ಪಾವಗಡ: ತಾಲೂಕಿನ ಕೋಟಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೋಟಗುಡ್ಡ ಕಡಪಲ ಕೆರೆ ಅರೆಕ್ಯಾತನಹಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಪಕ್ಷದ ಜಾತ್ಯತೀತ ಜನತಾದಳ ವತಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಅಂಜನಪ್ಪ, ರಾಜ್ಯ ಕಮಿಟಿ ಸದಸ್ಯರಾದ ಎನ್.ತಿಮ್ಮಾರೆಡ್ಡಿ, ತಾಲೂಕ್ ಜೆಡಿಎಸ್ ಅಧ್ಯಕ್ಷರಾದ ಎನ್.ಎ.ಈರಣ್ಣ, ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್ ಕೋಟುಗುಡ್ಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಅಂಜಯ್ಯ, ಗೌರವ ಅಧ್ಯಕ್ಷರಾದ ರಾಜಶೇಖರಪ್ಪ, ಹೋಬಳಿ ಘಟಕದ ಅಧ್ಯಕ್ಷರಾದ ಹನುಮಂತ ರಾಯ, ಹೊಟ್ಟೆ ಬೊಮ್ಮನಹಳ್ಳಿ ಸರ್ವೇಶ್ವರ ರೆಡ್ಡಿ, ನಾಗರೆಡ್ಡಿ, ಉದಯ್ ಕುಮಾರ್, ಈರಣ್ಣ, ಮಂಜುನಾಥ ಇನ್ನಿತರೆ ಎಲ್ಲಾ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮೊಬೈಲ್ ಮುಖಾಂತರ ಆನ್ಲೈನ್ ಸದಸ್ಯತ್ವ ಮತ್ತು ಪುಸ್ತಕದಲ್ಲಿ ಸದಸ್ಯರ ಆಯ್ಕೆಯನ್ನು ಮಾಡಿ ದಾಖಲು ಮಾಡಲಾಯಿತು. ಎಲ್ಲಾ ಗ್ರಾಮಗಳಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದ್ದು ನೂರಾರು ಜನ ಕಾರ್ಯಕರ್ತರು ಮುಖಂಡರು ಪ್ರತಿ ಗ್ರಾಮದಲ್ಲಿ ಭಾಗವಹಿಸಿದ್ದರು.
ರೈತ ಘಟಕದ ಗಂಗಾಧರ ನಾಯ್ಡು ಯುವ ಘಟಕ ಅಧ್ಯಕ್ಷ ಭರತ್ ಕುಮಾರ್ ಪಾವಗಡ ನಗರದ ಕಾವಲಗೇರಿ ರಾಮಾಂಜನೇಯ ಆ ಬಂಡೆ ಗೋಪಾಲ ಗುಟ್ಟಹಳ್ಳಿ ಮಣಿ ಇನ್ನಿತರೆ ಮುಖಂಡರು ಕೋಟಗುಡ್ಡ ಗ್ರಾಮದಲ್ಲಿ ಭಾಗವಹಿಸಿದ್ದರು.
ವರದಿ : ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC