ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಆರೋಪಿ ಮೊಹಮ್ಮದ್ ಆರೀಫ್ ಜೈಲಿನಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು. ಹಳೇ ಹುಬ್ಬಳ್ಳಿ ಠಾಣೆಯಲ್ಲಿರುವ ಗಲಬೆ ಆರೋಪಿ , ತನ್ನ ಕಾಲಿಗೆ ಗಾಯವಾಗಿದೆ, ಹಾಗಾಗಿ ಟರ್ಪಂಟೈನ್ ಕೊಡಿ ಎಂದು ಕೇಳಿದ್ದ ಕಾರಣ ಪೊಲೀಸರು ಟರ್ಪಂಟೈನ್ ತಂದುಕೊಟ್ಟಿದ್ದರು. ಬಳಿಕ ಮೊಹಮ್ಮದ್ ಆರಿಪ್ ಟರ್ಪಂಟೈನ್ನ್ನು ಕುಡುದು ಪ್ರಯತ್ನಿಸಿದ್ದಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಮೊಹಮ್ಮದ್ ಆರಿಫ್ ಜತೆಗಿದ್ದ ಇನ್ನೊಬ್ಬ ಆರೋಪಿ ಎಐಎಂಐಎಂ ಕಾರ್ಪೋರೇಟರ್ ನಜೀರ್ ಅಹಮದ್ ಹೊನ್ಯಾಳ ಕೂಡಲೇ ಆರಿಫ್ರನ್ನು ತಡೆದಿದ್ದು ಮಾತ್ರವಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ. ಕೂಡಲೇ ಮೊಹಮ್ಮದ್ ಆರೀಫ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ವಾಟ್ಸ್ಆಯಪ್ ಸ್ಟೇಟಸ್ನಿಂದ ದೊಡ್ಡಮಟ್ಟದಲ್ಲಿ ಗಲಭೆ ನಡೆದಿತ್ತು. ಈ ಪ್ರಕರಣದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 10-12 ಜನರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಮೌಲ್ವಿ ವಸೀಂ ಪಠಾಣ್ ನನ್ನು ಪೊಲೀಸರು ಬಂಧಿಸಿದ್ದ, ಆತನ ಹೇಳಿಕೆಯ ಮೇರೆಗೆ ಎಐಎಂಐಎಂಗೆ ಸೇರಿದ ಮೂವರನ್ನು ಬಂಧಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


