ಬೆಂಗಳೂರು : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿಯವರು ಗಂಗಾವತಿ ಮತ ಕ್ಷೇತ್ರದಿಂದ ಪ್ರಚಂಡ ಬಹುಮತದಿಂದ ಗೆದ್ದು ಗಂಗಾವತಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಗಂಗಾವತಿ ಮತ ಕ್ಷೇತ್ರದ ಪ್ರತಿ ನಾಗರಿಕರಿಗೆ ಧನ್ಯವಾದ ತಿಳಿಸುತ್ತ ಮಾತನಾಡಿರುವ ರೆಡ್ಡಿಯವರು ರಾಜಕೀಯವಾಗಿ ಪುನರಜನ್ಮ ನೀಡಿ ಗೆಲ್ಲಿಸಿ ತಂದಿರುವ ಗಂಗಾವತಿ ಜನತೆಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕದತ್ತ ಮುಖ ಮಾಡಿದ ರೆಡ್ಡಿ
ಹೌದು ಉತ್ತರ ಕರ್ನಾಟಕ ಪಾಲಿಟಿಕ್ಸನತ್ತ ಮುಖ ಮಾಡಿರುವ ಜನಾರ್ಧನ ರೆಡ್ಡಿಯವರು ಉತ್ತರ ಕರ್ನಾಟಕದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಹೆಮ್ಮರವಾಗಿ ಬೆಳೆಸುತ್ತೇನೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಮೇಲೆ ವಿಶೇಷ ಪ್ರೀತಿ
ದಕ್ಷಿಣದ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಮೇಲೆ ರೆಡ್ಡಿಯವರು ವಿಶೇಷ ಪ್ರೀತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ, ಬೆಳಗಾವಿಯಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿರುವ ಜನಾರ್ಧನ ರೆಡ್ಡಿಯವರು ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಪಕ್ಷವನ್ನು ಮತ್ತಷ್ಟು ಉತ್ತುಂಗಕ್ಕೆ ಒಯ್ಯುತ್ತೇನೆ ಎಂದು ಹೇಳಿದ್ದಾರೆ.
ಪ್ರವೀಣ್ ಹಿರೇಮಠ ಅವರನ್ನು ಕೊಂಡಾಡಿದ ರೆಡ್ಡಿ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಬೆಳಗಾವಿ ಉತ್ತರ ಮತ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪ್ರವೀಣ್ ಹಿರೇಮಠ ಅವರನ್ನು ಗುಣಗಾನ ಮಾಡಿರುವ ಜನಾರ್ಧನ ರೆಡ್ಡಿ ನಾನು ಕಣಕ್ಕಿಳಿಸಿದ್ದು ಒಬ್ಬ ವಿದ್ಯಾವಂತ ಅಭ್ಯರ್ಥಿ , ಸೋಲು ಗೆಲುವು ರಾಜಕೀಯದಲ್ಲಿ ಎಲ್ಲ ಕಾಮನ ಎಂದು ಹೇಳಿರುವ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಪ್ರೀತಿ ತೋರಿಸಿದ್ದಕ್ಕಾಗಿ ಬೆಳಗಾವಿ ಜನತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


