಗೂ ಆಗುತ್ತದೆ. ಆದರೆ ಷೇರುದಾರರು ಇವುಗಳ ಲಾಭ–ನಷ್ಟದ ಬಗ್ಗೆ ಗಮನ ನೀಡದೇ ಇರುವುದು ಪ್ರಶ್ನೆ ಮಾಡದ ಕಾರಣ ಈ ಸಹಕಾರ ಸಂಘಗಳು ನಿರೀಕ್ಷೆ ಮಟ್ಟಕ್ಕೆ ಬೆಳೆಯದೆ ಇರಲು ಕಾರಣ ಆಗಿದೆ. ಇಲ್ಲಿ ಕಾರ್ಯದರ್ಶಿಗಳ ಜನಪ್ರತಿನಿಧಿಗಳ ಸಹಕಾರ ಸಂಘಗಳನ್ನು ಬೆಳಸುವಲ್ಲಿ ವಿಫಲರಾಗಿದ್ದಾರೆ. ಇಲ್ಲಿ ಲಾಭವನ್ನು ಅಪೇಕ್ಷೆ ಪಡುತ್ತಾರೆ ಹೊರತು ಸಹಕಾರ ಸಂಘಗಳನ್ನು ಒಂದು ಲಾಭದಾಯಕ ಸಂಸ್ಥೆಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಪ್ರಜ್ಞಾವಂತ ನಾಗರೀಕರಿಂದ ಕೇಳಿ ಬರುತ್ತದೆ.
ಸಹಕಾರ ಸಂಘಗಳ ವಾರ್ಷಿಕ ಸಭೆಗಳು ನಾಮಕಾವಸ್ಥೆ ಸಭೆಗಳು ಆಗುವುದು ಹೆಚ್ಚು ಎಂಬ ಮಾತುಗಳು ಕೇಳಿ ಬರುತ್ತದೆ. ಈ ಸಭೆಗಳಲ್ಲಿ ಸಂಘಗಳ ಲೆಕ್ಕ ಪರಿಶೋಧನೆ ಬಗ್ಗೆ ಮುಂದೆ ಇಟ್ಟುಕೊಂಡು ಚರ್ಚೆ ಆಗುವುದು ಕಡಿಮೆ ಎನ್ನುವ ಮಾತುಗಳು ಕೇಳಿ ಬರುತ್ತದೆ.
ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಸರ್ಕಾರ ನೀಡುವ ಸಾಲ ಸೌಲಭ್ಯ ಪಡೆಯಲು ಮಾತ್ರ ಈ ಸಂಘಗಳ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸುತ್ತಾರೆ ಹೊರತು ಸಂಘಗಳನ್ನು ಲಾಭದಾಯಕ ಸಂಘಗಳನ್ನು ಮಾಡಿ ರೈತರಿಗೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡುವುದರ ಬಗ್ಗೆ ಹಾಗೂ ರೈತರಿಗೆ ಕೃಷಿಗೆ ಬೇಕಾದ ಸಾಮಾಗ್ರಿಗಳನ್ನು ಆಧುನಿಕ ಯಂತ್ರೋಪಕರಣಗಳನ್ನು ತಮ್ಮ ಸಂಘಗಳಲ್ಲಿ ಇಟ್ಟುಕೊಂಡು ಹೆಚ್ಚು ಲಾಭ ನಿರೀಕ್ಷೆ ಮಾಡದೇ ರೈತರಿಗೆ ನೀಡಲು ವ್ಯವಸ್ಥೆಯನ್ನು ವ್ಯವಸಾಯ ಸಹಕಾರಗಳು ಮಾಡಬಹುದು, ರೈತರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲು ಕಾರಣವೇ ವ್ಯವಸಾಯ ಸಹಕಾರ ಸಂಘಗಳ ಸರ್ಕಾರ ಉದ್ದೇಶ ಆಗಿದ್ದರೂ ಸಹಾ, ಜನಪ್ರತಿನಿಧಿಗಳ ಅಧಿಕಾರಿಗಳ ಕಾಳಜಿ ಇಲ್ಲದೆ ಬರೀ ಸರ್ಕಾರ ನೀಡುವ ಸಾಲ ಸೌಲಭ್ಯಗಳಿಗೆ ಸೀಮಿತ ಆಗಿದೆ ಎಂಬುದು ಕಂಡು ಬರುತ್ತದೆ. ಇಲ್ಲಿ ಜನಪ್ರತಿನಿಧಿಗಳು ತಮಗೆ ಹೆಚ್ಚಿನ ಸಾಲ ಪಡೆಯುವ ಕಸರತ್ತು ಹೆಚ್ಚಿನದಾಗಿ ನಡೆಯುತ್ತದೆ ಎಂಬುದು ಕೆಲ ರೈತರ ಆರೋಪಗಳು ಸಹ ಕೇಳಿ ಬರುತ್ತದೆ. ಉತ್ತರ ಕರ್ನಾಟಕದ ಸಿದ್ಧಪುರ ಎಂಬ ಗ್ರಾಮದಲ್ಲಿ ಈ ವ್ಯವಸಾಯ ಸಹಕಾರ ಸಂಘವನ್ನು ಯಾವ ರೀತಿ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಹೋಗಿ ನೋಡಿ ಬಂದು ಕಲಿಯಬೇಕಾಗಿದೆ. ಮಾದರಿಗೆ ಹೆಸರಿಗೆ ಹೆಸರು ಮಾಡಿರುವ ಸಹಕಾರ ಸಂಘಗಳ ಬಗೆ ಸಹಕಾರ ಸಂಘಗಳ ಸದಸ್ಯರನ್ನು ಕಾರ್ಯದರ್ಶಿಗಳಿಗೆ ಭೇಟಿ ಮಾಡಿಸಲು ಸರ್ಕಾರ ಮಾಡಬೇಕಾಗಿದೆ.
ಕೆಲ ಸಹಕಾರ ಸಂಘಗಳಲ್ಲಿ ರೈತರು ಸಾಲ ಸೌಲಭ್ಯ ಪಡೆಯಲು ಅಧಿಕಾರಿಗಳು ಸಂಘಗಳ ನಿಯಮ ಮೀರಿ ಹಣ ಪಡೆಯುತ್ತಾರೆ ಎಂಬ ಆರೋಪವನ್ನು ಮಾಡುತ್ತಾರೆ ಹೊರತು ಅಧಿಕೃತವಾಗಿ ಹೇಳಿಕೆ ನೀಡಲು ಹಿಂಜರಿಯುವುದು ಇದೆ. ಇದು ಒಂದು ಸಹಕಾರ ಸಂಘಗಳ ಉದಾಹರಣೆ ಅಲ್ಲ ರಾಜ್ಯದ ಪರಸ್ಥಿತಿ ಎಂಬ ಮಾತುಗಳು ಪ್ರಜ್ಞಾವಂತ ನಾಗರೀಕರಿಂದ ಕೇಳಿ ಬರುತ್ತದೆ. ಇನ್ನು ಸಹಕಾರ ಸಂಘಗಳ ಚುನಾವಾಣೆ ವಿಷಯಕ್ಕೆ ಬಂದಾಗ ಹೆಚ್ಚಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ತಮ್ಮ ಮಾತನ್ನು ಅನುಮೋದನೆ ಮಾಡುವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂಬ ಮಾತುಗಳು ಷೇರುದಾರರು ಹೇಳುವುದು ಇದೆ. ಷೇರುಗಳನ್ನು ಕಟ್ಟಿಸಿಕೊಳ್ಳುವ ಸಂದರ್ಭದಲ್ಲಿ ತಮ್ಮ ಮಾತುಗಳಿಗೆ ಮನ್ನಣೆ ನೀಡುವರನ್ನು ಮಾತ್ರ ಷೇರುದಾರನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಇದೆ ಎಂಬ ಆರೋಪಗಳು ರೈತರೇ ಮಾಡುವದನ್ನು ಕೇಳಬಹುದು, ಎಲ್ಲಾ ಸಹಕಾರ ಸಂಘಗಳು ಹೀಗೆ ನಡೆದುಕೊಳ್ಳುತ್ತವೆ ಎಂದೂ ಹೇಳಲು ಸಾಧ್ಯತೆ ಇಲ್ಲ. ಆದರೆ ಸಹಕಾರ ಸಂಘಗಳಲ್ಲಿ ಹೆಚ್ಚಿನದಾಗಿ ಕಾರ್ಯದರ್ಶಿಗಳ ವಿರುದ್ಧವಾಗಿ ಜನಪ್ರತಿನಿಧಿಗಳು ನಡೆದುಕೊಳ್ಳುವುದು ಇದೆ.
ಇನ್ನು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿಯೆ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ನಮ್ಮ ಕರ್ನಾಟಕದಲ್ಲಿ ಕಂಡುಬರುತ್ತವೆ, ಖಾಸಗಿ ಕಡಿಮೆ ಎನ್ನಬಹುದು. ಈ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಯೋಜನೆಯಲ್ಲಿ ನೀಡುವ ಅಕ್ಕಿ — ರಾಗಿ– ಗೋದಿಯನ್ನು ಗ್ರಾಹಕರಿಗೆ ನೀಡುವಾಗ 1 ಕೆ.ಜಿ., 2 ಕೆ.ಜಿ. ಕಡಿತ ಮಾಡಿಕೊಂಡು ನೀಡುವುದು, ಇನ್ನು ಕೆಲವು ನ್ಯಾಯ ಬೆಲೆ ಅಂಗಡಿಗಳಲ್ಲಿ 10 ರೂ., 20 ರೂಪಾಯಿ ಪಡೆದುಕೊಂಡು ಪಡಿತರ ಆಹಾರ ಧಾನ್ಯಗಳನ್ನು ನೀಡುವುದರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳನ್ನು ಕಾಣಬಹುದು. ಇನ್ನು ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಜ್ಞಾವಂತ ನಾಗರೀಕರು ವಿರೋಧಿಸುವ ಸ್ಥಳದಲ್ಲಿ ಅಂಗಡಿಯವರು ಅಮಾಯಕ ಗ್ರಾಹಕರಿಗೆ ತಮಗೆ ನೀಡಬೇಕಾದ ಆಹಾರ ಬಗ್ಗೆ ಗಮನ ಇಲ್ಲದ ಗ್ರಾಹಕರಿಗೆ ವಂಚನೆ ಮಾಡುವುದು ಇದೆ ಎಂದೂ ಪ್ರಜ್ಞಾವಂತ ನಾಗರೀಕರಿಂದ ಮಾತು ಕೇಳಿ ಬರುತ್ತದೆ. ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ತೂಕ ಯಂತ್ರದಲ್ಲಿ ತಮ್ಮ ಕೈಚಳಕ ತೋರಿಸಿ ಗ್ರಾಹಕರ ಗಮನಕ್ಕೆ ಬಾರದೇ ರೀತಿಯಲ್ಲಿ ಆಹಾರಧ್ಯಾನಗಳನ್ನು ಕಡಿತ ಮಾಡಿಕೊಂಡು ನೀಡುವುದು ಇದೆ ಎಂಬ ಮಾತುಗಳು ಜಾಣ ಗ್ರಾಹಕರಿಂದ ಕೇಳಿ ಬರುತ್ತದೆ. ಕೆಲ ನ್ಯಾಯಬೆಲೆ ಅಂಗಡಿಗಳು ಪ್ರಾಮಾಣಿಕವಾಗಿ ನಡೆದುಕೊಳ್ಳುಬಹುದು.
ನ್ಯಾಯ ಬೆಲೆ ಅಂಗಡಿಗಳು ಸರ್ಕಾರ ನೀಡುವ ಆಹಾರ ಧಾನ್ಯಗಳನ್ನು ಪ್ರಾಮಾಣಿಕವಾಗಿ ಗ್ರಾಹಕರಿಗೆ ನೀಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎನ್ನಬಹುದು. ಮಾಧ್ಯಮಗಳಲ್ಲಿ ಗ್ರಾಹಕರಿಗೆ ವಂಚನೆ ಮಾಡುವ ನ್ಯಾಯಬೆಲೆ ಅಂಗಡಿ ಬಗ್ಗೆ ಸುದ್ದಿ ನೋಡಿದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ತಮ್ಮ ಕರ್ತವ್ಯಗಳಲ್ಲಿ ವಿಫಲರಾಗಿದ್ದಾರ ಅಥವ ಆಮಿಷಗಳಿಗೆ ಬಲಿ ಆಗಿದ್ದಾರ ಎಂಬ ಪ್ರಶ್ನೆಗಳು ನಾಗರೀಕರಿಂದ ಕೇಳಿ ಬರುತ್ತದೆ. ವ್ಯವಸ್ಥೆಯನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ ಆಗಿದೆ.
ಇನ್ನು ಸಮುದಾಯಗಳ ಸಹಕಾರ ಸಂಘಗಳನ್ನು ಸಂಘಗಳ ಆಯ್ಕೆ ಆಗಿರುವ ಸದಸ್ಯರು ಮನಸ್ಸು ಮಾಡಿದರೆ ಸಹಕಾರ ಸಂಘಗಳನ್ನು ಬ್ಯಾಂಕ್ ಗಳನ್ನಾಗಿ ಪರಿವರ್ತನೆ ಮಾಡಿ ತಮ್ಮ ಸಮುದಾಯಗಳಿಗೆ ಅರ್ಥಿಕ ನೆರವು ನೀಡಿ ಸಬಲರನ್ನಾಗಿ ಮಾಡುವ ಶಕ್ತಿ ಸಹಕಾರ ಸಂಘಗಳಿಗೆ ಇದೆ ಎಂಬುದನ್ನು ಅರಿತಾಗ ಮಾತ್ರ ಸಾಧ್ಯ ಆಗುತ್ತದೆ.
ಇನ್ನು ಹಾಲು ಉತ್ಪಾಕರ ಸಹಕಾರ ಸಂಘಗಳು ರೈತರಿಗೆ ಜೀವನಾಡಿಯೆ ಎಂದೂ ಹೇಳಬಹುದು ಕೃಷಿಯಲ್ಲಿ ಮಳೆಯನ್ನು ಆಧಾರಿಸುವರು ಹೆಚ್ಚಾಗಿ ಲಾಭದಾಯಕ ಕೃಷಿಯಾಗಿ ಉಳಿದಿಲ್ಲ, ಈಗ ಹೈನುಗಾರಿಕೆ ರೈತರ ಜೀವನಾಡಿ ಆಗಿದೆ. ಈ ಕಾರಣದಿಂದ ಹಾಲು ಉತ್ಪಾದಕ ಸಂಘಗಳನ್ನು ಲಾಭದಾಯಕ ಮಾಡಿದರೆ ಮಾತ್ರ ತಮ್ಮ ಉಳಿವು ಎಂಬುದನ್ನು ಮರೆಯಬಾರದು, ತಮ್ಮ ಡೈರಿಗಳಲ್ಲಿ ಗುಣಮಟ್ಟ ಹಾಲನ್ನು ನೀಡಿದಾಗ ಮಾತ್ರ ಸಂಘಗಳು ಉಳಿಯಲು ಸಾಧ್ಯ. ಹಾಲನ್ನು ಪೂರೈಕೆ ಮಾಡುವ ಕೆಲ ರೈತರೇ ಡೈರಿಯ ನೌಕರರ ದೌಬಲ್ಯ ಉಪಯೋಗಿಸಿಕೊಂಡು ಗುಣಮಟ್ಟ ಹಾಲನ್ನು ಹಾಕದೇ ಲಾಭ ಮಾಡಿಕೊಳ್ಳುವರು ಇದ್ದಾರೆ ಎಂಬ ಮಾತುಗಳು ರೈತರಿಂದಲೇ ಕೇಳಿ ಬರುತ್ತದೆ ಹಾಗೂ ಸಂಘಗಳ ನೌಕರರು ಹಣವನ್ನು ದುರುಪಯೋಗ ಮಾಡಿಕೊಂಡರೆ ಡೈರಿಗಳು ನಷ್ಟ ಆಗಿ ಮುಚ್ಚು ಹೋಗುವ ಸಂಧರ್ಭಗಳು ಇದೆ. ಕೋಳಿಯಿಂದ ಮೊಟ್ಟೆಗಳನ್ನು ಪಡೆಯಬೇಕೆ ಹೊರತು ಕೋಳಿಯನ್ನೆ ನುಂಗಲು ಪ್ರಯತ್ನಿಸಿದರೆ ಡೈರಿಗಳು ಮುಚ್ಚಬೇಕಾಗುತ್ತದೆ. ನೌಕರ ವರ್ಗ ಡೈರಿಯ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿಕೊಂಡು ರೈತರ ಹಾಲನ್ನು ಹಾಕಿಸಿಕೊಂಡು ಲಾಭದಾಯಕ ಸಂಘಗಳನ್ನು ಮಾಡಬಹುದು. ಇತ್ತೀಚೆಗೆ ಹಾಲು ಗುಣಮಟ್ಟ ಅಳೆಯಲು ಆಧುನಿಕ ಯಂತ್ರಗಳಿಂದ ಗುಣಮಟ್ಟ ಹಾಲನ್ನು ತೆಗೆದುಕೊಳ್ಳಲು ಸಾಧ್ಯವಾದರು, ರೈತರಿಗೆ ಕೆಲ ತೊಂದರೆ ಆಗುವುದುಂಟು ಎನ್ನುತ್ತಾರೆ ರೈತರು, ಇದನ್ನು ಒಕ್ಕೂಟದವರು ಗಮನ ಹರಿಸಬೇಕು.
ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸಹ ಚುನಾವಣೆಯಲ್ಲಿ ಆಥವಾ ರಾಜೀ ಮುಖಾಂತರ ಸಂಘದ ಸದಸ್ಯರು ಹಾಗೂ ಅಧ್ಯಕ್ಷರು ತಮ್ಮ ಹಿತಾಶಕ್ತಿಗಳಿಗೆ ಅನುಕೂಲ ಆಗುವವರು ಬರಬೇಕೆಂಬ ಗುರಿ ಇಟ್ಟುಕೊಂಡು ಒಳ ರಾಜಕೀಯ ಮಾಡುತ್ತಾರೆ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತದೆ. ಇತ್ತೀಚೆಗೆ ಮಾಧ್ಯಮದಲ್ಲಿ ಕಾರ್ಯದರ್ಶಿಗಳು ತಮ್ಮ ಹಿತಾಶಕ್ತಿಗೆ ವಿರುದ್ದವಾಗಿದ್ದಾರೆ ಎಂದೂ ಅಧ್ಯಕ್ಷರನ್ನುಸ್ಥಾನದಿಂದ ಇಳಿಸಲು ಸದಸ್ಯರಿಗೆ ಗಮನಕ್ಕೆ ತಾರದೆ ಸಹಿ ಪಡೆದುಕೊಂಡು ಅಧ್ಯಕ್ಷರನ್ನು ಇಳಿಸಿದ ಪ್ರಸಂಗ ಸುದ್ದಿ ಆಗಿತ್ತು. ಕೆಲ ಕಾರ್ಯದರ್ಶಿಗಳು ಸಂಘದ ಏಳಿಗೆಗಾಗಿ ದುಡಿದು ಉತ್ತಮ ಕಾರ್ಯದರ್ಶಿಗಳೆಂದು ಪ್ರಜ್ಞಾವಂತ ನಾಗರೀಕರಿಂದ ಹೆಸರು ಗಳಿಸಿದವರು ಇದ್ದಾರೆ, ಅದೇ ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡು ತನಿಖೆಗೆ ಒಳಪಟ್ಟವರು ಇದ್ದಾರೆ.
ಇಲ್ಲಿ ಮುಖ್ಯ ವಿಷಯ ಏನೆಂದರೆ ಸಹಕಾರ ಸಂಘಗಳ ಚುನಾವಣೆ ನಿಲ್ಲಲು ಹಾಗೂ ಗೆದ್ದ ಸಂಭ್ರಮದಲ್ಲಿ ಇರುವ ಸದಸ್ಯರು ಈ ಸಂದರ್ಭದಲ್ಲಿ ಇರುವ ಹುಮ್ಮಸ್ಸು ಏನು ಸಾಧನೆ ಮಾಡಿದ್ದೇವೆ ಎಂಬ ಹುರುಪು ನಂತರ 5 ವರ್ಷದ ಕಾಲ ಇಲ್ಲದೇ ಇರುವುದು ವಿಪರ್ಯಾಸ ಸಂಗತಿ, ಕೆಲವು ಸದಸ್ಯರು ಸಂಘಗಳು ಅಭಿವೃದ್ಧಿಯ ಬಗೆ ಕನಸು ಕಾಣುವರು ಇದ್ದಾರೆ, ಇದು ಎಲ್ಲಾ ಸದಸ್ಯರಿಗೆ ಬಂದರೆ ಸಹಕಾರ ಸಂಘಗಳು ಅಭಿವೃದ್ಧಿಗೆ ಕಾರಣ ಆಗಬಹುದು.
ಹಾಲು ಒಕ್ಕೂಟದವರು ತಮ್ಮ ಒಕ್ಕೂಟಕ್ಕೆ ಹೆಚ್ಚಿನ ಲಾಭವನ್ನು ನಿರೀಕ್ಷೆ ಮಾಡದೇ ರೈತರ ಸಂಕಷ್ಟಗಳನ್ನು ಅರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕಾಗುತ್ತದೆ, ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ ರೈತರನ್ನು ಬಲವರ್ಧನೆ ಮಾಡಬೇಕಾಗಿದೆ ಖಾಸಗಿ ಡೈರಿಗಳಿಗೆ ಹಾಲು ಉತ್ಪಾದಕ ರೈತರು ಹೋಗದಂತೆ ಮನವೊಲಿಸಿ ಅವರ ಸಮಸ್ಯೆಗಳನ್ನು ಅರಿತುಕೊಂಡು ಪರಿವಾರ ಮಾರ್ಗಗಳನ್ನು ಹುಡಿಕಿ ನಿವಾರಣೆ ಮಾಡಿ ಹಾಲು ಉತ್ಪಾದಕ ಸಂಘಗಳನ್ನು ಲಾಭದಾಯಕ ಸಂಘಗಳನ್ನು ಮಾಡಿ ರೈತರಿಗೆ ಶ್ರಮಕ್ಕೆ ತಕ್ಕಂತೆ ಆರ್ಥಿಕ ನೆರವು ನೀಡಿ ರೈತರನ್ನು ಬಲವರ್ದನೆ ಮಾಡಬೇಕಾಗಿದೆ.
-N.S.ಈಶ್ವರಪ್ರಸಾದ್
ನೇರಳೇಕೆರೆ, ಮಧುಗಿರಿ ತಾಲ್ಲೂಕು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q