ಸಿರಾ: ತಾಲೂಕಿನ ಹುಲಿಕುಂಟೆ ಗೇಟ್ ನಿಂದ ವಾಜರಹಳ್ಳಿ ಗೇಟ್ ಸಂಪರ್ಕಿಸುವ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ ಹೀಗಾಗಿ ಜನ ಸಾಮಾನ್ಯರು ಈ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡುವಂತಾಗಿದೆ.
ರಸ್ತೆ ಕಾಮಗಾರಿ ಆರಂಭಗೊಂಡ ವೇಳೆ ಇಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದರು. ಅತೀ ಶೀಘ್ರವೇ ಸುಸಜ್ಜಿತ ರಸ್ತೆಯಾಗುತ್ತದೆ ಎನ್ನುವ ಭರವಸೆಯಿಂದಿದ್ದರು. ಆದರೆ, ಇದೀಗ ರಸ್ತೆ ಜಲ್ಲಿ ಕಲ್ಲುಗಳ ರಾಶಿಯಾಗಿದ್ದು, ಈ ರಸ್ತೆ ನರಕಕ್ಕೆ ದಾರಿ ಎಂಬಂತಿದೆ ಎನ್ನುವ ಆಕ್ರೋಶ್ ಮಾತುಗಳು ಕೇಳಿ ಬಂದಿದೆ.
ಈ ರಸ್ತೆಯಲ್ಲಿ ಮಹಿಳೆಯರು ಮಕ್ಕಳು, ಹಿರಿಯ ನಾಗರಿಕರು ಎನ್ನದೇ ದಿನ ನಿತ್ಯ ಸಾರ್ವಜನಿಕರು ಪ್ರಯಾಣಿಸುತ್ತಿದ್ದಾರೆ. ಇವರ ಪಾಡು ಹೇಳತೀರದು. ಇದೀಗ ಈ ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷ ಕಾಯಬೇಕು ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಸ್ಥಳೀಯ ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ ಅವರು ಈ ಬಗ್ಗೆ ಗಮನ ಹರಿಸಬೇಕು. ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಕಾಮಗಾರಿ ಆರಂಭಗೊಂಡು ಒಂದು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದು ಎಷ್ಟೊಂದು ಶೋಚನೀಯ ಅವ್ಯವಸ್ಥೆ ಅಲ್ಲವೇ? ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy