ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಗಂಧದ ಗುಡಿ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಗಂಧದ ಗುಡಿ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪುನೀತ್ ರಾಜ್ ಕುಮಾರ್ ಅವರನ್ನು ತೆರೆಯ ಮೇಲೆ ಕಂಡ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.
ಗಂಧದಗುಡಿ ಚಿತ್ರದ ಕುರಿತು ಪ್ರತಿಕ್ರಿಯಿಸಿರುವ ನಟ ಶಿವರಾಜ್ ಕುಮಾರ್, ಬೇರೆ ಸಿನಿಮಾ ನೋಡೋಕು ಇದನ್ನ ನೋಡೋಕು ವ್ಯತ್ಯಾಸವಿದೆ. ತುಂಬಾ ಕಷ್ಟ ಆಗುತ್ತಿದೆ. ಗಂಧದಗುಡಿಯ ಗಂಧ ನಮ್ಮ ಫ್ಯಾಮಿಲಿಗೆ ತುಂಬಾ ಹತ್ತಿರ ಇದೆ. ಈ ಸಿನಿಮಾವನ್ನ ಪ್ರತಿಯೊಬ್ಬರು ನೋಡಲೇಬೇಕು ಎಂದಿದ್ದಾರೆ.
ಹಾಗೆಯೇ ಗಂಧದಗುಡಿ ನೋಡುವಾಗ ಅಪ್ಪುವನ್ನ ಕಂಡರೇ ನೋವಾಗುತ್ತೆ. ಗಂಧದಗುಡಿ ಮೂಲಕ ಅಪ್ಪು ಸದಾ ಜೀವಂತವಾಗಿರುತ್ತಾನೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


