ಸರಗೂರು: ಇತ್ತೀಚೆಗಿನ ದಿನಗಳಲ್ಲಿ ಸಂಘಟನೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಂದ ಸಮುದಾಯದ ಜನತೆ ಸಾಕಷ್ಟು ಅವಘಡಗಳಿಗೆ ತುತ್ತಾಗುತ್ತಿರುವುದು ವಿಷಾದಕರ. ಇದಕ್ಕೆ ಸಂಘಟನೆ ಒಗ್ಗಟ್ಟಾಗಬೇಕು ಎಂದು ಜೈ ಭೀಮ್ ದಮನಿತರ ಸೇವೆ ಸಮಿತಿ ರಾಜ್ಯಾಧ್ಯಕ್ಷ ಮೇಡಿಹಾಳ ಡಾ.ಮುನಿಆಂಜಿನಪ್ಪ ತಿಳಿಸಿದರು.
ಪಟ್ಟಣದ ಖಾಸಗಿ ಹೋಟೆಲಿನಲ್ಲಿ ಗುರುವಾರದಂದು ಏರ್ಪಡಿಸಿದ್ದ ‘ಜೈ ಭೀಮ್ ದಮನಿತರ ಸೇವಾ ಸಮಿತಿ’ಯ ರಾಜ್ಯಾಧ್ಯಕ್ಷ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆ ಮಾಡಿ ಮಾತನಾಡಿದರು.
ಜಿಲ್ಲಾ ಮತ್ತು ತಾಲೂಕು ಸಮಿತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ, ಮೈಸೂರಿನ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಆಯ್ಕೆ ಮಾಡಲು ಪ್ರತಿ ತಾಲ್ಲೂಕುಗಳಿಗೆ ಭೇಟಿ ನೀಡಿ ಸಮಿತಿ ಪ್ರಾರಂಭ ಮಾಡಿ, ನಮ್ಮ ದಮನಿತರ ಮತ್ತು ಬಡವರಿಗೆ ಅನ್ಯಾಯವಾದಂತಹ ಸಂದರ್ಭದಲ್ಲಿ ನಮ್ಮ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಿಂತು ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕು. ನ್ಯಾಯಯುತವಾದ ಹೋರಾಟಗಳನ್ನು ಮಾಡಿ ಸಮಾಜದ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಪದಾಧಿಕಾರಿಗಳ ಆಯ್ಕೆ:
ಜಿಲ್ಲಾ ಶಾಖೆಯ ಪದಾಧಿಕಾರಿಗಳಾಗಿ ಎನ್ ಬಸವರಾಜು (ಜಿಲ್ಲಾಧ್ಯಕ್ಷ), ರಂಗಸ್ವಾಮಿ (ಜಿಲ್ಲಾ ಉಪಾಧ್ಯಕ್ಷ ), ಅಯ್ಯಪ್ಪ (ಪ್ರದಾನ ಕಾರ್ಯದರ್ಶಿ), ಮಹದೇವಸ್ವಾಮಿ (ಖಜಾಂಚಿ), ಚನ್ನಯ್ಯ (ಸಂಘಟನೆ ಸಂಚಾಲಕ), ಸೋಮೇಶ್ (ಸಂಘಟನೆ ಸಂಚಾಲಕ), ದೇವೇಂದ್ರ (ಸಂಘ ಟನಾ ಸಂಚಾಲಕ), ಯೋಗೇಂದ್ರ (ಸಂಘಟನೆ ಸಂಚಾಲಕ) ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳು ಆಯ್ಕೆ ಮಾಡಲಾಗುವುದು ಎಂದರು.
ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತೋರಿರುವ ಮಾರ್ಗದರ್ಶನದಲ್ಲಿ ನಡೆಯುವ ಕರ್ತವ್ಯ ಪದಾಧಿಕಾರಿಗಳು ಮಾಡಬೇಕು. ದಲಿತ, ಹಿಂದುಳಿದ, ಅಲ್ಪಸಂಖ್ಯಾರ ಆಶಾದಾಯಕ ಸಂಘಟನೆಯಾಗಿ ಸಂಘಟನೆ ಮುನ್ನುಗ್ಗುತ್ತಿದೆ. ಸಂಘಟನೆಗೆ ಕಾರ್ಯಕರ್ತರೇ ಜೀವಾಳ. ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಸಂಚರಿಸುವ ನಿಟ್ಟಿನಲ್ಲಿ ಸಂಘಟನೆ ಬಲಿಷ್ಠ ಪಡಿಸುವ ದಿಸೆಯಲ್ಲಿ ನಿರಂತರ ಹೋರಾಟ ನಡೆಸಬೇಕು. ಯುವಕರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಂಘಟಿಸುವ ಉದ್ದೇಶದಿಂದಲೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ” ಎಂದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆ ಸಂಚಾಲಕ ಕದಿರೇನಹಳ್ಳಿ ಕುಮಾರ್, ಎಂ.ನವೀನ್ ಕುಮಾರ್, ಲಂಕೆ ಬಿಲ್ಲಯ್ಯ ಇನ್ನೂ ಮುಖಂಡರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


