ತುರುವೇಕೆರೆ : ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮಂಗಳವಾರ ಜೈನ ತೀರ್ಥಂಕರ ವರ್ಧಮಾನ ಮಹಾವೀರರವರ ಜಯಂತಿಯನ್ನು ತುಂಬಾ ಸರಳವಾಗಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ಜೈನ ಸಮಾಜದ ಬಂಧುಗಳು ಗ್ರಾಮದ ಅಂಚೆ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆಯಿಂದಲೂ ಮಧ್ಯಾಹ್ನ 2 ಗಂಟೆಯವರೆಗೆ ಮಜ್ಜಿಗೆ ಮತ್ತು ಹೆಸರು ಬೇಳೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೈನ ಸಮಾಜದ ಮುಖಂಡ ವಿಪುಲ್ ಜೈನ್ ಈ ಬಾರಿ ಮಹಾವೀರದ ಜಯಂತಿಯನ್ನು ಚಾರು ಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಜಯಂತಿಯನ್ನು ಬಹಳ ಸರಳವಾಗಿ ಆಚರಿಸುತ್ತಿದ್ದೇವೆ. ಶ್ರೀಗಳು ಜೈನ ಧರ್ಮ ಇಂದಿಗೂ ತನ್ನತನವನ್ನು ಉಳಿಸಿಕೊಂಡು ಬರುವುದಕ್ಕೆ ಪ್ರಮುಖ ಕಾರಣವೆಂದರೆ, ಜೈನ ತತ್ವಶಾಸ್ತ್ರದ ಗ್ರಂಥಗಳು ಹಾಗೂ ಜೈನ ವಾಸ್ತು ಶಿಲ್ಪ ಕಲೆ ಎಂಬುದನ್ನು ಅರಿತು ಜೈನ ಬಸದಿಗಳ ಜೀರ್ಣೋದ್ಧಾರ ಜೈನ ಸಾಹಿತ್ಯದ ಪ್ರಕಟಣೆಗೆ ವಿಶೇಷವಾಗಿ ಹೊತ್ತು ನೀಡುವುದರ ಜೊತೆಗೆ ಅವುಗಳ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಶ್ರೀಗಳ ಬಗ್ಗೆ ಮಾತನಾಡಿ ನಾಡಿನ ಜನತೆಗೆ ವರ್ಧಮಾನ ಮಹಾವೀರರ ಜಯಂತಿಯ ಶುಭಾಶಯಗಳು ಕೋರಿದರು.
ಮತ್ತೆ ಸಂಜೆ 4:30ರ ಸಮಯದಲ್ಲಿ ವರ್ಧಮಾನ ಮಹಾವೀರ ರ ಮೂರ್ತಿಯನ್ನು ಬೆಳ್ಳಿಯ ರಥದಲ್ಲಿ ಕೂರಿಸು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾವೀರರ ಪರ ಜೈಕಾರವನ್ನು ಮತ್ತು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷರಾದ ಚಂದ್ರಪ್ರಭು ,ಮಹಿಳಾ ಅಧ್ಯಕ್ಷರಾದ ಸುಮತಿ ಪ್ರಕಾಶ್, ಮಹಾವೀರ್ ಬಾಬು ಇನ್ನು ಅನೇಕ ಜೈನ ಸಮಾಜದ ಪದಾಧಿಕಾರಿಗಳು ಜೈನ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA