ಕುಣಿಗಲ್/ಕೆ.ಜಿ.ದೇವಪಟ್ಟಣ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದ (ಹಂಗರಹಳ್ಳಿ) ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ನಾಳೆ (ಜನವರಿ 17) ಅದ್ದೂರಿ ‘ವರ್ಧಂತಿ ಮಹೋತ್ಸವ’ ಜರುಗಲಿದ್ದು, ಕಾರ್ಯಕ್ರಮದ ಅಂಗವಾಗಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಆಶೀರ್ವಾದ ಪಡೆಯಲಾಗಿದೆ.
ಶೃಂಗೇರಿ ಶ್ರೀಗಳ ಅನುಗ್ರಹ: ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಪ್ರಯುಕ್ತ, ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಶ್ರೀ ಬಾಲ ಮಂಜುನಾಥ ಸ್ವಾಮೀಜಿರವರು ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಆಮಂತ್ರಣ ಪತ್ರಿಕೆ ಸಮರ್ಪಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಗದ್ಗುರುಗಳು ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರಿಗೆ ಶ್ರೀ ಮಠದ ವತಿಯಿಂದ ಪವಿತ್ರ ವಸ್ತ್ರವನ್ನು ಸಮರ್ಪಣೆ ಮಾಡಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಹರಸಿದರು.
ಧಾರ್ಮಿಕ ಕಾರ್ಯಕ್ರಮಗಳ ವಿವರ: ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ಜ. 07 ರಿಂದ ಜ. 17 ರವರೆಗೆ ಪ್ರತಿದಿನ ಬೆಳಗ್ಗೆ 6:30 ಕ್ಕೆ ಗಣಪತಿ ಪೂಜೆ, ಶತಚಂಡಿ ಪಾರಾಯಣ, ಚಂಡಿಹೋಮ ಮತ್ತು ಕುಮಾರಿಕಾ ಪೂಜೆ ನೆರವೇರಲಿದೆ. ಸಂಜೆ 4:30 ಕ್ಕೆ ದುರ್ಗಾ ಸಪ್ತಶತಿ ಪಾರಾಯಣ, ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಹಾಗೂ ದೀಪೋತ್ಸವ ಜರುಗಲಿದೆ.
ಜ. 17 ರಂದು ಅಮ್ಮನವರ ವೈಭವೋತ್ಸವ: ವರ್ಧಂತಿ ಮಹೋತ್ಸವದ ಕಡೆಯ ದಿನವಾದ ಜನವರಿ 17 ರಂದು ಶತಚಂಡಿ ಮಹಾಯಾಗದ ಪೂರ್ಣಾಹುತಿ ನಡೆಯಲಿದೆ. ಈ ಪವಿತ್ರ ದಿನದಂದು ಕ್ಷೇತ್ರಕ್ಕೆ ಎರಡು ಮಹತ್ವದ ಕೊಡುಗೆಗಳನ್ನು ಸಮರ್ಪಿಸಲಾಗುತ್ತಿದೆ.
ನಮ್ಮತುಮಕೂರಿನಕ್ಷಣಕ್ಷಣದಸುದ್ದಿಗಳನ್ನುನಿರಂತರವಾಗಿಪಡೆಯಲುನಿಮ್ಮವಾಟ್ಸಾಪ್ಗ್ರೂಪ್ಗೆ 8123382149 ಸಂಖ್ಯೆಯನ್ನುಸೇರಿಸಿ.
ಗ್ರೂಪ್ಗೆಜಾಯಿನ್ಆಗಿ: https://chat.whatsapp.com/ISmeQjik4LbG9KvWhKlbCC


