ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಯರ‍್ರಮ್ಮನಹಳ್ಳಿ ಗ್ರಾಮದಲ್ಲಿ ಪಡಿತರದಾರರಿಗೆ ನೀಡಿದ ಅಕ್ಕಿಯಲ್ಲಿ ರಸಗೊಬ್ಬರದ ಹರಳುಗಳು ಮಿಶ್ರಣವಾಗಿರುವುದು ಬುಧವಾರ ಬೆಳಕಿಗೆ ಬಂದಿದೆ.
ಬೂದಿಬೆಟ್ಟ ಪಂಚಾಯಿತಿ ವ್ಯಾಪ್ತಿಯ ಯರ‍್ರಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ಪಡಿತರ ವಿತರಿಸಲಾಗಿದೆ. ಪಡಿತರದಾರರು ಮನೆಗೆ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಅಕ್ಕಿಯನ್ನು ಶುಭ್ರಮಾಡುವಾಗ ಅದರಲ್ಲಿ ಯೂರಿಯಾ ಮತ್ತು ಕಾಂಪ್ಲೆಕ್ಸ್ ಗೊಬ್ಬರದ ಹರಳುಗಳು ಗೋಚರಿಸಿವೆ. ಅನುಮಾನಗೊಂಡು ಅಕ್ಕಪಕ್ಕದ ಮನೆಗಳಲ್ಲಿನ ಪಡಿತರವನ್ನು ಪರೀಕ್ಷಿಸಿದಾಗ ಅವುಗಳಲ್ಲೂ ಗೊಬ್ಬರದ ಹರಳು ಕಂಡುಬಂದಿದೆ. ಗ್ರಾಮಸ್ಥರೆಲ್ಲಾ ಸೇರಿ ಈ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ. ತಹಶೀಲ್ದಾರರ ಆದೇಶದ ಅನ್ವಯ ತಕ್ಷಣ ಪಡಿತರ ವಿತರಣೆಯನ್ನು ನಿಲ್ಲಿಸಲಾಗಿದೆ.
ಗುರುವಾರ ಬೆಳಿಗ್ಗೆ ಗ್ರಾಮಕ್ಕೆ ಆಹಾರ ಪರಿವೀಕ್ಷಕ ಮಂಜುನಾಥ ಮತ್ತು ವಿತರಕ ರಾಮಚಂದ್ರರೆಡ್ಡಿ ಬೇಟಿ ನೀಡಿ ಪ್ರತಿ ಮನೆಯಲ್ಲಿ ಪರೀಕ್ಷಿಸಿದಾಗ ಎಲ್ಲದರಲ್ಲೂ ಮಿಶ್ರಣ ಕಂಡುಬಂದಿದೆ. ಸಾರ್ವಜನಿಕರ ಸೂಚನೆಯಂತೆ ಪಡಿತರ ಕೇಂದ್ರದ ದಾಸ್ತಾನುಗಳ ಮೂಟೆಗಳನ್ನು ಪರೀಕ್ಷಿಸಿದಾಗ ಅದರಲ್ಲೂ ಗೊಬ್ಬರ ಮಿಶ್ರಣ ಇರುವುದು ಖಾತ್ರಿಯಾಗಿದೆ.
ಈ ಬಗ್ಗೆ ಸ್ಥಳೀಯರು ಆತಂಕಗೊಂಡು ಅದಿಕಾರಗಳ ಬೇಜವಾಬ್ದಾರಿಯ ಬಗ್ಗೆ ಬೇಸರೊಂಡಾಗ ಪುಡ್ ಇನ್ಸ್ಪೆಕ್ಟರ್ ಮಂಜುನಾಥ ಮಾತನಾಡಿ ಸರ್ಕಾರಕ್ಕೆ ಈ ಬಗ್ಗೆ ವರದಿ ಮಾಡಲಾಗಿದೆ. ಪಡಿತರವನ್ನು ಬದಲಿ ಮಾಡಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy