ತುರುವೇಕೆರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ವರಿಷ್ಠರಾದ, ಹೆಚ್.ಡಿ.ಕುಮಾರಸ್ವಾಮಿ, ಅವರು ರಾಜ್ಯದ ಮುಖ್ಯಮಂತ್ರಿ ಆದರೆ ನನಗೂ ಸಚಿವ ಸ್ಥಾನ ಸಿಗುವ ಅವಕಾಶ ಇದ್ದು, ಮತದಾರ ಪ್ರಭುಗಳಾದ ನೀವು ಆಶೀರ್ವಾದ ಮಾಡಿ, ನನ್ನನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ರವರು ಮತದಾರರಲ್ಲಿ ವಿನಂತಿಸಿಕೊಂಡರು.
ಪಟ್ಟಣದಿಂದ ಸುಮಾರು ಎರಡು ಕಿಲೋಮೀಟರ್ ಅಂತರದಲ್ಲಿರುವ ಹಾವಾಳ ಗ್ರಾಮದಿಂದ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ 20,000ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಪಟ್ಟಣಕ್ಕೆ ಆಗಮಿಸಿದ ಎಂ.ಟಿ.ಕೃಷ್ಣಪ್ಪನವರು ತಿಪಟೂರು ವೃತ್ತದಲ್ಲಿ ಕಾರ್ಮಿಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಕುಮಾರಣ್ಣನವರ ಸರ್ಕಾರವು, ರಚನೆಯಾದ ಕೆಲವೇ ದಿನಗಳಲ್ಲಿ ತುರುವೇಕೆರೆಯನ್ನು ಜಿಲ್ಲಾ ಮುಖ್ಯ ಕೇಂದ್ರವನ್ನಾಗಿಸುವೆ, ಅದರ ಜೊತೆಗೆ ಸಿ ಎಸ್ ಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ , ತಮ್ಮಗಳ ಸೇವೆ ಮಾಡಿ ಋಣವನ್ನು ತೀರಿಸುವೆ , ನನ್ನ ಅವಧಿಯಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪದವಿ ಕಾಲೇಜುಗಳು , ಪಾಲಿಟೆಕ್ನಿಕ್ ಕಾಲೇಜು , ವೈದ್ಯಕೀಯ ಸೇವೆಗಾಗಿ ಆಸ್ಪತ್ರೆ, ಬಸ್ ನಿಲ್ದಾಣ, ಏತ ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿಯ ಕೆಲಸಗಳನ್ನು ಕ್ಷೇತ್ರಕ್ಕೆ ಮಾಡಿದ್ದೇನೆ. ಆದರೆ ಬಿ ಜೆ ಪಿ ಶಾಸಕ ಮಸಾಲ ಜಯರಾಮ್ ಕೇವಲ ಕಮಿಷನ್ ಆಸೆಗಾಗಿ ಕಮಿಷನ್ ಬರುವ ಕಾಮಗಾರಿಗಳನ್ನು, ಮಾತ್ರ ಮಾಡಿ ಅಭಿವೃದ್ಧಿಯ ಕಾಮಗಾರಿಗಳಿಗೆ ತಿಲಾಂಜಲಿಯನ್ನು ಇಟ್ಟಿದ್ದಾರೆ ಎಂದು ಆರೋಪಿಸಿದರು.
ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದ್ದು , ಶಾಸಕ ಮಸಾಲ ಜಯರಾಮ್ ಸೇರಿದಂತೆ ಬಿಜೆಪಿ ಸರ್ಕಾರದ ಯಾವ ಶಾಸಕರು ಕೂಡ ರೈತರ ಸಮಸ್ಯೆಗಳನ್ನ ಆಲಿಸದೆ, ರೈತರು ಕಂಗಾಲಾಗುವಂತೆ ಮಾಡಿದ್ದಾರೆ ,ಇದರ ಬಗ್ಗೆ ನಾನು ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ ,ಬಿಜೆಪಿ ಶಾಸಕರ ದುರಾಡಳಿತಕ್ಕೆ ಬೇಸತ್ತು ಹಲವಾರು ಬಿ ಜೆ ಪಿಯ ಮುಖಂಡರುಗಳು, ಕಾರ್ಯಕರ್ತರುಗಳು ಬಿ ಜೆ ಪಿಗೆ ಗುಡ್ ಬೈ ಹೇಳಿ ,ಜೆ ಡಿ ಎಸ್ ಪಕ್ಷವನ್ನ ಸೇರಿದ್ದು ಈ ಮೂಲಕ ಮಸಾಲಾ ಜೈರಾಮ್ ಗೆ ಬುದ್ಧಿ ಬುದ್ಧಿಯನ್ನು ಕಲಿಸಲಿದ್ದಾರೆ .ಎಂದು ಕುಟುಗಿದರು , ಗುಬ್ಬಿ ತಾಲೂಕಿನ ಸಿ ಎಸ್ ಪುರ ಗುಬ್ಬಿಯ ಕ್ಷೇತ್ರವಲ್ಲ , ಅದು ನನ್ನ ಕ್ಷೇತ್ರವಾಗಿದ್ದು ಸಂಪೂರ್ಣವಾಗಿ ಜೆ ಡಿ ಎಸ್ ಪರವಾಗಿ ಎದ್ದಿದೆ, ಯಾವುದೇ ಸಂದೇಹವನ್ನು ಪಡಬೇಡಿ ಎಂದು ಕಾರ್ಯಕರ್ತರುಗಳಿಗೆ ತಿಳಿಹೇಳಿದರು.
