ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ– ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಯ ಮಾಹಿತಿ:
NMHS ಸರ್ವೇ ಕೋಆರ್ಡಿನೇಟರ್ –1
NMHS ಸರ್ವೇ ಫೀಲ್ಡ್ ಡೇಟಾ ಕಲೆಕ್ಟರ್ –7
ಒಟ್ಟು 8 NMHS ಸರ್ವೇ ಫೀಲ್ಡ್ ಡೇಟಾ ಕಲೆಕ್ಟರ್, ಸರ್ವೇ ಕೋಆರ್ಡಿನೇಟರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂನ್ 22, 2024 ಅಂದರೆ ನಾಳೆ ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಿ.
ಶೈಕ್ಷಣಿಕ ಅರ್ಹತೆ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
NMHS ಸರ್ವೇ ಕೋಆರ್ಡಿನೇಟರ್ – 45 ವರ್ಷ
NMHS ಸರ್ವೇ ಫೀಲ್ಡ್ ಡೇಟಾ ಕಲೆಕ್ಟರ್ -40 ವರ್ಷ
ವೇತನ:
NMHS ಸರ್ವೇ ಕೋಆರ್ಡಿನೇಟರ್ -ಮಾಸಿಕ ₹ 55,000
NMHS ಸರ್ವೇ ಫೀಲ್ಡ್ ಡೇಟಾ ಕಲೆಕ್ಟರ್ -ಮಾಸಿಕ ₹ 45,000
ಉದ್ಯೋಗದ ಸ್ಥಳ:
ಬೆಂಗಳೂರು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
NBRC
4ನೇ ಮಹಡಿ
ನಿಮ್ಹಾನ್ಸ್
ಬೆಂಗಳೂರು-560029
ಕರ್ನಾಟಕ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 06/06/2024
ಸಂದರ್ಶನ ನಡೆಯುವ ದಿನ: ಜೂನ್ 22, 2024 ಬೆಳಗ್ಗೆ 10.30 ಗಂಟೆಗೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA