ಹಾಸನ: ಜೆಡಿಎಸ್ ಒಂದೇ ಕುಟುಂಬದ ಪಕ್ಷ, ಮಧ್ಯದಲ್ಲಿ ಒಂದು ಬೇರೆ ಮುಖ ಇರಲಿ ಎಂದು ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಹಾಸನದ ಹಳ್ಳಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖಂಡರು ನಮ್ಮದು ವಂಶ ಪಾರಂಪರಿಕ ಪಕ್ಷವೆಂದು ಟೀಕೆ ಮಾಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆ ಪಕ್ಷಕ್ಕೆ ಮತ್ತೆ ಏನೆಂದು ಕರೆಯಬೇಕು ಎಂದು ಕುಮಾರಸ್ವಾಮಿಯವರು ಹೇಳಬೇಕು. ಇದರ ನಡುವೆ ನಮ್ಮ ಸಿಸ್ಟರ್ ಭವಾನಿ ರೇವಣ್ಣ ಟಿಕೆಟ್‍ಗಾಗಿ ಹೋರಾಟ ಮಾಡಿದ್ದರು. ಮತದಾರರು ಇಂತಹ ಪಕ್ಷವನ್ನು ಬೆಂಬಲಿಸಬೇಕಾ ಎಂದು ಕುಟುಕಿದ್ದಾರೆ.
ಕನಕದಾಸ ಜಯಂತಿ ಘೋಷಣೆ ಹಾಗೂ ಕಾಗಿನೆಲೆ ಪ್ರತಿಷ್ಠಾನ ಮಾಡಿದ್ದು ಯಡಿಯೂರಪ್ಪನವರು. ಇದು ಕುರುಬರ ವೋಟಿಗಾಗಿ ಅಲ್ಲ. ಕನಕದಾಸರ ವಿಚಾರಧಾರೆ ಎಲ್ಲರಿಗೂ ತಲುಪಬೇಕು ಎಂದು ಈ ಅಭಿವೃದ್ಧಿ ಮಾಡಿದ್ದಾರೆ. ಇದೇ ರೀತಿ ಎಲ್ಲಾ ಸಮಾಜಗಳಿಗೂ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಆದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ಮಲ್ಲಿಕಾರ್ಜುನ ಖರ್ಗೆಯವರು ಇನ್ನೇನಾದರೂ ಸ್ಥಾನ ಪಡೆಯಲು ನಾಯಕರ ತೃಪ್ತಿಗಾಗಿ ನರೇಂದ್ರ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸುತ್ತಿದ್ದಾರೆ. ನಿಮ್ಮ ಬಾಯಲ್ಲಿ ಇಂತಹ ಮಾತುಗಳು ಬಂದ ಮೇಲೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಗುಡುಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


