ಕೊಪ್ಪಳ: 2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ 1 ಲಕ್ಷ ರೂ ಸಾಲ ಮನ್ನಾ ಮಾಡುವೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.
ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಮತ್ತು ಮಹಿಳೆಯರು ಕಷ್ಟದಲ್ಲಿದ್ದು ಪ್ರತಿದಿನ ತಮ್ಮ ಅಳಲನ್ನು ತೋಡಿಕೋಳ್ಳುತ್ತಿದ್ದಾರೆ. ವಾಸಿಸಲು ಮನೆ ಇಲ್ಲವೆಂದು ಹೇಳುತ್ತಿದ್ದಾರೆ. ಕೋವಿಡ್ ವೇಳೆ ಮೃತ ಕುಟುಂಬಕ್ಕೆ ಇನ್ನೂ ಪರಿಹಾರ ಬಂದಿಲ್ಲಾ ಎನ್ನುತ್ತಾರೆ. ಅವರ ಕಷ್ಟಕ್ಕೆ ನಾನು ಸ್ಪಂದನೆ ಮಾಡುತ್ತಿದ್ದೇನೆ ಫಸಲ್ ಬಿಮಾ ಯೋಜನೆ ಹೆಸರಲ್ಲಿ ವಿಮಾ ಕಂಪನಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ. ಈ ಹಿಂದೆ ರೈತರ ಆತ್ಮಹತ್ಯೆ ಹೆಚ್ಚಾದವು. ಅವರ ನೋವು ಅರಿತು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ್ದೆ. ನನಗೆ ಪೂರ್ಣ ಬಹುಮತ ಬರಲಿಲ್ಲ. ಆದರೂ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ನನಗೆ ಒತ್ತಡ ಹಾಕಿದ್ರು, ನಿಮ್ಮ ಕಾರ್ಯಕ್ರಮಕ್ಕೆ ಹಣ ಹೊಂದಿಸಿ ಕೊಡುವೆ ಎಂದಿದ್ದೆ. ಆದರೂ ಸರ್ಕಾರ ಕೆಡವಿದರು. ಆ ಮಧ್ಯೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನಂತರ ಬಂದಿರುವ ಬಿಜೆಪಿ ಸರ್ಕಾರ ಇನ್ನೂ 2 ಲಕ್ಷ ಕುಟುಂಬಕ್ಕೆ ಸಾಲ ಮನ್ನಾ ಹಣ ಬಂದಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದರೆ ಸಾಲ ಮುಟ್ಟದ ರೈತರಿಗೆ ಸಾಲ ಮನ್ನಾ ಮಾಡುವೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy