ನವದೆಹಲಿ: ಅಮೆರಿಕ ಮತ್ತು ರಷ್ಯಾ ನಡುವೆ ಉಕ್ರೇನ್ ಯುದ್ಧದ ವಿಚಾರವಾಗಿ ಪರಸ್ಪರ ತುಂಬಾ ಚರ್ಚೆ ನಡೆಯುತ್ತಿದೆ.ಜಗತ್ತಿನ ದೈತ್ಯ ಶಕ್ತಿಗಳಾದ ಅಮೆರಿಕ, ರಷ್ಯಾದಿಂದ ಭಾರತ ಶಸ್ತ್ರಾಸ್ತ್ರ ಗಳನ್ನು ಖರೀದಿ ಮಾಡಲು ಸಾಜ್ಜಾಗಿದೆ.ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಉಕ್ರೇನ್ಗೆ ಅಮೆರಿಕ ಬೆಂಬಲ ನೀಡಿದ್ದರ ಮಧ್ಯೆ ಈ ಪ್ರಸ್ತಾವ ಮಹತ್ವ ಪಡೆದುಕೊಂಡಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎರಡೂ ರಾಷ್ಟ್ರಗಳ ಮಿತ್ರನಾದ ಭಾರತ ನೌಕಾಪಡೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಉಭಯ ರಾಷ್ಟ್ರಗಳಿಂದ ಖರೀದಿಸಲು ಮುಂದಾಗಿದೆ. ರಕ್ಷಣಾ ಪಡೆಗಳು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ರಕ್ಷಣಾ ಸಚಿವಾಲಯವು ಇದನ್ನು ಪರಿಶೀಲನೆ ನಡೆಸುತ್ತಿದೆ.
ಭಾರತೀಯ ನೌಕಾಪಡೆಯು ರಷ್ಯಾದಿಂದ 20 ಕ್ಕೂ ಹೆಚ್ಚು ಕ್ಲಬ್ ಆಯಂಟಿ ಶಿಪ್ ಕ್ರೂಸ್ ಕ್ಷಿಪಣಿಗಳು ಮತ್ತು ಅಮೆರಿಕದ ಹಾರ್ಪೂನ್ ಹಡಗು ವಿರೋಧಿ ಕ್ಷಿಪಣಿ ಸಾಧನದ ಉಪಕರಣಗಳನ್ನು ಪಡೆಯಲು ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. .
ಭಾರತೀಯ ನೌಕಾಪಡೆಯು ಈಗಾಗಲೇ ತನ್ನ ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ಹಾರ್ಪೂನ್ ಕ್ಷಿಪಣಿಗಳನ್ನು ನಿಯೋಜಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ಭಾರತವು ಸಾಂಪ್ರದಾಯಿಕವಾಗಿ ರಷ್ಯಾದ ಶಸ್ತ್ರಾಸ್ತ್ರಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿತ್ತು. ಆದರೆ, ಕಳೆದ ಎರಡು ದಶಕಗಳಿಂದ ಅಮೆರಿಕ ಮತ್ತು ಫ್ರಾನ್ಸ್‌ನಿಂದ ದೊಡ್ಡ ರೀತಿಯಲ್ಲಿ ಸೇನಾ ಸಾಮಗ್ರಿ ಖರೀದಿ ನಡೆಸುತ್ತಿದೆ. ಈ ಮೂಲಕ ವಿವಿಧ ದೇಶಗಳ ಸೇನಾ ಉಪಕರಣಗಳನ್ನು ಬಳಸುತ್ತಿದೆ ಎಂದು ಹೇಳಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


