ಪಾವಗಡ ವಿಧಾನಸಭಾ ಕ್ಷೇತ್ರದ ಹಲವು ಜೆಡಿಎಸ್ ಮುಖಂಡರು ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಶಾಸಕರಾದ ವೆಂಕಟರಮಣಪ್ಪ ಹಾಗೂ ಯುವ ನಾಯಕ ಹೆಚ್.ವಿ.ವೆಂಕಟೇಶ್ ರವರ ಸಮ್ಮುಖದಲ್ಲಿ ಜೆಡಿಎಸ್ ಮುಖಂಡ, ನಿವೃತ್ತ ಶಿರಸ್ತೆದಾರರಾದ ಮಲ್ಲಿಕಾರ್ಜುನಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬೋರನಾಯಕ, ನಾರಾಯಣಪ್ಪ ದೇವಲಕೆರೆ, ತಿಪ್ಪೇಸ್ವಾಮಿ, ಮಾದನಾಯಕ, ಕರಿಯಣ್ಣ ಹಾಗೂ ಪ್ರೇಮ್ ಕುಮಾರ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಈ ವೇಳೆ ಹಿರಿಯ ಮುಖಂಡರಾದ ದೊಡ್ಡ ಹನುಮಂತರಾಯಪ್ಪ, ರಂಗೇಗೌಡರು, ಚಿಕ್ಕಣ್ಣ, ದಿನೇಶ್ ಗೋವಿಂದಪ್ಪ ಜಿ.ಕೆ., ಸಿದ್ದೇಶ್, ಮಾನಂಗಿ ರಂಗಣ್ಣ, ಅಂಗಡಿ ಮಂಜುನಾಥ್, ಅಂಗಡಿ ಹನುಮಂತರಾಯಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಜಿತ್, ಶ್ರೀರಾಮುಲು, ಮುರುಳಿಧರ್ ರಘು ಸೇರಿದಂತೆ ಇನ್ನೂ ಹಲವರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ರಾಮಪ್ಪ, ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA