nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಕ್ಷ ನಿಷ್ಠೆ ಇಲ್ಲದವರನ್ನು  ಜೊತೆಯಲ್ಲಿಟ್ಟುಕೊಳ್ಳಬಾರದು ಎಚ್.ಡಿ.ಕುಮಾರಸ್ವಾಮಿ ಖಡಕ್ ಮಾತು

    February 9, 2026

    ವೇಶ್ಯಾವಾಟಿಕೆಗೆ ಅತ್ತೆ–ಮಾವನ ಒತ್ತಾಯ: ಮನನೊಂದ ವಿವಾಹಿತೆ ಆತ್ಮಹತ್ಯೆ

    February 9, 2026

    ಕೆನಡಾದಲ್ಲಿ ಬೆಂಗಳೂರು ಮೂಲದ ಯುವಕ ಗುಂಡೇಟಿಗೆ ಬಲಿ

    February 9, 2026
    Facebook Twitter Instagram
    ಟ್ರೆಂಡಿಂಗ್
    • ಪಕ್ಷ ನಿಷ್ಠೆ ಇಲ್ಲದವರನ್ನು  ಜೊತೆಯಲ್ಲಿಟ್ಟುಕೊಳ್ಳಬಾರದು ಎಚ್.ಡಿ.ಕುಮಾರಸ್ವಾಮಿ ಖಡಕ್ ಮಾತು
    • ವೇಶ್ಯಾವಾಟಿಕೆಗೆ ಅತ್ತೆ–ಮಾವನ ಒತ್ತಾಯ: ಮನನೊಂದ ವಿವಾಹಿತೆ ಆತ್ಮಹತ್ಯೆ
    • ಕೆನಡಾದಲ್ಲಿ ಬೆಂಗಳೂರು ಮೂಲದ ಯುವಕ ಗುಂಡೇಟಿಗೆ ಬಲಿ
    • ತುಮಕೂರು: ಬಾಣಾವರ ಗೇಟ್ ಬಳಿ ಭೀಕರ ಸರಣಿ ಅಪಘಾತ; ಮಾಜಿ ತಾಪಂ ಸದಸ್ಯ ಸೇರಿ ಇಬ್ಬರು ಸಾವು
    • ಮಧುಗಿರಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿ ವಶ, ಮೂವರ ಬಂಧನ
    • ಪದವೀಧರ ಕ್ಷೇತ್ರದಲ್ಲಿ ಗೆದ್ದವರು ಪದವೀಧರರಿಗೆ ಅನುಕೂಲಕರ ಕೆಲಸ ಮಾಡಿಲ್ಲ: ಶಶಿ ಹುಲಿಕುಂಟೆ ಮಠ
    • ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ
    • ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜೆಡಿಎಸ್ ಗೆ ಸೇರ್ಪಡೆಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಗೆ ಜೆಡಿಎಸ್ ನಾಯಕರಿಂದ ಮನವಿ
    ತಿಪಟೂರು January 20, 2023

    ಜೆಡಿಎಸ್ ಗೆ ಸೇರ್ಪಡೆಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಗೆ ಜೆಡಿಎಸ್ ನಾಯಕರಿಂದ ಮನವಿ

    By adminJanuary 20, 2023No Comments2 Mins Read
    thipatur

    ತಿಪಟೂರು: ಸಮಾಜ ಸೇವಕ, ಕಾಂಗ್ರೆಸ್ ಪಕ್ಷದ ತಾಲೂಕು ಮುಖಂಡರಾಗಿರುವ, ಕೆ.ಟಿ.ಶಾಂತಕುಮಾರ್ ಅವರಿಗೆ ಜೆಡಿಎಸ್ ಪ್ರಾದೇಶಿಕ ಪಕ್ಷ ಸೇರುವಂತೆ ಜೆಡಿಎಸ್ ಪಕ್ಷದ ಮುಖಂಡರು, ನೂರಾರು ಸಂಖ್ಯೆಯಲ್ಲಿ ಶಾಂತಕುಮಾರ್ ಮನೆಗೆ ಆಗಮಿಸಿ, ಮನವಿ ಮಾಡಿದ್ದಾರೆ

    ನಗರದ ಕೆ.ಆರ್.ಬಡಾವಣೆಯಲ್ಲಿರುವ ಕೆ.ಟಿ.ಶಾಂತಕುಮಾರ್ ನಿವಾಸಕ್ಕೆ ಆಗಮಿಸಿದ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಶಿವಸ್ವಾಮಿ ಈ ವೇಳೆ ಮಾತನಾಡಿ, ತಾಲೂಕಿನ ಕೊನೆಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದಿರುವ ಕೆ.ಟಿ.ಶಾಂತಕುಮಾರ್ ಅವರು, ಸಮಾಜ ಸೇವಕರಾಗಿ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.


    Provided by
    Provided by

    ತಮ್ಮ ಸಮಾಜ ಸೇವೆಗೆ ತಮ್ಮ ಸ್ವಂತ ಹಣ ಬಳಕೆ ಮಾಡಿ ಒಬ್ಬ ಸದೃಢ ನಾಯಕರಾಗಿ ತಾಲೂಕಿನಲ್ಲಿ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ, ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಕೆ.ಟಿ.ಶಾಂತಕುಮಾರ್ ರವರು, ಜೆಡಿಎಸ್ ಪಕ್ಷಕ್ಕೆ ಬಂದರೆ ನೂರು ಆನೆ ಬಲ ಜೆಡಿಎಸ್ ಪಕ್ಷಕ್ಕೆ ಬರಲಿದೆ ಎಂದರು.

    ತಾಲೂಕಿನ ಪ್ರತಿ ಸಮುದಾಯದವರೊಂದಿಗೆ ಉತ್ತಮಒಡನಾಟ ಹೊಂದಿರುವ ಕೆ.ಟಿ.ಶಾಂತಕುಮಾರ್, ಜೆಡಿಎಸ್ ಪಕ್ಷ ಸೇರಬೇಕೆಂದು ಗ್ರಾಮೀಣ ಭಾಗದ ಕಾರ್ಯಕರ್ತರ ಒತ್ತಡ ಪಕ್ಷದ ಹೈಕಮಾಂಡ್ ಮೇಲಿದೆ, ಆದ ಕಾರಣ ಕೆ.ಟಿ.ಶಾಂತಕುಮಾರ್ ಅವರಿಗೆ ಜೆಡಿಎಸ್ ಗೆ ಬರುವಂತೆ ತಾಲೂಕು ಘಟಕ ದಿಂದ ಮನವಿ ಮಾಡುತ್ತಿದ್ದೇವೆ ಎಂದರು.

    ತಾಲೂಕು ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಜಗದೀಶ್ ಮಾತನಾಡಿ, ಕೆ.ಟಿ.ಶಾಂತಕುಮಾರ್ ಜೆಡಿಎಸ್ ಪಕ್ಷಕ್ಕೆ ಬಂದು ಪಕ್ಷದಿಂದ ಸ್ಪರ್ಧಿಸಿದರೆ, ಮಾಜಿ ಶಾಸಕ ಬಿ,ನಂಜಾವರಿಯವರು ಕೂಡ ಕೆ.ಟಿ.ಶಾಂತಕುಮಾರ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

    ಈಗಾಗಲೇ ತಾಲೂಕಿನಲ್ಲಿ ಉತ್ತಮ ಸಮಾಜ ಸೇವಕರು ಎಂದು ಹೆಸರು ಗಳಿಸಿರುವ ಶಾಂತಕುಮಾರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು, 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಚುನಾವಣಾ ಕಣಕ್ಕೆ ಇಳಿದರೆ ಶಾಸಕರಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

    ಜೆಡಿಎಸ್ ಪಕ್ಷದ ಮುಖಂಡರಾದ ಗೋವಿಂದಸ್ವಾಮಿ, ಬಾಳೇಕಾಯಿ ಸ್ವಾಮಿ ,ರಾಜಶೇಖರ್, ತಿಮ್ಮೇಗೌಡ, ರಾಕೇಶ್, ನಾಗರಾಜು, ಮೊದಲಾದವರು ಕೆಟಿ ಶಾಂತಕುಮಾರ್ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರೆ ಪಕ್ಷ ಬಲಗೊಳ್ಳಲಿದೆ ಎಂದು ಸಭೆಯಲ್ಲಿ ಹೇಳಿದರು.

    ಈ ವೇಳೆ ಮಾತನಾಡಿದ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್, ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಕುಡಿಯುವ ನೀರು, ಗೋವು ಗಳಿಗೆ ಮೇವು, ಕರೋನಾ ಸಂದರ್ಭದಲ್ಲಿ ಸೇವೆ ಹೀಗೆ ಹತ್ತಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ, ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸಭೆಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ, ಪಕ್ಷದ ಮುಖಂಡರ ಅಭಿಪ್ರಾಯ ಹಾಗೂ ನನ್ನ ಬೆಂಬಲಿಗರ ಜೊತೆ ಮಾತನಾಡಿದ ನಂತರ, ಮುಂದಿನ ನಿರ್ಧಾರ ಇನ್ನೊಂದು ವಾರದಲ್ಲಿ ಕೈಗೊಳ್ಳುತ್ತೇನೆ ಎಂದು ಜೆಡಿಎಸ್ ಮುಖಂಡರಿಗೆ ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಧಮ್ಮನಾರಾಯಣಗೌಡ, ಯುವ ಮುಖಂಡರಾದ ರೋಹಿತ್, ಜ ಮೃದ್ ಪಾಷಾ, ಮಂಜು, ಕುಮಾರ್ ಯೋಗಾನಂದ ಮೊದಲಾದವರು ಇದ್ದರು.

    ವರದಿ: ಆನಂದ್ ತಿಪಟೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ತಿಪಟೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಫೆ.12ರಂದು ಸ್ವಯಂ ಪ್ರೇರಿತ ಬಂದ್, ಮುಷ್ಕರ

    February 6, 2026

    ತಿಪಟೂರಿನಲ್ಲಿ ಬೃಹತ್ ಉದ್ಯೋಗ ಮೇಳ: 396 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ

    February 1, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪಕ್ಷ ನಿಷ್ಠೆ ಇಲ್ಲದವರನ್ನು  ಜೊತೆಯಲ್ಲಿಟ್ಟುಕೊಳ್ಳಬಾರದು ಎಚ್.ಡಿ.ಕುಮಾರಸ್ವಾಮಿ ಖಡಕ್ ಮಾತು

    February 9, 2026

    ಮೈಸೂರು: ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡರು ಹಾಗೂ ಪಕ್ಷದ ನಾಯಕತ್ವದ ನಡುವಿನ ಮುನಿಸು ಈಗ ಬಹಿರಂಗವಾಗಿದ್ದು, “ಜಿ.ಟಿ. ದೇವೇಗೌಡರು…

    ವೇಶ್ಯಾವಾಟಿಕೆಗೆ ಅತ್ತೆ–ಮಾವನ ಒತ್ತಾಯ: ಮನನೊಂದ ವಿವಾಹಿತೆ ಆತ್ಮಹತ್ಯೆ

    February 9, 2026

    ಕೆನಡಾದಲ್ಲಿ ಬೆಂಗಳೂರು ಮೂಲದ ಯುವಕ ಗುಂಡೇಟಿಗೆ ಬಲಿ

    February 9, 2026

    ತುಮಕೂರು: ಬಾಣಾವರ ಗೇಟ್ ಬಳಿ ಭೀಕರ ಸರಣಿ ಅಪಘಾತ; ಮಾಜಿ ತಾಪಂ ಸದಸ್ಯ ಸೇರಿ ಇಬ್ಬರು ಸಾವು

    February 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.