ತಿಪಟೂರು : ತಿಪಟೂರು ಜೆ.ಡಿ.ಎಸ್ ನಾಯಕರುಗಳು ನನಗೆ ಜೆ.ಡಿ.ಎಸ್ ಟಿಕೆಟ್ ದೊರಕಿಸಿಕೊಡುತ್ತೇವೆ ಎಂದು ನನ್ನ ಬಳಿ ಹಣವನ್ನು ತೆಗೆದುಕೊಂಡು ನನಗೆ ಅನ್ಯಾಯ ಮಾಡಿದ್ದಾರೆ. ಅವರ ಹೆಸರುಗಳನ್ನು ಮುಂದಿನದಿನಗಳಲ್ಲಿ ತಿಳಿಸುತ್ತೇನೆ ಹಾಗೂ ಜೆ.ಡಿ.ಎಸ್ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ ಎಂದು ಜೆ.ಡಿ.ಎಸ್ ಮುಖಂಡ ಎಂ.ರವಿ (ಬಂಡೆರವಿ) ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನತೆಯ ಸೇವೆ ಮಾಡಬೇಕೆಂಬ ಉದ್ದೇಶದಿಂದ ಸಮಾಜ ಸೇವಕನಾಗಿ ಕೈಲಾಗದವರ ಧನಿಯಾಗಿ ಕೈಲಾದ ಸಮಾಜಸೇವೆಯನ್ನು ಮಾಡುತ್ತಾ ಬರುತ್ತಿದ್ದೇನೆ. ಈ ಹಿನ್ನೆಲೆಯಲ್ಲಿಯೇ ನನಗೆ ಕುಮಾರಸ್ವಾಮಿಯವರ ಪರಿಚಯವಿದ್ದು, ಈ ಬಗ್ಗೆ ತಿಳಿದ ಇಲ್ಲಿನ ಪ್ರಭಾವಿ ಜೆ.ಡಿ.ಎಸ್. ಮುಖಂಡರು ನೀವು ಜೆ.ಡಿ.ಎಸ್ ನಿಂದ ನೀವೇ ಅಭ್ಯರ್ಥಿಯಾಗಿ ಎಂದು ಹೇಳಿ 2022ರ ಯುಗಾದಿಯಲ್ಲಿ ಹಲವಾರು ಕಡೆ ಫ್ಲೆಕ್ಸ್ ಹಾಕಿಸಿದರು ಹಾಗೂ ನನ್ನಿಂದ ಹಣವನ್ನು ಪಡೆದರು. ಹೀಗೆ ಹಣ ಪಡೆದವರು ನನಗೆ ಮೋಸಮಾಡಿ ಈಗ ಜೆ.ಡಿ.ಎಸ್ ನಾಯಕನ ಹಿಂದೆ ಓಡಾಡುತ್ತಿದ್ದಾರೆ ಅವರು ಯಾರೆಂದು ಇದೇ ತಿಂಗಳ 20ರ ನಂತರ ತಿಳಿಸುತ್ತೇನೆ ಎಂದರು.
ತಿಪಟೂರು ಜನತೆಯ ಆಶೀರ್ವಾದದಿಂದ ಚುನಾಯಿತನಾದರೆ ಶೈಕ್ಷಣಿಕ, ಆರೋಗ್ಯ, ಉದ್ಯೋಗ ಸೇರಿದಂತೆ, ಮೂಲಭೂತ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಕಳೆದ ಹಲವಾರು ವರ್ಷಗಳಿಂದ ತಾಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ನನ್ನ ಕೈಲಾದಷ್ಟು ಸೇವೆಯನ್ನು ಪ್ರಚಾರ ಬಯಸದೆ ಮಾಡುತ್ತಿದ್ದೇನೆ. ತಾಲೂಕಿನ ಜನರೇ ನನ್ನ ನಾಯಕರು, ನನಗೆ ರಾಜಕೀಯ ಅವಶ್ಯಕತೆ ಇರಲಿಲ್ಲ. ಆದರೆ ಜನತೆಯ ಸೇವೆಯ ಉದ್ದೇಶದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ತಾಲೂಕಿನ ಜನತೆ ಆಶೀರ್ವದಿಸಬೇಕೆಂದು ಇದೆ ವೇಳೆ ಇವರು ತಿಳಿಸಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA