ಸುಮಾರು 120ಕ್ಕೂ ಹೆಚ್ಚು ಸ್ತ್ರೀಯರ ಮೇಲೆ ಅತ್ಯಾಚಾರ ನಡೆಸಿದ್ದ ಜಿಲೇಬಿ ಬಾಬಾ ಅಲಿಯಸ್ ಅಮರ್ ವೀರ್ ನ ವಿರುದ್ಧ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ ಈತನ ಮೇಲೆ ಮೊದಲ ಬಾರಿಗೆ ಕೇಸ್ ದಾಖಲಾಯ್ತು. ಆದರೆ ಇದರಲ್ಲಿ ಈತ ಜಾಮೀನು ಪಡೆದುಕೊಂಡಿದ್ದ, 2018ರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದರಲ್ಲೂ ಬಾಬಾ ಜಮೀನು ಪಡೆದುಕೊಂಡಿದ್ದ. 2018ರಲ್ಲೇ ಮತ್ತೊಂದು ಅತ್ಯಾಚಾರ ಕೇಸ್ ಈತನ ಮೇಲೆ ದಾಖಲಾಗಿತ್ತು.
ಜಿಲೇಬಿ ಬಾಬಾನ ಅಶ್ಲೀಲ ವಿಡಿಯೋವೊಂದು ಹೊರ ಬಂದ ವೇಳೆ ಪೊಲೀಸರು ಈತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಆತನ ಆಶ್ರಮಕ್ಕೆ ದಾಳಿ ನಡೆಸಿದ ವೇಳೆ ಮಾದಕ ದ್ರವ್ಯ, ಮಾತ್ರೆಗಳು, ವಿಸಿಆರ್ ಮಾತ್ರವಲ್ಲದೇ ಆಕ್ಷೇಪಕಾರಿ ವಸ್ತುಗಳು ಪತ್ತೆಯಾಗಿದ್ದವು. ಬಾಬಾ ನ ಮೊಬೈಲ್ ಪಡೆದು ಪರಿಶೀಲಿಸಿದಾಗ ಸುಮಾರು 120 ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು.
ಈ ಕಾಮಿ ಬಾಬಾನ ಮೊಬೈಲ್ ನಲ್ಲಿದ್ದ 120 ವಿಡಿಯೋ ಒಬ್ಬರದ್ದಲ್ಲ, ಬದಲಾಗಿ 120 ಮಂದಿ ಬೇರೆ ಬೇರೆ ಮಹಿಳೆಯರದ್ದಾಗಿತ್ತು. ಬಾಲಕಿಯೋರ್ವಳ ಮೇಲೆ 2 ಬಾರಿ ಈತ ಅತ್ಯಾಚಾರ ನಡೆಸಿದ್ದ.
ಎಂತಹ ದೇವ ಮಾನವನಾದರೂ ಕಾನೂನಿನ ಮುಂದೆ ಶರಣಾಗಲೇ ಬೇಕು. ಇದೀಗ ದೇಶದ ಕಾನೂನು ಈತನಿಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ದೇವರನ್ನು ನಂಬಿ, ಆದರೆ, ನಾನು ದೇವರ ಅಸಿಸ್ಟೆಂಟ್ ಎಂದು ಹೇಳಿಕೊಳ್ಳುವವರ ಬಗ್ಗೆ ಎಚ್ಚರದಿಂದಿರುವುದು ಉತ್ತಮ. ಯಾವುದೇ ಪುರುಷರ ಬಳಿಕ ಹೆಣ್ಣು ಮಕ್ಕಳನ್ನು ಒಬ್ಬಂಟಿಯಾಗಿ ಕಳುಹಿಸಲು ಪೋಷಕರು ಮುಂದಾಗಬಾರದು. ಪ್ರತಿಯೊಬ್ಬರೂ ಮನುಷ್ಯರು, ಅನ್ನೋ ಅರಿವು ಹೆಣ್ಣು ಹೆತ್ತವರಿಗೆ ಇರಬೇಕು ಅನ್ನೋ ಮಾತುಗಳು ಇದೀಗ ಕೇಳಿ ಬಂದಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


