ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಮೋಹನ್, ಸಮಾಜ ಸೇವಕ ಬಿ.ಆರ್.ಶಶಿಧರ್ ಮತ್ತು ಸೋಮಶೇಖರ್ (ಕೆಇಬಿ) ಮಾತನಾಡಿದರು. ಆಯೋಜಕ ಮತ್ತು ಅಧ್ಯಕ್ಷ ಬಿ.ಟಿ.ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ, ಸದಸ್ಯ ರಮೇಶ್, ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ನಗರ ಕಾರ್ಯದರ್ಶಿ ಲೋಕೇಶ್, ಅಲ್ಪಸಂಖ್ಯಾತರ ಘಟಕದ ಅನ್ವರ್, ಎಪಿಎಂಸಿ ಮಾಜಿ ಸದಸ್ಯ ಶಿವಕುಮಾರ್ ಮುಖಂಡರಾದ ಲಿಂಗರಾಜ್, ಗಂಗಾಧರ್,ಸಂಗೀತ ರಮೇಶ್,ಈಶ್ವರಪ್ಪ, ಜಯಣ್ಣ, ರೋಟರಿ ನಿರ್ದೇಶಕ ಗವಿಯಣ್ಣ, ಲಕ್ಷ್ಮಿ ಕ್ರಿಕೆಟರ್ಸ್ ನ ಚಿರಂಜೀವಿ ಮತ್ತು ರವಿ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ಈ ಪಂದ್ಯಾವಳಿಗೆ ಸುಮಾರು ಇಪ್ಪತ್ತಾರು ತಂಡಗಳು ಭಾಗವಹಿಸಿದ್ದು, ಮೊದಲನೇ ಬಹುಮಾನ 10.000/- ರೂಗಳನ್ನು ಸಾರ್ಥವಳ್ಳಿಯ ಲಕ್ಷ್ಮಿ ಕ್ರಿಕೆಟರ್ಸ್ ತಂಡ, ದ್ವಿತೀಯ ಬಹುಮಾನ 7,000/-ರೂಗಳನ್ನು ತಿಪಟೂರು ಗಾಂಧಿನಗರ ಬಾಯ್ಸ್ ಹಾಗೂ ತೃತೀಯ ಬಹುಮಾನ 5,000/-ರೂಗಳನ್ನು ತಿಪಟೂರು Star ಕ್ರಿಕೆಟರ್ಸ್ ತಂಡ ಕ್ರಮವಾಗಿ ನಗದು ಮತ್ತು ಟ್ರೋಫಿಯನ್ನು ಹಾಗೂ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸರಣಿ ಶ್ರೇಷ್ಠ, ರನ್ನರ್, ಫೀಲ್ಡರ್ ಮತ್ತು ಬೌಲರ್ ಟ್ರೋಫಿ ನೀಡಿ, ಸನ್ಮಾನಿಸಲಾಯಿತು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz