ಕೆರೆಗಳಲ್ಲಿ ತೇಲುವ ಜಲಕಳೆ ಹಾಗೂ ತ್ಯಾಜ್ಯವನ್ನು ತೆರವು ಮಾಡಲು ಬಿಬಿಎಂಪಿ ನೀಡಿರುವ ನಿರ್ದಿಷ್ಟ ಅಂಶಗಳ ಆಧಾರದಲ್ಲಿ ಸಿಎಸ್‌ಐಆರ್- ಎನ್‌ಎಎಲ್, ‘ಜಲ್‌ದೋಸ್ತ್-ಏರ್‌ಬೋಟ್ ಎಂಕೆ-2’ ಉನ್ನತೀಕರಿಸಿದ ಬೋಟ್ ಅನ್ನು ತಯಾರಿಸಿದೆ.
ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)- ರಾಷ್ಟ್ರೀಯ ವೈಮಾಂತರೀಕ್ಷ ಪ್ರಯೋಗಾಲಯ (ಎನ್ಎಎಲ್) ಈ ಏರ್‌ಬೋಟ್ ಉತ್ಪಾದನೆ ಆರಂಭಿಸಿದೆ. ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಇವುಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ಎನ್ಎಲ್ ನಿರ್ದೇಶಕ ಅಭಯ್ ಪಶಿಲ್ಕರ್ ಸುದ್ದಿಗಾರರಿಗೆ ತಿಳಿಸಿದರು. ಹಲಸೂರು ಕೆರೆಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡಲಾಗುತ್ತದೆ. ಶ್ರೀವಾರಿ ಎಂಜಿನಿಯರಿಂಗ್ ಸಿಸ್ಟಮ್ಸ್ ವತಿಯಿಂದ ಬಿಬಿಎಂಪಿಯ ಅಗತ್ಯಕ್ಕೆ ಅನುಗುಣವಾಗಿ ವಿತರಣೆ ಮಾಡಲಾಗುತ್ತದೆ ಎಂದರು.
‘ಜಲ್‌ದೋಸ್ತ್’ ಏರ್‌ಬೋಟ್ ಸ್ಟೀಲ್-ಮೆಸ್ ಹೊಂದಿದ್ದು, ಬೆಲ್ಟ್ ವ್ಯವಸ್ಥೆಯಲ್ಲಿ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ದಡಕ್ಕೆ ಬಂದು ತ್ಯಾಜ್ಯವನ್ನು ಸುರಿಯಲಾಗುತ್ತದೆ. ಮೂರು ಟನ್ ತ್ಯಾಜ್ಯವನ್ನು ಬೋಟ್ ನಲ್ಲಿ ಸಂಗ್ರಹಿಸಬಹುದು. ಒಂದು ಎಕರೆ ಪ್ರದೇಶವನ್ನು 8 ಗಂಟೆಗಳಲ್ಲಿ ಸ್ವಚ್ಛಗೊಳಿಸುತ್ತದೆ. ಒಂದು ಗಂಟೆಗೆ ಐದು ಲೀಟರ್ ಡೀಸೆಲ್ ಅಗತ್ಯವಿದೆ’ ಎಂದು ಮಾಹಿತಿ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