ಬರುವ ಮೇ ತಿಂಗಳ 10 ನೇ ತಾರೀಕಿನಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ , ಪ್ರತಿಯೊಬ್ಬ ಕಾರ್ಯಕರ್ತನು ತಮ್ಮ ತಮ್ಮಗಳ ಬೂತ್ ನಲ್ಲಿ ಇದ್ದುಕೊಂಡು , ಜವಾಬ್ದಾರಿಯಿಂದ ಮತದಾರರನ್ನು ಪಕ್ಷದ ಪರ ಮನವೊಲಿಸಿ , ಮತ ಚಲಾವಣೆ ಮಾಡುವಂತೆ ನೋಡಿಕೊಳ್ಳಬೇಕು ನೀವೆಲ್ಲರೂ ಗೆದ್ದು ಹೋಗಿದ್ದೇವೆ ಎಂಬ ಅಹಂ ಪಡಬೇಡಿ ಎಂದು ಕಿವಿಮಾತು ಹೇಳಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಕಳೆದ ಚುನಾವಣೆಯ , ಪರಾಜಿತ ಬಿಜೆಪಿ ಅಭ್ಯರ್ಥಿ ಬೆಟ್ಟಸ್ವಾಮಿ ಅವರು ಕೃಷ್ಣಪ್ಪನವರ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿ, ಗುಬ್ಬಿ ತಾಲೂಕಿನ ಕುತಂತ್ರ, ರಾಜಕಾರಣದಿಂದ ದೂರ ಉಳಿಯುವ ಸಂದರ್ಭದಲ್ಲಿ ನನ್ನನ್ನು ಜೆ ಡಿಎಸ್ ಪಕ್ಷದ ಪ್ರಮುಖ ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು. ರಾಷ್ಟ್ರೀಯ, ಪಕ್ಷಗಳಾದ ಬಿ ಜೆ ಪಿ ಮತ್ತು ಕಾಂಗ್ರೆಸ್ ಸೂಟ್ ಕೇಸ್ ಗಳ ಸಂಸ್ಕೃತಿಯುಳ್ಳಂತಹ ಪಕ್ಷಗಳಾಗಿವೆ ಎಂದು ಆರೋಪಿಸಿದರು.
ಈ ರ್ಯಾಲಿಯಲ್ಲಿ ಕಾರ್ಯಕರ್ತರುಗಳು ಹಾಡಿಗೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸುತ್ತಾ, ಜೆ ಡಿ ಎಸ್ ಪಕ್ಷದ ವರಿಷ್ಠರಾದ ದೇವೇಗೌಡ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮತ್ತು ಎಂ.ಟಿ.ಕೃಷ್ಣಪ್ಪನವರ ಪರ ಘೋಷಣೆಗಳನ್ನು ಕೂಗುತ್ತಾ ಜೈಕಾರವನ್ನು ಹಾಕಿದರು,
ಬಳಿಕ ತಾಲೂಕು ಕಚೇರಿಗೆ ತೆರಳಿ , ಚುನಾವಣಾ ಅಧಿಕಾರಿಗಳಾದ ಮಂಜುನಾಥ್ ಹಾಗೂ ಸಹ ಚುನಾವಣಾ ಅಧಿಕಾರಿಗಳಾದ ವೈಯಂ ರೇಣು ಕುಮಾರ್ ರವರಿಗೆ ಉಮೇದುವಾರಿಕೆ ಅರ್ಜಿಯನ್ನು ಸಲ್ಲಿಸಿದರು.
ಈ ಬೃಹತ್ ಜಾಥಾದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ಗೌಡ, ತಾಲೂಕು ಜೆ ಡಿ ಎಸ್ ಅಧ್ಯಕ್ಷರಾದ ಸ್ವಾಮಿ, ಜೆ ಡಿ ಎಸ್ ಯುವ ಘಟಕದ ಅಧ್ಯಕ್ಷರಾದ ಬಾಣಸಂದ್ರ ರಮೇಶ್, ದೊಡ್ಡಘಟ್ಟ ಚಂದ್ರೇಶ್, ಎಡಗಿಹಳ್ಳಿ ವಿಶ್ವನಾಥ್, ದಂಡಿನ ಶಿವರ ಶಂಕರೇಗೌಡ ,ಮುನಿಯೂರು ರಂಗಸ್ವಾಮಿ, ಮುಂತಾದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy