ಶಿರಾ: ತಾಲೂಕಿನ ಚಿಕ್ಕಗೊಳ್ಳ ಕದಿರೇಕಂಬದಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ನೂತನ ದೇವಸ್ಥಾನ ಮತ್ತು ಶ್ರೀ ನವಗ್ರಹ, ಶ್ರೀ ನಾಗದೇವತಾ, ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ವಿಮಾನ ಕಳಸ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮವು ಜ.22 ರಿಂದ 25 ರವರೆಗೆ ನಡೆಯಲಿದೆ.
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸೇವಾ ಸಮಿತಿಯ ಸಹಯೋಗದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಜ.22, 23 ಮತ್ತು 24ರಂದು ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿವೆ. 24ರಂದು ರಾತ್ರಿ 10 ಗಂಟೆಗೆ ನೂತನ ಸ್ಥಿರಬಿಂಬ ಪ್ರತಿಷ್ಠಾಪನಾ ಪಿಂಡಿಕಾ ಪೂಜಾ ವಿಧಿವಿಧಾನ ನಡೆಯಲಿದೆ.
ಸಿದ್ಧಲಿಂಗ ಸ್ವಾಮೀಜಿ, ವೀರೇಶಾನಂದರ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ: ಜ.25 ರಂದು ಬೆಳಿಗ್ಗೆ 10.30ಕ್ಕೆ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಹಾಗೂ ಶ್ರೀ ರಾಮಕೃಷ್ಣ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಪಾರ್ವತಮ್ಮ ಮುಲ್ಲೇಗೌಡ ಕುಟುಂಬದವರಿಂದ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.
ಮಹಿಳಾ ವೀರಗಾಸೆ ಉತ್ಸವ ಮೆರವಣಿಗೆ: ಜ.25 ರಂದು ಸಂಜೆ ಉತ್ಸವ ನಡೆಯಲಿದ್ದು, ತ್ಯಾಗನಕಟ್ಟೆಯ ನವದುರ್ಗಿ ಮಹಿಳಾ ವೀರಗಾಸೆ ತಂಡವು ಉತ್ಸವದಲ್ಲಿ ಪಾಲ್ಗೊಳ್ಳಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


