ತುಮಕೂರು: ಜಿಲ್ಲೆಯ ತೋವಿನಕೆರೆ ಗ್ರಾಮದಲ್ಲಿ ಶ್ರೀ ಚಂದ್ರಪ್ರಭ ಜಿನಮಂದಿರದ ಆವರಣದಲ್ಲಿ ನಡೆದ ಜೈನ ಧಾರ್ಮಿಕ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಜೈನ ಮಠದ ಶ್ರೀ ಲಕ್ಷ್ಮೀ ಸೇನ ಭಟ್ಟರಕ ಸ್ವಾಮೀಜಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸುಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ವೀರೇಶನಂದ ಸ್ವಾಮೀಜಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಜರಿದ್ದರು.
ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮಾತನಾಡಿ, ಜೈನ ಧರ್ಮ ಮನಷ್ಯನಿಗೆ ಮನುಷ್ಯತ್ವ ಕೊಟ್ಟಿದೆ, ಜೈನ ಧರ್ಮವು ಭಾರತದ ಉಳಿವಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.
ರಾಮಕೃಷ್ಣ ಆಶ್ರಮದ ಶ್ರೀ ವೀರೇಶನಂದ ಸ್ವಾಮೀಜಿ ಮಾತನಾಡಿ, ಸುಮಾರು 45 ವರ್ಷಗಳಿಂದ ಒಡನಾಟ ಹೊಂದಿದ್ದೇನೆ. ಜೈನ ಧರ್ಮ ಮನಷ್ಯನಿಗೆ ಮನುಷ್ಯತ್ವ ಕೊಟ್ಟಿದೆ, ಜೈನ ಧರ್ಮವು ಹಾಲಿನಲ್ಲಿ ಜೇನು ಸೇರಿದಂತೆ ಸೇರಿದೆ. ಜೈನ ಧರ್ಮವು ಭಾರತದ ಉಳಿವಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಆಚರಣೆ ದೃಷ್ಟಿ ಯಲ್ಲಿ ಜೈನ ಧರ್ಮ ವನ್ನು ಒಪ್ಪಿಕೊಳ್ಳಬೇಕಿದೆ ಎಂದರು.
ಧರ್ಮವು ಸಮಾಜದಲ್ಲಿ ಐಕ್ಯತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ದೋಷವಿರುವುದು ಧರ್ಮದಲ್ಲಿ ಅಲ್ಲ ಬದಲಾಗಿ ಜನರಲ್ಲಿ ಎಂದರು.
ಮನೆ ಮನೆಯಲ್ಲಿ ಸಂಗೀತಾ ಅಭ್ಯಾಸ ಮಾಡಿದ್ರೆ ಭಯೋತ್ಪಾದನೆ ನಿರ್ಮೂಲನ ಆಗುತ್ತೆ ಎಂದು ಅಬ್ದುಲ್ ಕಲಾಂ ಹೇಳಿದ್ದರು, ಇದನ್ನು ಪಾಲಿಸಬೇಕಿದೆ ಎಂದ ಅವರು, ಭಾರತ ಕೇವಲ ಜಾತೀಯತೆಯಲ್ಲ ಅಧ್ಯಯನಶೀಲತೆಯ ಸ್ಥಳವಾಗಿದೆ ಎಂದರು.
ಸುಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಧೈರ್ಯ ಸಿಗೋದು ಧರ್ಮದಿಂದ ಮಾತ್ರ. ಯುವ ಪೀಳಿಗೆಗೆ ಧಾರ್ಮಿಕ ವ್ಯವಸ್ಥೆ ಕ್ಷೀಣಿಸುತ್ತಿದೆ. ಮಕ್ಕಳಿಗೆ ಸಂಸ್ಕಾರ ಕೊಡಬೇಕಿದೆ. ಧಾರ್ಮಿಕ ವಿಚಾರ ಪಸರಿಸಬೇಕಿದೆ. ಮಕ್ಕಳಿಗೆ ಪರಂಪರೆ ಬೆಳೆಯಬೇಕಿದೆ. ಧರ್ಮವನ್ನು ಅನುಸರಿಸಬೇಕಾದುದು ನನ್ನ ಜವಾಬ್ದಾರಿಯಾಗಿದೆ ಎಂದರು.
ಅಹಿಂಸಾ ವಾದಕ್ಕೆ ಜೈನ ಧರ್ಮ ಮಹತ್ವದ ಕೊಡುಗೆ ನೀಡಿದೆ. ಸತ್ಯವನ್ನು ಹೇಳಬೇಕು ಧರ್ಮವನ್ನು ಪಾಲಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಿರಿಜಮ್ಮ, ಜೈನ ಸಮಾಜದ ಅಧ್ಯಕ್ಷ ಶೀತಲ್, ಸಾಹಿತಿ ಪದ್ಮಪ್ರಸಾದ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q