ತಿಪಟೂರು: ನಗರದ ಪ್ರತಿಷ್ಠಿತ ಜನವಸತಿ ಪ್ರದೇಶಗಳಾದ ಮಾರನಗೆರೆ ಶಾರದಾ ನಗರ .ಶ್ರೀ ಸಿದ್ದಾರಾಮೇಶ್ವರ ಬಡಾವಣೆ.ನಾರಾಯಣಗೌಡ ಲೇಹೌಟ್.ಶಿವನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಗಳ ಓಡಾಟ ಕಂಡುಬಂದಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ
ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ವಾಯುವಿಹಾರಿಗಳು ಸಂಚರಿಸುವ ಮಾರ್ಗವಾಗಿದ್ದು, ಜನವಸತಿ ಪ್ರದೇಶದ ಪಕ್ಕದ ತೋಟಗಳಲ್ಲಿ ಎರಡು ಚಿರತೆ ಸಂಚಾರ ಕಾಣಿಸಿಕೊಂಡ ಕಾರಣ ಆತಂಕಕ್ಕೆ ಕಾರಣವಾಗಿದ್ದು, ರಾತ್ರಿ ಚಿರತೆ ಸಂಚರಿಸುವಾಗ ವಾಹನ ಸವಾರೊಬ್ಬರು ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದು, ವಿಡಿಯೋ ನೋಡಿದ ಇಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಅರಣ್ಯ ಇಲಾಖೆ ಶೀಘ್ರವೇವಾಗಿ ಚಿರತೆ ಸೆರೆಹಿಡಿಯ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ಪರಿಶೀಲನೆ ನಡೆದಿದ್ದಾರೆ.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz